For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ನಂತರ ಮತ್ತೊಂದು ದೊಡ್ಡ ಚಿತ್ರದಲ್ಲಿ ಮಂಗ್ಲಿ ಗಾನ

  |

  'ರಾಬರ್ಟ್' ಸಿನಿಮಾದ ಸಕ್ಸಸ್ ನಂತರ ತೆಲುಗು ಗಾಯಕಿ ಮಂಗ್ಲಿ ಮತ್ತೆ ಮತ್ತೆ ಕನ್ನಡದಲ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ. ಇದೀಗ, ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ನಲ್ಲಿ ಮಂಗ್ಲಿ ಧ್ವನಿಗೂಡಿಸಿದ್ದಾರೆ.

  ಪ್ರೇಮ್ ನಿರ್ದೇಶನದಲ್ಲಿ ತಾಯಾರಾಗುತ್ತಿರುವ ಏಕ್ ಲವ್ ಯಾ ಸಿನಿಮಾದ ಹಾಡಿಗೆ ಮಂಗ್ಲಿ ಧ್ವನಿಯಾಗಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಈ ಕುರಿತು ಸ್ವತಃ ಮಂಗ್ಲಿ ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

  ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ ಬಿಜೆಪಿ ಕಾರ್ಪೊರೇಟರ್ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ ಬಿಜೆಪಿ ಕಾರ್ಪೊರೇಟರ್

  ''ಲೆಜೆಂಡರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡಿದ್ದು ಮತ್ತು ಅವರನ್ನು ಭೇಟಿ ಮಾಡಿದ್ದು ಖುಷಿ ಸಂಗತಿ. ಅವರದ್ದು ವಿಶಾಲ ಹೃದಯದ ವ್ಯಕ್ತಿತ್ವ. ಅವರ ಪ್ರಾಜೆಕ್ಟ್‌ನಲ್ಲಿ ಭಾಗವಾಗಿದ್ದು ನಿಜಕ್ಕೂ ಹೆಮ್ಮೆ ಎನಿಸಿದೆ'' ಎಂದು ಮಂಗ್ಲಿ ಟ್ವೀಟ್ ಮಾಡಿದ್ದಾರೆ.

  ಮತ್ತೊಂದೆಡೆ ಅರ್ಜುನ್ ಜನ್ಯ ಸಹ ಮಂಗ್ಲಿ ಜೊತೆ ಇನ್ನೊಂದು ಹಾಡು ಹಾಡಿಸಿರುವುದಾಗಿ ಖುಷಿ ಹಂಚಿಕೊಂಡಿದ್ದಾರೆ. sಇದಕ್ಕೂ ಮುಂಚೆ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ 'ಕಣ್ಣಾ ಹೊಡೆಯೊಕ' ಹಾಡಿನ ತೆಲುಗು ವರ್ಷನ್ ಮಂಗ್ಲಿ ಹಾಡಿದ್ದರು. ಕನ್ನಡಕ್ಕಿಂತ ಈ ಹಾಡು ತೆಲುಗಿನಲ್ಲಿಯೇ ದೊಡ್ಡ ಹಿಟ್ ಆಗಿತ್ತು.

  ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿದಿದ್ದು, ಈ ವೇಳೆ ನಿರ್ದೇಶಕ ಪ್ರೇಮ್ ಮತ್ತು ನಾಯಕನಟ ರಾಣಾ ಜೊತೆಯಲ್ಲಿದ್ದರು.

  Singer Mangli Sings Arjun Janya Music Directional Ek Love Ya Movie song

  'ದಿ ವಿಲನ್' ಸಿನಿಮಾದ ಬಳಿಕ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ಏಕ್ ಲವ್ ಯಾ' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ರಕ್ಷಿತಾ ಅವರ ಸಹೋದರ ರಾಣಾ ಚೊಚ್ಚ ಬಾರಿಗೆ ನಾಯಕನಟನಾಗಿ ಇಂಡಸ್ಟ್ರಿ ಪ್ರವೇಶಿಸುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಮಂಗ್ಲಿ ವಿರುದ್ಧ ದೂರು

  ಇತ್ತೀಚಿಗಷ್ಟೆ ಮಂಗ್ಲಿ ಹಾಡಿದ್ದು ತೆಲುಗು ಜಾನಪದ ಹಾಡೊಂದು ಬಿಡುಗಡೆಯಾಗಿತ್ತು. ಈ ಹಾಡು ವಿವಾದಕ್ಕೆ ಗುರಿಯಾಗಿದೆ. ಈ ಸಂಬಂಧ ಬಿಜೆಪಿ ಕಾರ್ಪೊರೇಟರ್ ದೂರು ಸಹ ದಾಖಲಿಸಿದ್ದರು. ''ಮಂಗ್ಲಿ ಬಿಡುಗಡೆ ಮಾಡಿರುವ ಹಾಡಿನಲ್ಲಿ ಹಿಂದು ದೇವತೆಯನ್ನು ಬೈದಿದ್ದಾರೆ. ಆ ಹಾಡು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಹಾಗಾಗಿ ಈ ಕೂಡಲೇ ಮಂಗ್ಲಿ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ರಚ್ಚಕೊಂಡದ ಮಲ್ಕಜ್‌ಗಿರಿ ಬಿಜೆಪಿ ಕಾರ್ಪೊರೇಟರ್ ದೂರು ನೀಡಿದ್ದರು.

  English summary
  Telugu Singer Mangli sings arjun janya music directional Ek Love ya movie song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X