twitter
    For Quick Alerts
    ALLOW NOTIFICATIONS  
    For Daily Alerts

    ವಿವಾದಕ್ಕೆ ಸಿಲುಕಿದ 'ರಾಬರ್ಟ್' ಮಂಗ್ಲಿಯ ಹೊಸ ಹಾಡು

    |

    ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನ 'ಕಣ್ಣೇ ಅಧಿರಿಂದಿ' ಹಾಡಿನ ಮೂಲಕ ದೊಡ್ಡ ಖ್ಯಾತಿಗಳಿಸಿದ ಗಾಯಕಿ ಮಂಗ್ಲಿಯ ಹೊಸ ಹಾಡೊಂದು ವಿವಾದಕ್ಕೆ ಸಿಲುಕಿದೆ.

    ನಿರೂಪಕಿ ಆಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ, ಜನಪದ ಗಾಯಕಿಯಾಗಿ ನಂತರ ಸಿನಿಮಾ ಹಾಡುಗಳ ಗಾಯಕಿಯಾದ ಮಂಗ್ಲಿ ಕಷ್ಟಪಟ್ಟು ಜನಪ್ರಿಯತೆ ಗಳಿಸಿಕೊಂಡವರು. ಅವರ ಜನಪದ ಶೈಲಿಯ ಹಾಡುಗಳು ತೆಲುಗು ರಾಜ್ಯಗಳಲ್ಲಿ ಮನೆ ಮಾತು.

    ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಗೆದ್ದ ಮುಳ್ಳಿನ ಹಾದಿಯ ಪಯಣ

    ಸಿನಿಮಾ ಹಾಡುಗಳು ಎಷ್ಟೇ ಹಿಟ್ ಆದರೂ ಜನಪದ ಶೈಲಿಯ ಹಾಡುಗಳನ್ನು ಹಾಡುವುದು ಮಂಗ್ಲಿ ಬಿಡುವುದಿಲ್ಲ. ತೆಲುಗು ಸಂಸ್ಕೃತಿಯ ಯಾವುದೇ ಹಬ್ಬ ಬಂತೆಂದರೆ ಅದಕ್ಕೆ ಸೂಕ್ತವಾಗುವ ಜನಪದ ಹಾಡೊಂದನ್ನು ಹಾಡಿ ವಿಡಿಯೋ ಬಿಡುಗಡೆ ಮಾಡುತ್ತಾ ಬರುತ್ತಿದ್ದಾರೆ ಮಂಗ್ಲಿ. ಹಾಗೆಯೇ ಇದೀಗ ತೆಲುಗು ರಾಜ್ಯಗಳಲ್ಲಿ 'ಬೋನಾಲು ಪಂಡುಗ'ದ ಸಮಯ. ಇದಕ್ಕೆ ತಕ್ಕಂತೆ ಹಾಡೊಂದನ್ನು ಮಂಗ್ಲಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ಹಾಡು ವಿವಾದಕ್ಕೆ ಕಾರಣವಾಗಿದೆ.

    ಮೈಸಮ್ಮ ದೇವಿ ಭಕ್ತರಿಂದ ತಕರಾರು

    ಮೈಸಮ್ಮ ದೇವಿ ಭಕ್ತರಿಂದ ತಕರಾರು

    'ಬೋನಾಲು' ಹಾಡಿನಲ್ಲಿನ ಕೆಲವು ಸಾಲುಗಳ ಬಗ್ಗೆ ಗ್ರಾಮ ದೇವತೆ ಮೈಸಮ್ಮ ಭಕ್ತರು ತಕರಾರು ಎತ್ತಿದ್ದಾರೆ. ಹಾಡಿನಲ್ಲಿನ ಕೆಲವು ಸಾಲುಗಳು ದೇವಿಯ ಮಹಿಮೆಯನ್ನು ವಿಮರ್ಶೆ ಮಾಡುವ ರೀತಿಯಾಗಿವೆ. ದೇವಿಯನ್ನು ಬೈಯ್ಯುವ ರೀತಿಯಲ್ಲಿ ಇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

    ದೇವಿಯ ಬಗ್ಗೆ ದೂರು ಹೇಳುತ್ತಿರುವ ಭಕ್ತರು

    ದೇವಿಯ ಬಗ್ಗೆ ದೂರು ಹೇಳುತ್ತಿರುವ ಭಕ್ತರು

    'ಮರದ ಕೆಳಗೆ ಸಂಬಂಧಿಗಳಂತೆ ಕೂತುಬಿಟ್ಟಿದ್ದೀಯ', 'ಬೊಂಬೆಯಂತೆ ಅಲುಗದೇ ಇದ್ದೀಯ' ಎಂಬಿತ್ಯಾದಿ ಸಾಲುಗಳು ಹಾಡಿನಲ್ಲಿವೆ. ಈ ಸಾಲುಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿವೆ. ದೇವಿಯು, ಭಕ್ತರನ್ನು ಕಾಯುವ ಕಾರ್ಯವನ್ನು ಮಾಡದೆ ಸುಮ್ಮನೆ ಇದ್ದುಬಿಟ್ಟಿದ್ದಾಳೆ ಎಂಬ ಅರ್ಥ ಬರುವ ಸಾಲುಗಳು ಹಾಡಿನಲ್ಲಿದ್ದು ಅದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಆದರೆ ಈ ರೀತಿ ಭಕ್ತರು ದೇವರೊಂದಿಗೆ ಜಗಳವಾಡುವ, ಪ್ರೀತಿಯಿಂದ ಬೈಯ್ಯುವ ಹಾಡುಗಳು ಜನಪದದಲ್ಲಿ ಸಾಕಷ್ಟಿವೆ.

    ಆಫ್ರಿಕನ್ ಪ್ರಜೆಯನ್ನು ಬಳಸಿದ್ದಕ್ಕೂ ಆಕ್ಷೇಪ

    ಆಫ್ರಿಕನ್ ಪ್ರಜೆಯನ್ನು ಬಳಸಿದ್ದಕ್ಕೂ ಆಕ್ಷೇಪ

    ಮಂಗ್ಲಿ, ಇನ್ನೂ ಕೆಲವರೊಂದಿಗೆ ಸೇರಿಕೊಂಡು ಹಾಡಿಗೆ ನೃತ್ಯ ಮಾಡಿದ್ದಾರೆ. ಇದಕ್ಕೂ ಆಕ್ಷೇಪಣೆ ವ್ಯಕ್ತವಾಗಿದೆ. ನೃತ್ಯ ಮಾಡುವುದು ಸಂಸ್ಕೃತಿಯಲ್ಲ ಎಂದು ಕೆಲವರು ಕೊಂಕು ನುಡಿದಿದ್ದಾರೆ. ಹಾಡಿನಲ್ಲಿ ಆಫ್ರಿಕನ್ ಪ್ರಜೆಯೊಬ್ಬನನ್ನು ಬಳಸಿಕೊಳ್ಳಲಾಗಿದ್ದು, ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    Recommended Video

    ಮೂರೂ ಬಿಟ್ಟವರ ಹತ್ರ ನಾನ್ಯಾಕ್ ಮಾತಾಡಬೇಕು? | Indrajit Lankesh | Filmibeat Kannada
    44 ಲಕ್ಷಕ್ಕೂ ಹೆಚ್ಚು ಮಂದಿಯಿಂದ ವೀಕ್ಷಣೆ

    44 ಲಕ್ಷಕ್ಕೂ ಹೆಚ್ಚು ಮಂದಿಯಿಂದ ವೀಕ್ಷಣೆ

    ಆರೋಪಗಳಿಗೆ ಮಂಗ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಹಾಡನ್ನು 44 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಹಾಡಿಗೆ ಸಾಹಿತ್ಯವನ್ನು ರಾಮಸ್ವಾಮಿ ಬೆರದಿದ್ದಾರೆ, ಹಾಡಿರುವುದು ಮಂಗ್ಲಿ, ಸಂಗೀತ ಸಂಯೋಜನೆ ರಾಕೇಶ್ ವೆಂಕಟಾಪುರ, ನೃತ್ಯ ನಿರ್ದೇಶನ ಢೀ ಖ್ಯಾತಿಯ ಪಂಡು, ನಿರ್ದೇಶನ ದಾಮು ರೆಡ್ಡಿ ಮಾಡಿದ್ದಾರೆ.

    English summary
    Singer Mangli's new song Bonam Pata is in controversy. Some people alleged that lyrics of the song is insulting goddess Mysamma.
    Monday, July 19, 2021, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X