For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗನನ್ನು ಪರಿಚಯಿಸಿದ ಶ್ರೇಯಾ ಘೋಷಲ್: ಹೆಸರೇನು ಗೊತ್ತಾ?

  |

  ಖ್ಯಾತ ಗಾಯಕಿ ಶ್ರೇಯಾ ಘೋಷಲ್ ತನ್ನ ಮುದ್ದು ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇತ್ತೀಚಿಗೆ ಅಂದರೆ ಮೇ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಶ್ರೇಯಾ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಮಗ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೆಸರನ್ನು ರಿವೀಲ್ ಮಾಡಿದ್ದಾರೆ.

  ಮಗುವಿಗೆ ಜನ್ಮ ನೀಡಿದ ಬಳಿಕ ಶ್ರೇಯಾ ಘೋಷಲ್ ಸಂತಸದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. 'ದೇವರ ಆಶೀರ್ವಾದದಿಂದ ಗಂಡು ಮಗು ಜನಿಸಿದೆ. ನಾನು ಎಂದೂ ಇಷ್ಟು ಭಾವುಕ ಆಗಿರಲಿಲ್ಲ. ಪತಿ ಶಿಲಾದಿತ್ಯ ಸೇರಿ ನನ್ನ ಕುಟುಂಬದವರೆಲ್ಲ ಅತೀವ ಖುಷಿಯಲ್ಲಿದ್ದೇವೆ. ನಿಮ್ಮ ಅಗಣಿತ ಆಶೀರ್ವಾದಗಳಿಗೆ ಧನ್ಯವಾದ' ಎಂದಿದ್ದರು.

  ತಾಯಿಯಾದ ಶ್ರೇಯಾ ಘೋಷಾಲ್: ಸಿಹಿ ಸುದ್ದಿ ನೀಡಿದ ಗಾಯಕಿಗೆ ಅಭಿನಂದನೆಗಳ ಮಳೆತಾಯಿಯಾದ ಶ್ರೇಯಾ ಘೋಷಾಲ್: ಸಿಹಿ ಸುದ್ದಿ ನೀಡಿದ ಗಾಯಕಿಗೆ ಅಭಿನಂದನೆಗಳ ಮಳೆ

  ಇದೀಗ ಖ್ಯಾತ ಗಾಯಕಿ ಮಗನ ಫೋಟೋ ಜೊತೆ ಪ್ರತ್ಯಕ್ಷರಾಗಿದ್ದಾರೆ. ಶ್ರೇಯಾ ಮಗನಿಗೆ ಏನೆಂದು ನಾಮಕರಣ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದಹಾಗೆ ಮುದ್ದು ಮಗನಿಗೆ ದೇವ್ಯಾನ್ ಮುಖೋಪಧ್ಯಾಯ ಎಂದು ನಾಮಕರಣ ಮಾಡಿದ್ದಾರೆ.

  ಈ ಬಗ್ಗೆ ಬರೆದುಕೊಂಡಿರುವ ಶ್ರೇಯಾ, 'ದೇವ್ಯಾನ್ ಮುಖೋಪಾಧ್ಯಾಯನನ್ನು ಪರಚಯಿಸುತ್ತಿದ್ದೀವಿ. ಮೇ 22ರಂದು ಆಗಮಿಸಿ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ. ಮೊದಲ ನೋಟದಲ್ಲೇ ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿಸಿದನು. ಈ ಅನುಭವ ತಾಯಿ ಮತ್ತು ತಂದೆಗೆ ಮಾತ್ರ ಸಾಧ್ಯ. ಶುದ್ಧ ಪ್ರೀತಿ. ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ಈ ಸುಂದರವಾದ ಉಡುಗೊರೆಗೆ ನಾನು ಮತ್ತು ಶಿಲಾದಿತ್ಯ ಕೃತಜ್ಞರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

  ಶ್ರೇಯಾ ಮತ್ತು ಪತಿ ಮುದ್ದುಮಗನನ್ನು ಎತ್ತಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಖ್ಯಾತ ಗಾಯಕಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಫೋಟೋ ಶೇರ್ ಮಾಡಿ ಒಂದು ಗಂಟೆಯೊಳಗೆ 8 ಸಾವಿರಕ್ಕೂ ಅಧಿಕ ಕಾಮೆಂಟ್ ಮತ್ತು ಅತೀ ಹೆಚ್ಚು ಲೈಕ್ಸ್ ಹರಿದುಬಂದಿದೆ.

  ಶ್ರೇಯಾ 2015ರಲ್ಲಿ ಶಿಲಾದಿತ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದರು. ಮದುವೆಗೆ ಮುನ್ನ ಇಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿದ್ದರು. ಮದುವೆಯಾಗಿ 6 ವರ್ಷಗಳ ಬಳಿಕ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಾರ್ಚ್ 28 ರಂದು ತಾವು ತಾಯಿಯಾಗುತ್ತಿರುವುದಾಗಿ ಶ್ರೆಯಾ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದರು.

  English summary
  Famous Singer Shreya Ghoshal names her son Devyaan. She shares his first photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X