»   » ಗಾಯಕ ಎಲ್ ಎನ್ ಶಾಸ್ತ್ರಿ ಹಾಡಿದ್ದ ಕೊನೆಯ ಹಾಡು ಇದು

ಗಾಯಕ ಎಲ್ ಎನ್ ಶಾಸ್ತ್ರಿ ಹಾಡಿದ್ದ ಕೊನೆಯ ಹಾಡು ಇದು

Posted By:
Subscribe to Filmibeat Kannada
Kannada singer : Late LN shastri last song released | Filmibeat Kannada

ಕನ್ನಡದ ಜನಪ್ರಿಯ ಗಾಯಕ ಎಲ್ ಎನ್ ಶಾಸ್ತ್ರಿ ಕೆಲ ತಿಂಗಳುಗಳ ಹಿಂದೆ ವಿಧಿವಶರಾಗಿದ್ದರು. ಆದರೆ ಅವರ ಕೊನೆಯ ಹಾಡು ಇದೀಗ ಬಿಡುಗಡೆಯಾಗಿದೆ. 'ಇಲ್ಲ' ಎಂಬ ಸಿನಿಮಾದ ಹಾಡೊಂದು ಇತ್ತೀಚಿಗಷ್ಟೆ ರಿಲೀಸ್ ಆಗಿದೆ.

ಸ್ವರ ನಿಲ್ಲಿಸಿದ ಗಾನ ಕೋಗಿಲೆ ಎಲ್.ಎನ್.ಶಾಸ್ತ್ರಿಗೆ ರೇಖಾ ರಾಣಿ ನುಡಿ ನಮನ

'ಇಲ್ಲ' ಎಂಬ ವಿಭಿನ್ನ ಸಿನಿಮಾದಲ್ಲಿ ಎಲ್ ಎನ್ ಶಾಸ್ತ್ರಿ ಅವರು 'ಐ ಡೋಂಟ್ ನೋ ಇಂಗ್ಲೀಷ್..' ಎನ್ನುವ ಹಾಡಿಗೆ ಧ್ವನಿಯಾಗಿದ್ದರು. ಇದು ಅವರ ಕೊನೆಯ ಹಾಡಾಗಿದ್ದು, ಹಾಡಿಗೆ ಈಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆಯಂತೆ. 3 ನಿಮಿಷ 20 ಸೆಕೆಂಡ್ ಇರುವ ಈ ಹಾಡು ಕನ್ನಡ‌ ಅಭಿಮಾನಿಗಳನ್ನು ಸಿನಿಮಾದತ್ತ ಆಕರ್ಷಿಸುತ್ತಿದೆ. C music ಕಂಪನಿ ಆಡಿಯೋ ರೈಟ್ಸ್ ಪಡೆದುಕೊಂಡಿದೆ.

Singer Late L.N.Shastri's last song released

ಅಂದಹಾಗೆ, ಈ ಹಾಡಿಗೆ ಪವನ್ ಪಾಥ್ ಸಂಗೀತ ನೀಡಿದ್ದಾರೆ. ರಾಜ್‌ಪ್ರಭು ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಹಾಡನ್ನು ಅವರೇ ಬರೆದಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ರಾಜ್‌ಪ್ರಭು ನಾಯಕನಾಗಿದ್ದಾರೆ. ನಿರ್ಮಾಪಕ ಸುಶಾಂತ್ ಬಂಡವಾಳ ಹೂಡಿದ್ದು, ಈ ಸಿನಿಮಾ ವರ್ಷದ ಕೊನೆಯಲ್ಲಿ ಬಿಡುಗಡೆ ಆಗಲಿದೆ.

English summary
Kannada Singer Late L.N.Shastri's last song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada