ಸಂಭಾವನೆ ಹೆಚ್ಚಿಸಿಕೊಂಡ ಗಾಯಕಿ ಮಂಗ್ಲಿ! ಒಂದು ಹಾಡಿಗೆ ಈಗೆಷ್ಟು?

By ಫಿಲ್ಮಿಬೀಟ್ ಡೆಸ್ಕ್

ತೀರ ಬಡ ಕುಟುಂಬದಿಂದ ಬಂದು ಇಂದು ಜನಪ್ರಿಯ ಗಾಯಕಿಯಾಗಿದ್ದಾರೆ ಮಂಗ್ಲಿ. ಜನಪದ ಹಾಡುಗಳನ್ನು ಹಾಡುತ್ತಾ ಮುನ್ನೆಲೆಗೆ ಬಂದ ಮಂಗ್ಲಿ ಇಂದು ಹಲವು ಭಾಷೆಗಳ ಸಿನಿಮಾಗಳಿಗೆ ಹಾಡುತ್ತಿದ್ದಾರೆ ಮಾತ್ರವಲ್ಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ತೀರ ಕಡಿಮೆ ಸಂಭಾವನೆಗೆ ಟಿವಿಗಳಲ್ಲಿ ಹಾಸ್ಯ ಕಾರ್ಯಕ್ರಮ ಮಾಡುತ್ತಿದ್ದ, ನಿರೂಪಣೆ ಮಾಡುತ್ತಿದ್ದ ಮಂಗ್ಲಿ ಈಗ ಖ್ಯಾತ ಗಾಯಕಿ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಂಗ್ಲಿ ತಮ್ಮ ಸಂಭಾವನೆ ಸಹ ಹೆಚ್ಚಿಸಿಕೊಂಡಿದ್ದಾರೆ ಮಂಗ್ಲಿ.

ಟಿವಿ ಶೋಗಳು, ಆ ಬಳಿಕ ತೆಲಂಗಾಣ ಜನಪದ ಹಾಡುಗಳು, ಜಾತ್ರೆ ಹಾಡುಗಳು, 'ಬತುಕಮ್ಮ ಪಾಟಲು', 'ಬೋನಾಲು' ಹಾಡುಗಳು, 'ಸಂಕ್ರಾಂತಿ' ಹಾಡುಗಳು, 'ಸಮಕ್ಕ, ಸಾರಕ್ಕ' ಜಾತ್ರೆ ಹಾಡುಗಳ ಮೂಲಕ ಜನಪ್ರಿಯಗೊಂಡ ಮಂಗ್ಲಿ ಆ ನಂತರ ಬಹಳ ವೇಗವಾಗಿ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಪಡೆದುಕೊಂಡರು.

Singer Mangli Hiked Her Remuneration For Singing

ತೆಲುಗು, ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಹಲವು ಜನಪ್ರಿಯ ಹಾಡುಗಳನ್ನು ಮಂಗ್ಲಿ ಈಗಾಗಲೇ ಹಾಡಿದ್ದು, ಕರ್ನಾಟಕ ಸೇರಿದಂತೆ ಹಲವು ಕಡೆ ಲೈವ್ ಶೋಗಳನ್ನು ಸಹ ನೀಡಿದ್ದಾರೆ. ವಿದೇಶದಲ್ಲಿಯೂ ಮಂಗ್ಲಿ ತಮ್ಮ ಹಾಡಿನ ಲೈವ್ ಶೋ ನೀಡಿದ್ದಾರೆ.

ಈ ಮೊದಲು ಪ್ರತಿ ಹಾಡಿಗೆ ಕೇವಲ 20,000 ರುಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ಗಾಯಕಿ ಮಂಗ್ಲಿ ಇತ್ತೀಚೆಗೆ ತಮಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹಾಡೊಂದಕ್ಕೆ 2 ಲಕ್ಷ ಸಂಭಾವನೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ತಮ್ಮ ಲೈವ್ ಶೋಗಳ ಸಂಭಾವನೆಯನ್ನೂ ಸಹ ದೊಡ್ಡ ಮಟ್ಟದಲ್ಲಿ ಮಂಗ್ಲಿ ಏರಿಸಿದ್ದಾರೆ.

ಹಾಡು ಹಾಡುವುದು ಮಾತ್ರವೇ ಅಲ್ಲದೆ ಸಿನಿಮಾಗಳಲ್ಲಿ ನಟನೆಯನ್ನೂ ಸಹ ಮಂಗ್ಲಿ ಆರಂಭಿಸಿದ್ದಾರೆ. ತೆಲುಗಿನಲ್ಲಿ ಈಗಾಗಲೇ 'ಸ್ವೇಚ್ಛ', 'ಗುವಾ ಗೋರಿಂಕ', 'ಮ್ಯಾಸ್ಟ್ರೊ' ಇನ್ನೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸಹ ಹೊಸ ಸಿನಿಮಾದಲ್ಲಿಯೂ ಮಂಗ್ಲಿ ನಟಿಸಲು ತಯಾರಾಗಿದ್ದು, ಮಂಗ್ಲಿ ನಟಿಸಲಿರುವ ಕನ್ನಡ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್ ನಾಯಕ! ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

ದರ್ಶನ್ ನಟನೆಯ 'ರಾಬರ್ಟ್' ಕನ್ನಡ ಸಿನಿಮಾದ ತೆಲುಗು ಆವೃತ್ತಿಗಾಗಿ 'ಕಣ್ಣೇ ಅಧಿರಿಂದಿ' ಹಾಡನ್ನು ಮಂಗ್ಲಿ ಹಾಡಿದ್ದರು. ಆ ಹಾಡು ಭಾರಿ ಹಿಟ್ ಆದ ಬೆನ್ನಲ್ಲೆ ಕನ್ನಡದಲ್ಲಿ ಮಂಗ್ಲಿಗೆ ದೊಡ್ಡ ಮಟ್ಟದ ಬೇಡಿಕೆ ಕುದುರಿತು. ಆ ಹಾಡಿನ ಬಳಿಕ ಹಲವು ಕನ್ನಡ ಹಾಡುಗಳನ್ನು ಮಂಗ್ಲಿ ಹಾಡಿದ್ದಾರೆ. 'ಏಕ್ ಲವ್ ಯಾ' ಸಿನಿಮಾಕ್ಕಾಗಿ ಮಂಗ್ಲಿ ಹಾಡಿರುವ ಹಾಡು ಬಹಳ ಜನಪ್ರಿಯವಾಗಿದೆ. ಇತ್ತೀಚೆಗಷ್ಟೆ ಕನ್ನಡದಲ್ಲಿ ಲೈವ್ ಕಾರ್ಯಕ್ರಮಗಳಿಗೂ ಮಂಗ್ಲಿಗೆ ಬೇಡಿಕೆ ಶುರುವಾಗಿದೆ.

More from Filmibeat

English summary
Singer Mangli hiked her remuneration for singing. She now charging 2 lakh per song. She acting in movies also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X