Don't Miss!
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಸ್ಟಿನ್ ಬೀಬರ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಕ್ಯಾಟಿ ಪೆರ್ರಿ!
ಅಮೆರಿಕದ ಗಾಯಕಿ ಮತ್ತು ಸಾಂಗ್ ರೈಟರ್ ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ ಗಳನ್ನು ಗಳಿಸಿದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ಕ್ಯಾಟಿ ಪೆರ್ರಿ ಟ್ವಿಟ್ಟರ್ ನಲ್ಲಿ 10 ಕೋಟಿ ಫಾಲೋವರ್ ಗಳನ್ನು ಹೊಂದಿರುವುದಕ್ಕೆ ಟ್ವಿಟ್ಟರ್ ಕಂಪನಿ ಸಂತೋಷದಿಂದ ಇತಿಹಾಸಕ್ಕೆ ಕಾರಣವಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಆಕೆ 2009 ರಲ್ಲಿ ಪ್ರವೇಶ ಆದಾಗಿನಿಂದ ಇಲ್ಲಿಯವರೆಗಿನ ಟ್ವೀಟ್ ಮತ್ತು ಶೇರ್ ಮಾಡಿರುವ ವಿಡಿಯೋಗಳೆಲ್ಲವನ್ನು ಹೊಂದಿಸಿ ಒಂದು ವಿಡಿಯೋ ಮಾಡಿ ಕ್ಯಾಟಿ ಪೆರ್ರಿಗೆ ಮೆಸೇಜ್ ಕಳಿಸಿದೆ. ಇದಕ್ಕೆ ಕ್ಯಾಟಿ ಪೆರ್ರಿ ಸಹ ಧನ್ಯವಾದಗಳನ್ನು ಹೇಳಿದ್ದಾರೆ.
ಇನ್ನೂ ಪಾಪ್ ತಾರೆ ಜಸ್ಟಿನ್ ಬೀಬರ್ ಟ್ವಿಟ್ಟರ್ ನಲ್ಲಿ ಎರಡನೇ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ. ಜಸ್ಟಿನ್ ಬೈಬರ್ 96.8 ಮಿಲಿಯನ್ ಫಾಲೋವರ್ ಗಳನ್ನು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ರವರು 90.9 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಇವರುಗಳನ್ನು ಹಿಂದಿಕ್ಕಿ ಕ್ಯಾಟಿ ಪೆರ್ರಿ ಹೆಚ್ಚು ಫಾಲೋವರ್ ಗಳನ್ನು ಗಳಿಸಿರುವುದು ಈಗ ಇತಿಹಾಸ ಸೃಷ್ಟಿಸಿದಂತಾಗಿದೆ.
Today, we #WITNESS history.
— Twitter (@Twitter) June 16, 2017
Congratulations @katyperry, the first to reach 100 million followers! #LoveKaty pic.twitter.com/41aJyPTtZ2
ಟ್ವಿಟ್ಟರ್ ನಲ್ಲಿ ಅತಿಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಟಾಪ್ 100 ಖಾತೆಗಳಲ್ಲಿ ಸಿಂಗರ್ ಗಳು, ಕ್ರೀಡಾಪಟುಗಳು, ಮೀಡಿಯಾ ಕಂಪನಿಗಳು ಮತ್ತು ಕೆಲವು ಪೊಲಿಟಿಶೀಯನ್ ಗಳು ಇರುವುದಾಗಿ ಟ್ವಿಟ್ಟರ್ ಕೌಂಟರ್ ವೆಬ್ ಸೈಟ್ ನಿಂದ ತಿಳಿದಿದೆ.