»   » ಜಸ್ಟಿನ್ ಬೀಬರ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಕ್ಯಾಟಿ ಪೆರ್ರಿ!

ಜಸ್ಟಿನ್ ಬೀಬರ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಕ್ಯಾಟಿ ಪೆರ್ರಿ!

Posted By:
Subscribe to Filmibeat Kannada

ಅಮೆರಿಕದ ಗಾಯಕಿ ಮತ್ತು ಸಾಂಗ್ ರೈಟರ್ ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ ಗಳನ್ನು ಗಳಿಸಿದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 10 ಕೋಟಿ ಫಾಲೋವರ್ ಗಳನ್ನು ಹೊಂದಿರುವುದಕ್ಕೆ ಟ್ವಿಟ್ಟರ್ ಕಂಪನಿ ಸಂತೋಷದಿಂದ ಇತಿಹಾಸಕ್ಕೆ ಕಾರಣವಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಆಕೆ 2009 ರಲ್ಲಿ ಪ್ರವೇಶ ಆದಾಗಿನಿಂದ ಇಲ್ಲಿಯವರೆಗಿನ ಟ್ವೀಟ್ ಮತ್ತು ಶೇರ್ ಮಾಡಿರುವ ವಿಡಿಯೋಗಳೆಲ್ಲವನ್ನು ಹೊಂದಿಸಿ ಒಂದು ವಿಡಿಯೋ ಮಾಡಿ ಕ್ಯಾಟಿ ಪೆರ್ರಿಗೆ ಮೆಸೇಜ್ ಕಳಿಸಿದೆ. ಇದಕ್ಕೆ ಕ್ಯಾಟಿ ಪೆರ್ರಿ ಸಹ ಧನ್ಯವಾದಗಳನ್ನು ಹೇಳಿದ್ದಾರೆ.

Singer Katy Perry is first to 100m Twitter followers

ಇನ್ನೂ ಪಾಪ್ ತಾರೆ ಜಸ್ಟಿನ್ ಬೀಬರ್ ಟ್ವಿಟ್ಟರ್ ನಲ್ಲಿ ಎರಡನೇ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ. ಜಸ್ಟಿನ್ ಬೈಬರ್ 96.8 ಮಿಲಿಯನ್ ಫಾಲೋವರ್ ಗಳನ್ನು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ರವರು 90.9 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಇವರುಗಳನ್ನು ಹಿಂದಿಕ್ಕಿ ಕ್ಯಾಟಿ ಪೆರ್ರಿ ಹೆಚ್ಚು ಫಾಲೋವರ್ ಗಳನ್ನು ಗಳಿಸಿರುವುದು ಈಗ ಇತಿಹಾಸ ಸೃಷ್ಟಿಸಿದಂತಾಗಿದೆ.

ಟ್ವಿಟ್ಟರ್ ನಲ್ಲಿ ಅತಿಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಟಾಪ್ 100 ಖಾತೆಗಳಲ್ಲಿ ಸಿಂಗರ್‌ ಗಳು, ಕ್ರೀಡಾಪಟುಗಳು, ಮೀಡಿಯಾ ಕಂಪನಿಗಳು ಮತ್ತು ಕೆಲವು ಪೊಲಿಟಿಶೀಯನ್ ಗಳು ಇರುವುದಾಗಿ ಟ್ವಿಟ್ಟರ್ ಕೌಂಟರ್ ವೆಬ್ ಸೈಟ್ ನಿಂದ ತಿಳಿದಿದೆ.

English summary
The US singer-songwriter Katy Perry has become the first person to reach 100m followers on Twitter. Katy Perry beats Bieber and Donald Trump to top 100m Twitter followers

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada