ವಚನಗಳ ದೃಶ್ಯಕಾವ್ಯ: ಲಾಕ್‌ಡೌನ್‌ನಲ್ಲಿ ನಿಮಗಿದೊ ಸಂಗೀತ ಥೆರಪಿ

By ಫಿಲ್ಮ್ ಡೆಸ್ಕ್

ಸಂಗೀತಕ್ಕೂ ಭಾವನೆಗಳಿಗೂ ಸದಾ ಒಂದು ಕೊಂಡಿ ಬೆಸೆದುಕೊಂಡಿರುತ್ತದೆ. ಸಂತೋಷಕ್ಕೆ ಒಂದು ಹಾಡು, ದುಃಖವಿದ್ದಾಗ ಮತ್ತೊಂದು. ಸಂಗೀತಕ್ಕೆ ಮನಸ್ಸಿನ ದುಗುಡ ನಿವಾರಿಸುವ ಶಕ್ತಿಯೂ ಇದೆ. ಈ ಲಾಕ್‌ಡೌನ್ ಸಮಯದಲ್ಲಂತೂ ಹಾಡುಗಳನ್ನು ಕೇಳದವರು, ಸಿನಿಮಾ ವೀಕ್ಷಿಸದವರನ್ನು ಹೆಕ್ಕುವುದು ಕಷ್ಟಸಾಧ್ಯ.

Recommended Video

ಪತಿ ಜೊತೆ ಪ್ರಿಯಾಮಣಿ ರಂಜಾನ್ ಆಚರಣೆ ಹೇಗಿದೆ ಗೊತ್ತಾ !! |Priyamani Celebrate Ramzan

ಜನರಿಗೆ ಭಿನ್ನ ರೀತಿಯ ಸಂಗೀತ ಅನುಭವ ನೀಡುವ ನಿಟ್ಟಿನಲ್ಲಿ ಸಾಕಷ್ಟು ಸಂಗೀತ ತಂಡಗಳು ಕ್ರಿಯಾತ್ಮಕ ರೀತಿಯಲ್ಲಿ ಹಾಡುಗಳ ಸಂಯೋಜನೆ ನಡೆಸುತ್ತಿದೆ. ಅಂತಹದ್ದೇ ಒಂದು ಸಾಹಸಕ್ಕೆ ಕೈಹಾಕಿದ್ದಾರೆ ಗಾಯಕಿ ರೂಪಾ ಕೊತ್ವಾಲ್. ಮುಂದೆ ಓದಿ...

ವಚನಗಳಿಗೆ ಆಧುನಿಕ ಸಂಗೀತ ಟಚ್

ವಚನಗಳಿಗೆ ಆಧುನಿಕ ಸಂಗೀತ ಟಚ್

ಜನಪದ ಗೀತೆ, ವಚನಗಳನ್ನು ಕೇಳುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಆದರೆ ಅದರಲ್ಲಿನ ಸ್ವಾದ ತಿಳಿದರೆ ಯುವಜನರೂ ಅವುಗಳಿಗೆ ಮನ ಸೋಲುತ್ತಾರೆ ಎಂಬುದು 'ಸೋಜುಗಾದ ಸೋಜಿ ಮಲ್ಲಿಗೆ..' ಹಾಡು ವೈರಲ್ ಆದ ರೀತಿಯೇ ತಿಳಿಸುತ್ತದೆ. ವಚನಗಳಿಗೆ ಫ್ಯೂಜನ್ ಟಚ್ ನೀಡಿ ಅದಕ್ಕೊಂದಿಷ್ಟು ಕೇಳುಗರನ್ನು ಹುಟ್ಟಿಹಾಕುವ ಪ್ರಯತ್ನ ಗಾಯಕಿ ರೂಪಾ ಮತ್ತವರ ತಂಡದವರಾದ ಸಂಗೀತ ಸಂಯೋಜಕ ಅನಿಲೇಶ್ ಮ್ಯಾಥ್ಯೂ ಮಾಡುತ್ತಿದ್ದಾರೆ.

ಜನರಿಗೆ ತಲುಪಿಸುವ ಕೆಲಸವಾಗುತ್ತಿದೆ

ಜನರಿಗೆ ತಲುಪಿಸುವ ಕೆಲಸವಾಗುತ್ತಿದೆ

ಹುಬ್ಬಳ್ಳಿಯ ರೂಪಾ ಹಿಂದೂಸ್ತಾನಿ ಸಂಗೀತದಲ್ಲಿ ಪದವಿ ಪಡೆದುಕೊಂಡ ಬಳಿಕ, ವಿವಿಧ ಚಾನಲ್‌ಗಳಲಿ ಧ್ವನಿ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಅಮೆಜಾನ್ ರೇಡಿಯೊದಲ್ಲಿ ಆರ್.ಜೆ.ಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಆ ಸಂಸ್ಥೆಯಿಂದ ಹೊರ ಬಂದು ಸಮಾನ ಮನಸ್ಕರು ಸೇರಿ ತಮ್ಮದೆ ಆದ ತಂಡ ರೂಪಿಸಿಕೊಂಡು, ವಚನಗಳಿಗೆ ಆಧುನಿಕ ಸಂಗೀತದ ಟಚ್ ನೀಡಿ, ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರೂಪ ಹೇಳುವುದೇನು?

ರೂಪ ಹೇಳುವುದೇನು?

"ಈ ಕೊರೊನಾ ಲಾಕ್‌ಡೌನ್‌ನಲ್ಲಿ ಸಾಕಷ್ಟು ಜನ ಬದುಕಿನ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಕಳೆದು ಹೋಗುತ್ತಿರುವ ಭರವಸೆಯನ್ನು ಹಾಡಿನ ಮೂಲಕ ಮತ್ತೆ ಹುಟ್ಟಿಸುವ ಪ್ರಯತ್ನವನ್ನು ಈ ತಂಡ ಮಾಡಿದೆ. 'ಸಾವಿರಾರು ಕಾರ್ಮಿಕರು, ಕೆಲಸಗಾರರು ದುಡಿಮೆ ಇಲ್ಲದೆ ಕಂಗಾಲಾಗಿದ್ದನ್ನು ನೋಡಿ 'ಭಯ ಬೇಡ ಓ ನನ್ನ ಜಗವೆ..' ಹಾಡನ್ನು ಬರೆದೆ. ಇದಕ್ಕೆ ಅನಿಲೇಶ್ ಮ್ಯಾಥ್ಯೂ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾವು ನಮ್ಮ ಮನೆಗಳಲ್ಲಿ ಇದ್ದು, ಈ ಹಾಡನ್ನು ರೂಪಿಸಿದ್ದೇವೆ. ಲಾಕ್‌ಡೌನ್ ಸಮಯದಲ್ಲಿನ ಮೊದಲ ಪ್ರಯತ್ನ ಇದಾಗಿದೆ. ಇದಾದ ನಂತರ ಮತ್ತಷ್ಟು ಹಾಡುಗಳನ್ನು ನಾವು ರಚಿಸುತ್ತಿದ್ದೇವೆ" ಎನ್ನುತ್ತಾರೆ ರೂಪ.

ಬಸವಣ್ಣನ ವಚನಗಳಿಗೆ ಆಧುನಿಕ ಸಂಗೀತ ಟಚ್

ಬಸವಣ್ಣನ ವಚನಗಳಿಗೆ ಆಧುನಿಕ ಸಂಗೀತ ಟಚ್

ಈ ತಂಡ ಮೊದಲು ಬಸವಣ್ಣನ ವಚನಗಳಿಗೆ ಫ್ಯೂಜನ್ ಟಚ್ ನೀಡಿ ಹಾಡುಗಳನ್ನು ರೂಪಿಸಿದ್ದಾರೆ. ಉಳ್ಳವರು ಶಿವಾಲಯ ಮಾಡುವರು...ಹಾಡನ್ನು ಮಾಡಿದ್ದಾರೆ. ಅಲ್ಲದೆ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ವಚನದಲ್ಲಿ ನಾಮಾಮೃತ ತುಂಬಿ... ಹೀಗೆ ಈ ತಂಡದಿಂದ ಸಾಕಷ್ಟು ಹಾಡುಗಳು ಹೊರಹೊಮ್ಮಿವೆ. ತೆರೆಮರೆಗೆ ಸರಿದ ವಚನ, ಜನಪದ ಹಾಡುಗಳಿಗೆ ಆಧುನಿಕ ಸಂಗೀತದ ಲೇಪ ಹಚ್ಚಿ ಜನರಿಗೆ ತಲುಪಿಸುವ ಈ ತಂಡದ ಪ್ರಯತ್ನ ನಿರಂತರವಾಗಿ ಸಾಗಿದೆ.

More from Filmibeat

English summary
Singer Roopa kotwal give modern music touch to Vachans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X