For Quick Alerts
  ALLOW NOTIFICATIONS  
  For Daily Alerts

  ಹನಿಮೂನ್ ಪ್ರವಾಸದಲ್ಲಿ 2ನೇ ಮದುವೆಯಾಗಿರುವ ಗಾಯಕಿ ಸುನಿತಾ-ರಾಮ್

  By ಫಿಲ್ಮ್ ಡೆಸ್ಕ್
  |

  ತೆಲುಗಿನ ಜನಪ್ರಿಯ ಹಿನ್ನಲೆ ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆ ಸುನಿತಾ ಉಪದ್ರಸ್ತ ಮತ್ತು ಪತಿ ರಾಮ್ ವೀರಪ್ಪನೇನಿ ಹನಿಮೂನ್ ಪ್ರವಾಸಕ್ಕೆ ತೆರಳಿದ್ದಾರೆ. ಇತ್ತೀಚಿಗಷ್ಟೆ ಗಾಯಕಿ ಸುನಿತಾ, ಡಿಜಿಟಲ್ ಮೀಡಿಯಾ ಉದ್ಯಮಿ ರಾಮ್ ವೀರಪ್ಪನೇನಿ ಜೊತೆ ಹಸೆಮಣೆ ಏರಿದ್ದರು. 42 ವರ್ಷದ ಸುನಿತಾ ಅವರಿಗೆ ಇದು 2ನೇ ಮದುವೆ.

  ಸದ್ಯ ಹನಿಮೂನ್ ಗೆ ತೆರಳಿರುವ ಸುನಿತಾ ದಂಪತಿ ಪ್ರೇಮಿಗಳ ದಿನಾಚರಣೆಯನ್ನು ವಿದೇಶದಲ್ಲಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ ಈ ದಂಪತಿ ಹನಿಮೂನ್ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಸೆಲೆಬ್ರಿಟಿಗಳ ನೆಚ್ಚಿನ ತಾಣ ಎಂದೇ ಖ್ಯಾತಿಯಾಗಿರುವ ಮಾಲ್ಡೀವ್ಸ್.

  ಮಕ್ಕಳೇ ಮುಂದೆ ನಿಂತು ಅಮ್ಮನ ಮದುವೆ ಮಾಡಿದರು!

  ಸುನಿತಾ ಮಾಲ್ಡೀವ್ಸ್ ಬೀಚ್ ನಲ್ಲಿರುವ ಫೋಟೋ ಶೇರ್ ಮಾಡಿ, ಪ್ರೇಮಿಗಳ ದಿನಾಚರಣೆಗೆ ಪತಿಗೆ ವಿಶ್ ಮಾಡಿದ್ದಾರೆ. ಸುನಿತಾ ಫೋಟೋಗೆ ಸ್ನೇಹಿತರಿಂದ ಮತ್ತು ಅಭಿಮಾನಿಗಳಿಂದ ಮೆಚ್ಚಿಗೆಯ ಕಾಮೆಂಟ್ ಹರಿದು ಬರುತ್ತಿದೆ

  ಎರಡನೇ ಮದುವೆ ಬಗ್ಗೆ ಗಾಯಕಿ ಸುನಿತಾ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಬರೆದಿದ್ದರು. 'ಪ್ರತಿಯೊಬ್ಬ ತಾಯಿಯಂತೆ ನಾನು ನನ್ನ ಮಕ್ಕಳು ಚೆನ್ನಾಗಿ ಸೆಟಲ್ ಆಗಬೇಕು ಎಂದು ಕನಸು ಕಾಣುತ್ತೇನೆ. ಅದೇ ರೀತಿ ನಾನು ಕೂಡ ಜೀವನದಲ್ಲಿ ಉತ್ತಮ ರೀತಿ ಸೆಟಲ್ ಆಗಬೇಕು ಎಂದು ಬಯಸುವ ಅದ್ಭುತ ಮಕ್ಕಳು ಹಾಗೂ ಪೋಷಕರನ್ನು ಪಡೆದಿದ್ದೇನೆ. ಆ ಕ್ಷಣ ಕೊನೆಗೂ ಬಂದಿದೆ. ಅದ್ಭುತ ಸಂಗಾತಿ ಮತ್ತು ಕಾಳಜಿ ವಹಿಸುವ ರಾಮ್ ನನ್ನ ಜೀವನದಲ್ಲಿ ಬಂದಿದ್ದಾರೆ' ಎಂದು ಬರೆದುಕೊಂಡಿದ್ದರು.

  19ನೇ ವಯಸ್ಸಿನಲ್ಲೇ ಮದುವೆಯಾಗಿದ್ದ ಸುನಿತಾ ಮೊದಲ ಪತಿಗೆ ವಿಚ್ಛೇದನ ನೀಡಿ ಅನೇಕ ವರ್ಷಗಳಾಗಿದೆ. ಬಳಿಕ ರಾಮ್ ಅವರನ್ನು ಪ್ರೀತಿಸಿ ಸುನಿತಾ ಎರಡನೇ ಮದುವೆಯಾಗಿದ್ದಾರೆ. ಸುನಿತಾ ಮತ್ತು ಮೊದಲ ಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಮುಂದೆ ನಿಂತು ತಾಯಿಯ ಮದುವೆಯನ್ನು ನೆರವೇರಿಸಿದ್ದಾರೆ. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.

  English summary
  Singer Sunitha shares beautiful photo from her honeymoon with Ram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X