For Quick Alerts
  ALLOW NOTIFICATIONS  
  For Daily Alerts

  ಒಂದು ಕೋಟಿ ಜೀವನಾಂಶ ನೀಡಿ ಪತ್ನಿಯಿಂದ ವಿಚ್ಛೇದನ ಪಡೆದ ಗಾಯಕ ಹನಿಸಿಂಗ್!

  |

  ಖ್ಯಾತ ಪಂಜಾಬಿ ಹಾಗೂ ಬಾಲಿವುಡ್ ಗಾಯಕಿ ಯೋ ಯೋ ಹನಿಸಿಂಗ್ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ.

  ಕಳೆದ ವರ್ಷ ಶಾಲಿನಿ ತಲ್ವಾರ್, ಹನಿ ಸಿಂಗ್ ವಿರುದ್ಧ ಹಿಂಸಾಚಾರದ ಆರೋಪ ಮಾಡಿದ್ದರು. ಆದರೆ ಈ ಆರೋಪಗಳನ್ನು ಹನಿಸಿಂಗ್ ತಳ್ಳಿ ಹಾಕಿದ್ದರು. ಈ ಆರೋಪದ ಬಳಿಕ ವಿಚ್ಛೇದನ ಕೋರಿ ಹನಿಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು.

  Brahmastra First Review : 'ಬ್ರಹ್ಮಾಸ್ತ್ರ' ಮೂಲಕ ಮತ್ತೊಂದು ಫ್ಲಾಪ್‌ನತ್ತ ಬಾಲಿವುಡ್: ವಿಮರ್ಶಕ ಟೀಕೆBrahmastra First Review : 'ಬ್ರಹ್ಮಾಸ್ತ್ರ' ಮೂಲಕ ಮತ್ತೊಂದು ಫ್ಲಾಪ್‌ನತ್ತ ಬಾಲಿವುಡ್: ವಿಮರ್ಶಕ ಟೀಕೆ

  ನಿನ್ನೆ (ಸೆಪ್ಟೆಂಬರ್ 08) ದೆಹಲಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಎದುರು ಇಬ್ಬರು 'ಸೆಟಲ್‌ಮೆಂಟ್' ಮಾಡಿಕೊಂಡಿದ್ದು, ಶಾಲಿನಿ ತಲ್ವಾರ್‌ಗೆ ಒಂದು ಕೋಟಿ ರುಪಾಯಿ ಜೀವನಾಂಶವನ್ನು ಚೆಕ್ ಮೂಲಕ ನೀಡಿದ್ದಾರೆ.

  ಶಾಲಿನಿ ಹಾಗೂ ಹನಿ ಸಿಂಗ್ 2001 ರಲ್ಲಿ ವಿವಾಹವಾಗಿದ್ದರು. 21 ವರ್ಷ ಒಟ್ಟಿಗೆ ಸಂಸಾರ ನಡೆಸಿದ ಬಳಿಕ ಇದೀಗ ಬೇರಾಗಿದ್ದಾರೆ. ಈ ಹಿಂದೆ ಶಾಲಿನಿ ತಮ್ಮ ವಿರುದ್ಧ ದೈಹಿಕ ಹಿಂಸೆಯ ಆರೋಪ ಮಾಡಿದಾಗ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿದ್ದ ಹನಿ ಸಿಂಗ್, ಈ ಆರೋಪದಿಂದ ತಮಗೆ ತೀವ್ರ ಆಘಾತವಾಗಿದೆ ಎಂದಿದ್ದರು. ಈ ಹಿಂದೆ ಎಂದೂ ನಾನು ಮಾಧ್ಯಮ ಹೇಳಿಕೆಯನ್ನಾಗಲಿ, ಬಹಿರಂಗ ಪತ್ರಗಳನ್ನಾಗಲಿ ಬರೆದಿಲ್ಲ. ಆದರೆ ಶಾಲಿನಿ, ನನ್ನ ಕುಟುಂಬದ ಬಗ್ಗೆ ಆರೋಪ ಮಾಡಿದ್ದರಿಂದ ಈ ಹೇಳಿಕೆ ಹೊರಡಿಸುತ್ತಿದ್ದೇನೆ'' ಎಂದಿದ್ದರು.

  ''ನಾನು ಹದಿನೈದು ವರ್ಷಗಳಿಂದಲೂ ಸಿನಿಮಾ ಹಾಗೂ ಸಂಗೀತ ಉದ್ಯಮದಲ್ಲಿದ್ದೇನೆ. ನನ್ನ ಹಾಗೂ ನನ್ನ ಪತ್ನಿಯ ಸಂಬಂಧದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ನಾನು ಎಲ್ಲಿಗೇ ಶೂಟಿಂಗ್‌ಗೆ ಹೋದರು ಪತ್ನಿಯನ್ನು ತಪ್ಪದೆ ಕರೆದುಕೊಂಡು ಹೋಗುತ್ತೇನೆ. ಖಾಸಗಿ ಇವೆಂಟ್‌ಗಳು, ಮೀಟಿಂಗ್‌ಗಳಿಗೆ ಸಹ ಆಕೆಯನ್ನು ನಾನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಆದರೆ ಈಗ ಅವರು ಮಾಡಿರುವ ಆರೋಪ ಆಧಾರರಿಹತವಾದುದು. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿರುವ ಕಾರಣ ನಾನು ಹೆಚ್ಚಿಗೇನೂ ಹೇಳುವುದಿಲ್ಲ'' ಎಂದಿದ್ದರು ಹನಿ ಸಿಂಗ್. ಆದರೆ ಅಂತಿಮವಾಗಿ ಇದೀಗ ವಿಚ್ಛೇದನ ಖಾತ್ರಿಯಾಗಿದೆ.

  English summary
  Punjabi singer Yo Yo Honey Singh took divorce from wife Shalini Talwar by giving 1 Crore rs alimony.
  Saturday, September 10, 2022, 10:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X