For Quick Alerts
  ALLOW NOTIFICATIONS  
  For Daily Alerts

  'ಇಂಡಿಯನ್ ಐಡಲ್' ಫಿನಾಲೆಯಲ್ಲಿ ಕರಾವಳಿ ಗಾಯಕ ನಿಹಾಲ್: ಟ್ರೋಫಿಗಾಗಿ ಭಾರಿ ಪೈಪೋಟಿ

  |

  ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಹಿಂದಿ ಗಾಯನ ಸ್ಪರ್ಧೆಯಲ್ಲಿ ಕರ್ನಾಟಕದ ಗಾಯಕ ನಿಹಾಲ್ ತಾವ್ರೋ ಫಿನಾಲೆ ತಲುಪಿದ್ದಾರೆ. ಮೂಡಬಿದರಿಯ ಕಡಲಕೆರೆ ಪರಿಸರದ ನಿಹಾಲ್ ತಾವ್ರೋ ಇಂಡಿಯನ್ ಐಡಲ್ ಶೋನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಇದೀಗ ಅಂತಿಮ ಕಣದಲ್ಲಿ ಒಟ್ಟು 6 ಮಂದಿ ಗಾಯಕರಿದ್ದಾರೆ. ಪ್ರಶಸ್ತಿಗಾಗಿ ಈ 6 ಮಂದಿಯ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ.

  ಅಂದಹಾಗೆ ನಿಹಾಲ್ ಇಂಡಿಯನ್ ಐಡಲ್ ಫಿನಾಲೆ ತಲುಪುವ ಮೂಲಕ ಈ ಸ್ಪರ್ದೆಯಲ್ಲಿ ಫಿನಾಲೆ ಹಂತ ತಲುಪಿದ ಮೊದಲ ಕನ್ನಡಿಗ ಎನ್ನುವ ಹೆಗ್ಗಳಿಕೆ ಸಹ ಪಡೆದಿದ್ದಾರೆ. ಇನ್ನೊಂದು ವಾರದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆ ವಾರದಲ್ಲಿ ವಿಶೇಷ ಅತಿಥಿಯಾಗಿ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಭಾಗಿಯಾಗಿದ್ದಾರೆ. ಸದ್ಯ ಅಂತಿಮ ಕಣದಲ್ಲಿ ನಿಹಾಲ್ ತಾವ್ರೋ, ಪವನ್ ದೀಪ್ ರಾಜನ್, ಅರುಣಿತಾ ಕಾಂಜಿಲಾಲ್, ಷಣ್ಮುಖಪ್ರಿಯ, ಸಾಯ್ಲಿಕಿಶೋರ್ ಕಾಂಬ್ಲಿ, ಮೊಹಮ್ಮದ್ ಡ್ಯಾನಿಶ್ ಇದ್ದಾರೆ. ಈ ಸ್ಪರ್ಧಿಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ. ಮುಂದೆ ಓದಿ...

  ಚಿಕ್ಕ ವಯಸ್ಸಿನಿಂದಲೇ ಹಾಡುತ್ತಿರುವ ನಿಹಾಲ್

  ಚಿಕ್ಕ ವಯಸ್ಸಿನಿಂದಲೇ ಹಾಡುತ್ತಿರುವ ನಿಹಾಲ್

  ಸದ್ಯ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿರುವ ಕನ್ನಡದ ಗಾಯಕ ನಿಹಾಲ್ ಚಿಕ್ಕ ವಯಸ್ಸಿನಲ್ಲೆ ಹಾಡುವುದನ್ನು ಕಲಿತಿದ್ದರು. ಆಲ್ಬಂ ಹಾಡೊಂದಕ್ಕೆ ನಿಹಾಲ್ ಯಾವುದೇ ರಿಹರ್ಸಲ್ ಇಲ್ಲದೆ ಹಾಡಿ ಗಮನ ಸೆಳೆದಿದ್ದರು. ಅಲ್ಲಿಂದ ಪ್ರಾರಂಭವಾದ ಗಾಯಕ ಪಯಣ ಇಂದು ಇಂಡಿಯನ್ ಐಡಲ್ ಫಿನಾಲೆ ವರೆಗೂ ಬಂದಿದೆ. ಫಿನಾಲೆಯಲ್ಲಿ ಕರ್ನಾಟಕದ ಪ್ರತಿಭೆ ನಿಹಾಲ್ ಟ್ರೋಫಿ ಗೆದ್ದು ಬೀಗುತ್ತಾರಾ ಎನ್ನುವುದೀಗ ಕುತೂಹಲ ಮೂಡಿಸಿದೆ.

  'ಸರಿಗಮಪ' ರಿಯಾಲಿ ಶೋನಲ್ಲಿ ನಿಹಾಲ್

  'ಸರಿಗಮಪ' ರಿಯಾಲಿ ಶೋನಲ್ಲಿ ನಿಹಾಲ್

  ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮ ರಿಯಾಲಿಟಿ ಶೋ ಮೂಲಕ ನಿಹಾಲ್ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು.

  ಕನ್ನಡ ಕಿರುತೆರೆಯ ಗಾಯನ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಡ್ಜ್ ಗಳ ಮೆಚ್ಚುಗೆ ಪಾತ್ರರಾಗಿದ್ದರು. ನಾದಬ್ರಹ್ಮ ಹಂಸಲೇಖ ಅವರು "ನಿಹಾಲ್ ಗಾಯನ ಕೇಳಿ, ನಿಹಾಲ್ ತಾವ್ರೋ ಅಲ್ಲಪ್ಪಾ ನಿಹಾಲ್ ದೇವ್ರು" ಎಂದಿದ್ದರು.

  ನಿಹಾಲ್‌ನನ್ನು ಹಾಡಿ ಹೊಗಳಿದ್ದ ವಿಜಯ್ ಪ್ರಕಾಶ್

  ನಿಹಾಲ್‌ನನ್ನು ಹಾಡಿ ಹೊಗಳಿದ್ದ ವಿಜಯ್ ಪ್ರಕಾಶ್

  ಗಾಯಕ ವಿಜಯ್ ಪ್ರಕಾಶ್ ಕೂಡ ನಿಹಾಲ್ ತೋವ್ರೂ ಅವರನ್ನು ಹಾಡಿ ಹೊಗಳಿದ್ದರು. ನಿಹಾಲ್ ವಿಶ್ವದ ಗಮನ ಸೆಳೆಯುವ ಗಾಯಕನಾಗುತ್ತಾನೆ" ಎಂದು ಭವಿಷ್ಯ ನುಡಿದಿದ್ದರು. ನಿಹಾಲ್ ಈಗಾಗಲೇ ಕನ್ನಡ, ತುಳು, ಕೊಂಕಣಿಯ ಅನೇಕ ಹಾಡುಗಳನ್ನು ಹಾಡಿದ್ದಾರೆ. ಇನ್ನು ಕನ್ನಡದ ಅನೇಕ ಧಾರಾವಾಹಿಗಳ ಟೈಟಲ್ ಹಾಡುಗಳನ್ನು ಮತ್ತು ಜಾಹೀರಾತಿಗೂ ನಿಹಾಲ್ ಧ್ವನಿಯಾಗಿದ್ದಾರೆ.

  ಪದವಿ ವಿದ್ಯಾರ್ಥಿ ನಿಹಾಲ್

  ಪದವಿ ವಿದ್ಯಾರ್ಥಿ ನಿಹಾಲ್

  ನಿಹಾಲ್ ಸದ್ಯ ಮೂಡಬಿದರಿಯ ಅಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ನಿಹಾಲ್ ತಂದೆ ಕೂಡ ಗಾಯಕರು. ಕೊಂಕಣಿ ಭಾಷೆಯ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಪುತ್ರನ ಸಾಧನೆಯ ಬಗ್ಗೆ ಪೋಷಕರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

  ಸ್ವಾತಂತ್ರ್ಯ ದಿನಾಚರಣೆ ದಿನ ಫಿನಾಲೆ

  ಸ್ವಾತಂತ್ರ್ಯ ದಿನಾಚರಣೆ ದಿನ ಫಿನಾಲೆ

  ಕರ್ನಾಟಕದ ಮನಗೆದ್ದಿದ್ದ ನಿಹಾಲ್ ಇದೀಗ ದೇಶದ ಗಮನ ಸೆಳೆಯುವ ಜೊತೆಗೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಫೈನಲ್ ಸುತ್ತಿನ ಸ್ಪರ್ಧೆಗೆ ನಿಹಾಲ್ ಸಿದ್ಧರಾಗಿದ್ದಾರೆ, ಇದೇ ತಿಂಗಳು ಆಗಸ್ಟ್ 14 ಮತ್ತು 15ರಂದು ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫಿನಾಲೆಯಲ್ಲಿ ನಿಹಾಲ್ ಗೆದ್ದು ಬರಲಿ ಎನ್ನುವುದು ಕನ್ನಡಿಗರ ಆಶಯ.

  3 ಸ್ಪರ್ಧಿಗಳಿಗೆ ಕರಣ್ ಜೋಹರ್ ಕಡೆಯಿಂದ ಬಂಪರ್ ಆಫರ್

  3 ಸ್ಪರ್ಧಿಗಳಿಗೆ ಕರಣ್ ಜೋಹರ್ ಕಡೆಯಿಂದ ಬಂಪರ್ ಆಫರ್

  ಅಂತಿಮ ಕಣದಲ್ಲಿರುವ 6 ಮಂದಿಯಲ್ಲಿ ಮೂವರಿಗೆ ನಿರ್ಮಾಪಕ ಕರಣ್ ಜೋಹರ್ ಬಂಪರ್ ಆಫರ್ ಸಿಕ್ಕಿದೆ. ಪ್ರತಿಭಾವಂತ ಮೂರು ಸ್ಪರ್ಧಿಗಳಿಗೆ ತನ್ನ ಧರ್ಮ ಪ್ರೊಡಕ್ಷನ್ ಸಿನಿಮಾಗಳಿಗೆ ಧ್ವನಿ ನೀಡುವ ಅವಕಾಶ ನೀಡಿದ್ದಾರೆ. ಧರ್ಮ ಪ್ರೊಡಕ್ಷನ್ ಸಿನಿಮಾಗಳಲ್ಲಿ ಹಾಡಲು ಅವಕಾಶ ಪಡೆದ ಆ ಅದೃಷ್ಟಶಾಲಿ ಸ್ಪರ್ಧಿಗಳೆಂದರೆ ಪವನ್ ದೀಪ್ ರಾಜನ್, ಅರುಣಿತಾ ಕಂಜಿಲಾಲ್ ಮತ್ತು ಮೊಹಮ್ಮದ್ ಡ್ಯಾನಿಶ್.

  ಇಂಡಿಯನ್ ಐಡಲ್ ಶೋ ಬಗ್ಗೆ

  ಇಂಡಿಯನ್ ಐಡಲ್ ಶೋ ಬಗ್ಗೆ

  ಇಂಡಿಯನ್ ಐಡಲ್ ಶೋ ಬಗ್ಗೆ ಹೇಳುವುದಾದರೆ ಇದು 12ನೇ ಸಂಚಿಕೆ ನಡೆಯುತ್ತಿದೆ. ಈ ಶೋನಲ್ಲಿ ಜಡ್ಜ್ ಗಳಾಗಿ ಹಿಮೇಶ್ ರೇಶಮಿಯಾ, ವಿಶಾಲ್ ದದ್ಲಾನಿ ಮತ್ತು ನೇಹಾ ಕಕ್ಕರ್ ಕಾಣಿಸಿಕೊಂಡಿದ್ದರು. ಇದೀಗ ತೀರ್ಪುಗಾರರ ತಂದಲ್ಲಿ ಬದಲಾವಣೆಯಾಗಿದ್ದು, ವಿಶಾಲ್ ದದ್ಲಾನಿ ಸ್ಥಾನಕ್ಕೆ ಮತ್ತೋರ್ವ ಖ್ಯಾತ ಗಾಯಕ ಅನು ಮಲಿಕ್, ನೇಹಾ ಕಕ್ಕರ್ ಜಾಗಕ್ಕೆ ಸಹೋದರ ಸೋನು ಕಕ್ಕರ್ ಎಂಟ್ರಿ ಕೊಟ್ಟಿದ್ದಾರೆ.

  English summary
  Singer Nihaal Based on Coastal Karnataka Enters to Indian Idol 12 Finale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X