For Quick Alerts
  ALLOW NOTIFICATIONS  
  For Daily Alerts

  ಎಷ್ಟು ಸುಂದರವಾದ ಭಾಷೆ; 'ರಾಬರ್ಟ್' ಹಾಡಿನ ಬಗ್ಗೆ ಖ್ಯಾತ ಗಾಯಕಿ ಶ್ರೇಯಾ ಗೋಷಲ್ ಮಾತು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಎರಡು ವಾರದ ಬಳಿಕವೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎಲ್ಲಾ ಕಡೆಯಿಂದ ಸಿನಿಮಾಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  ಕಣ್ಣು ಹೊಡಿಯಾಕ ಹಾಡಿನ ಬಗ್ಗೆ ಮಾತನಾಡಿದ ಶ್ರೇಯಾ ಘೋಷಲ್ | Filmibeat Kannada

  ಚಿತ್ರದ ಪ್ರತಿಯೊಂದು ಅಂಶವು ಅಭಿಮಾನಿಗಳ ಹೃದಯ ಗೆದ್ದಿದೆ. ಅದರಲ್ಲೂ ವಿಶೇಷವಾಗಿ ರಾಬರ್ಟ್ ಹಾಡುಗಳು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿವೆ. ಎಲ್ಲೆಲ್ಲೂ ರಾಬರ್ಟ್ ಹಾಡುಗಳದ್ದೆ ಸದ್ದು. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ರಾಬರ್ಟ್ ಹಾಡುಗಳು ಗಾನಪ್ರಿಯರ ಹೃದಯ ಗೆದ್ದಿವೆ.

  ಮದುವೆಯಾದ ಆರು ವರ್ಷದ ಬಳಿಕ ಸಿಹಿ ಸುದ್ದಿ ಕೊಟ್ಟ ಗಾಯಕಿ ಶ್ರೆಯಾ ಘೋಷಾಲ್ಮದುವೆಯಾದ ಆರು ವರ್ಷದ ಬಳಿಕ ಸಿಹಿ ಸುದ್ದಿ ಕೊಟ್ಟ ಗಾಯಕಿ ಶ್ರೆಯಾ ಘೋಷಾಲ್

  ರಾಬರ್ಟ್ ಹಾಡಿನ ಬಗ್ಗೆ ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಬರ್ಟ್ ನಲ್ಲಿ ಶ್ರೇಯಾ ಕಣ್ಣು ಹೊಡಿಯಾಕ...ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡು ಉತ್ತರ ಕರ್ನಾಟಕ ಶೈಲಿಯಲ್ಲಿದೆ. ಮೊದಲ ಬಾರಿಗೆ ಶ್ರೇಯಾ ಘೋಷಲ್ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಧ್ವನಿ ನೀಡಿದ್ದಾರೆ.

  ಈ ಬಗ್ಗೆ ಶ್ರೇಯಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾಷೆ ಎಷ್ಟು ಸುಂದರವಾಗಿದೆ ಎಂದು ಹೇಳಿದ್ದಾರೆ. 'ಕಣ್ಣು ಹೊಡಿಯಾಕ 20 ಮಿಲಿಯಲ್ ವೀಕ್ಷಣೆ ಕಂಡಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಷೆಯ ಹಾಡನ್ನು ಹಾಡಲು ನನಗೆ ಅವಕಾಶ ಸಿಕ್ಕಿದ್ದು. ಎಷ್ಟು ಸುಂದರವಾದ ಭಾಷೆ. ಅರ್ಜುನ್ ಜನ್ಯ, ಯೋಗರಾಜ್ ಭಟ್, ದರ್ಶನ್, ಆಶಾ ಭಟ್, ಆನಂದ್ ಆಡಿಯೋ ಅವರಿಗೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.

  ಶ್ರೇಯಾ ಟ್ವೀಟ್ ಗೆ ನಿರ್ದೇಶಕ ಯೋಗರಾಜ್ ಭಟ್, 'ಅಸಾಧಾರಣ ಕಂಠದ ಒಡತಿ, ಸರಳ ಸುಂದರಿ, ನಾಡಿನ ಅತ್ಯಂತ ನೆಚ್ಚಿನ ಗಾಯಕಿ ಶ್ರೇಯಾ ಘೋಷಾಲ್ ಅವರು ಈ ಹಾಡು ಹಾಡಿದ್ದಕ್ಕೆ ನಮನ ಮತ್ತು ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.

  ಶ್ರೇಯಾ ಘೋಷಲ್ ಟ್ವೀಟ್ ಗೆ ಕನ್ನಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತುಂಬಾ ಅದ್ಭುತವಾಗಿ ಹಾಡಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  English summary
  Singer Shreya Ghoshal reaction about Kannu Hodiyaka song. She says This is the first time I got to sing the north Karnataka dialect.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X