ಗಾಯಕ ಕೆಕೆ ಅವ್ರ ಕನ್ನಡ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ!

ಗಾಯಕ ಕೃಷ್ಣಕುಮಾರ್ ಕುನ್ನತ್ ಇನ್ನಿಲ್ಲ. ಕೆಕೆ ಎಂದೇ ಖ್ಯಾತಿ ಪಡೆದಿದ್ದರು. ಕೆಕೆ ಅವರ ಗಾಯನಕ್ಕೆ ಮರುಳಾಗದವರಿಲ್ಲ. ಕೆಕೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಕೂಡ ಕೆಕೆ ಹಲವು ಹಿಟ್ ಹಾಡುಗಳನ್ನು ಹಾಡಿದ್ದಾರೆ. ಕೃಷ್ಣಕುಮಾರ್ ಕುನ್ನತ್ ಕನ್ನಡದಲ್ಲಿ ಹಾಡಿರುವ ಬಹುತೇಕ ಹಾಡುಗಳು ಹಿಟ್ ಲಿಸ್ಟ್ ಸೇರಿಕೊಂಡಿವೆ.

ಕನ್ನಡದಲ್ಲೂ ಕೂಡ ಕೆಕೆ ಅವರು ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಅವರು ಹಾಡಿರುವು ಹೆಚ್ಚು ಮೆಲೋಡಿ ಮತ್ತು ಲವ್ ಹಾಡುಗಳು. ಇನ್ನು ಕೆಲವೊಂದು ಹಾಡುಗಳನ್ನು ಕೇಳಿದರೆ ಅರೆ ಇದು ವರೇ ಹಾಡಿದ್ದ ಎಂದು ಅಚ್ಚರಿ ಆಗುತ್ತದೆ. ಅಷ್ಟರ ಮಟ್ಟಿಗೆ ಅದ್ಭುತವಾಗಿ ಹಾಡಿದ್ದಾರೆ.

ಲವ್ ಸಾಂಗ್ ಮತ್ತು ಮೆಲೋಡಿ ಹಾಡುಗಳಿಗೆ ಕೃಷ್ಣ ಕುಮಾರ್ ಅವರ ಧ್ವನಿ ಹೇಳಿಮಾಡಿಸಿದ್ದು. ಕನ್ನಡದಲ್ಲಿ ಇವರು ಹಾಡಿರುವ ಬಹುತೇಕ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಲಿಸ್ಟ್ ಸೇರಿವೆ. ಅಂತಹ ಕೆಲವು ಕನ್ನಡದ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ ಮುಂದೆ ಓದಿ...

'ನಡೆದಾಡುವ ಕಾಮನ ಬಿಲ್ಲಿ'ಗೆ ಜೀವ ತುಂಬಿದ್ದ ಕೆಕೆ!

'ನಡೆದಾಡುವ ಕಾಮನ ಬಿಲ್ಲಿ'ಗೆ ಜೀವ ತುಂಬಿದ್ದ ಕೆಕೆ!

1. ಏಳು ಬಣ್ಣದ ಪ್ರೀತಿ ಇದು: 2004ರಲ್ಲಿ ತೆರೆಕಂಡ 'ಲವ್' ಸಿನಿಮಾದ ಹಾಡಿದು. ನಟ ಆದಿತ್ಯ ಮತ್ತು ರಕ್ಷಿತಾ ಜೊತೆಯಾಗಿ ನಟಿಸಿದ ಸಿನಿಮಾ.
2. ನಡೆದಾಡುವ ಕಾಮನ ಬಿಲ್ಲು: ಈ ಹಾಡು ನಟ ತರುಣ್ ಮತ್ತು ರೇಖಾ ಅಭಿನಯದ 'ಪರಿಚಯ' ಸಿನಿಮಾದ ಹಾಡು.
3. ಸ್ನೇಹ ಎಂಬುದು: 2014ರಲ್ಲಿ ಬಂದ 'ಬಹುಪರಾಕ್' ಚಿತ್ರದ ಹಾಡು
4. ಕಣ್ಣ ಹನಿಯೊಂದಿಗೆ: ದಿಗಂತ್ ಮತ್ತು ಐಂದ್ರಿತಾ ರೇ ಅಭಿನಯದ 'ಮನಸಾರೆ' ಸಿನಿಮಾದ ಹಾಡು.

ಹುಬ್ಬಳಿಯ ಶೆಹೆರದಾಗ ಹಾಡು ಹಾಡಿದ್ದು ಕೆಕೆ!

ಹುಬ್ಬಳಿಯ ಶೆಹೆರದಾಗ ಹಾಡು ಹಾಡಿದ್ದು ಕೆಕೆ!

5. ವಿದಾಯದ ವೇಳೆಯಲಿ: 'ಮಳೆ ಬರಲಿ ಮಂಜು' ಇರಲಿ ಚಿತ್ರದ ಹಾಡು.
6. ಒಂದು ಹಾಡು ಮೆಲ್ಲ: ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ಚಿತ್ರದ ಹಾಡು
7. ಹುಬ್ಬಳ್ಳಿಯ ಶೆಹೆರದಾಗ: 2005ರಲ್ಲಿ ಅಣ್ಣ ತಂಗಿ ಚಿತ್ರದ ಹಿಟ್ ಹಾಡು
8. ಮಾರ್‌ಗಯೋರೇ: 'ಲವ್' ಸಿನಿಮಾದ ಹಾಡು

ಕನ್ನಡಕ್ಕೆ ಹಿಟ್ ಹಾಡುಗಳನ್ನು ಕೊಟ್ಟ ಕೆಕೆ!

ಕನ್ನಡಕ್ಕೆ ಹಿಟ್ ಹಾಡುಗಳನ್ನು ಕೊಟ್ಟ ಕೆಕೆ!

ಕೃಷ್ಣಕುಮಾರ್ ಕುನ್ನತ್ ಸೌತ್ ಸಿನಿಮಾರಂಗದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಕೂಡ ಹೆಸರಾಂತ ಗೀತೆಗಳನ್ನು ಹಾಡಿದ್ದು, ಅವು ಎವರ್‌ಗ್ರೀನ್ ಹಾಡುಗಳಾಗಿ ಉಳಿದು ಬಿಟ್ಟಿವೆ. ಏಳು ಬಣ್ಣದ ಪ್ರೀತಿ ಇದು. ಹುಬ್ಬಳ್ಳಿಯ ಶೆಹರಾದಾಗ ಅಂತಹ ಹಾಡುಗಳು ಈಗಲೂ ಬಹುತೇಕರು ಗುನುಗುತ್ತಾ ಇರುತ್ತಾರೆ. ಅಷ್ಟು ಸ್ಪಷ್ಟವಾಗಿ ಕನ್ನಡ ಹಾಡುಗಳನ್ನು ಕೆಕೆ ಹಾಡಿದ್ದಾರೆ.

ಹಾಡುತ್ತಲೇ ಹಾರಿಹೋಯ್ತು ಕೆಕೆ ಜೀವ!

ಹಾಡುತ್ತಲೇ ಹಾರಿಹೋಯ್ತು ಕೆಕೆ ಜೀವ!

ಕೋಲ್ಕತ್ತಾದ ವಿವೇಕಾನಂದ ಕಾಲೇಜಿನ ಕಾರ್ಯಕ್ರಮದ ಭಾಗವಾಗಿ ನಜ್ರುಲ್ ಮಂಚ್‌ನಲ್ಲಿ ಲೈವ್ ಸಂಗೀತ ಸಂಜೆಯಲ್ಲಿ ಕೆಕೆ ಪಾಲ್ಗೊಂಡಿದ್ದರು. ಗಾಯನದ ನಡುವೆ ಅಸ್ವಸ್ಥರಾಗಿ ಕುಸಿದ ಗಾಯಕ ಕೆಕೆರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

More from Filmibeat

English summary
Singer KK Dies At 53 KK Top Hit Kannada Songs List, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X