2ನೇ ಮದುವೆ ಆಗುತ್ತಿರುವ 42 ವರ್ಷದ ಗಾಯಕಿ ಸುನಿತಾ; ವಿವಾಹ ದಿನಾಂಕ ಬಹಿರಂಗ

By ಫಿಲ್ಮ್ ಡೆಸ್ಕ್

ತೆಲುಗಿನ ಜನಪ್ರಿಯ ಹಿನ್ನಲೆ ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆ ಸುನಿತಾ ಉಪದ್ರಸ್ತ ಎರಡನೇ ಮದುವೆ ಆಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿರುವುದೆ. ಗಾಯಕಿ ಸುನಿತಾ ಇತ್ತೀಚಿಗಷ್ಟೆ ಬಹುಕಾಲದ ಗೆಳೆಯ ರಾಮ್ ವೀರಪ್ಪನೇನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ನಿಶ್ಚಿತಾರ್ಥ ಮಾಡಿಕೊಂಡ ವಿಚಾರವನ್ನು ಸುನಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎರಡನೇ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಕುಟುಂಬದವರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ನೇರವೇರಿದ್ದು ತೀರ ಆಪ್ತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಮದುವೆ ಯಾವಾಗ ಎನ್ನುವುದನ್ನು ಬಹಿರಂಗವಾಗಿಲ್ಲರಲಿಲ್ಲ. ಇದೀಗ ಸುನಿತಾ ಮದುವೆ ದಿನಾಂಕ ರಿವೀಲ್ ಆಗಿದೆ.

ಜನವರಿ 9ರಂದು ಮದುವೆ

ಜನವರಿ 9ರಂದು ಮದುವೆ

ಗಾಯಕಿ ಸುನಿತಾ ಮತ್ತು ರಾಮ್ ವೀರಪ್ಪನೇನಿ ಮದುವೆ 2021 ಫಬ್ರವರಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸುನಿತಾ ಮತ್ತು ರಾಮ್ ಇಬ್ಬರು ಜನವರಿ 9ರಂದು ಹಸೆಮಣೆ ಏರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ನಲ್ಲಿ ಇವರ ವಿವಾಹ ನಡೆಯಲಿದ್ದು, ತೀರ ಆಪ್ತರಿಗೆ ಮಾತ್ರ ಆಮಂತ್ರಣ ನೀಡಿದ್ದಾರಂತೆ.

ಪಾರ್ಟಿ ಫೋಟೋ ವೈರಲ್

ಪಾರ್ಟಿ ಫೋಟೋ ವೈರಲ್

ಇತ್ತೀಚಿಗಷ್ಟೆ ಸುನಿತಾ ಮತ್ತು ರಾಮ್ ಇಬ್ಬರು ಪಾರ್ಟಿ ಆಯೋಜಿಸಿದ್ದು, ಚಿತ್ರರಂಗದ ಕೆಲವು ಗಣ್ಯರು ಪಾರ್ಟಿಯಲ್ಲಿ ಹಾಜರಾಗಿದ್ದರು. ಪಾರ್ಟಿಯ ಕೆಲವು ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ನಟಿ ರೇಣು ದೇಸಾಯಿ, ರೋಹಿಣಿ ನಾಯ್ಡು ಸೇರಿದಂತೆ ಅನೇಕರು ಭಾಗಿಯಾಗಿ, ಪಾರ್ಟಿ ಎಂಜಾಯ್ ಮಾಡಿದ್ದಾರೆ.

19ನೇ ವಯಸ್ಸಿನಲ್ಲಿ ಮೊದಲ ಮದುವೆ

19ನೇ ವಯಸ್ಸಿನಲ್ಲಿ ಮೊದಲ ಮದುವೆ

ಗಾಯಕಿ ಸುನಿತಾ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಶಿಷ್ಯೆ. ಜೊತೆಗೆ ಅವರ ಸಂಬಂಧಿ ಕೂಡ ಆಗಿದ್ದಾರೆ. 42 ವರ್ಷದ ಸುನಿತಾ ಈ ಮೊದಲು ಪತ್ರಕರ್ತ ಕಿರಣ್ ಕುಮಾರ್ ಗೋಪರಾಜ್ ಅವರನ್ನು ಮದುವೆಯಾಗಿದ್ದರು. 19ನೇ ವಯಸ್ಸಿನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುನಿತಾ ಮೊದಲ ಪತಿಯಿಂದ ವಿಚ್ಛೇದನ ಪಡೆದು ಅನೇಕ ವರ್ಷಗಳಾಗಿದೆ.

ಸುನಿತಾ ಭಾವಿ ಪತಿ ಬಗ್ಗೆ

ಸುನಿತಾ ಭಾವಿ ಪತಿ ಬಗ್ಗೆ

ಸುನಿತಾ ಭಾವಿ ಪತಿ ರಾಮ್ ವೀರಪನೇನಿ ತೆಲುಗಿನ ಪ್ರಸಿದ್ಧ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೆಲವು ವರ್ಷಗಳಿಂದ ರಾಮ್ ಮತ್ತು ಸುನಿತಾ ಇಬ್ಬರು ಪ್ರೀತಿಸುತ್ತಿದ್ದರಂತೆ. ಇದೇ ಪ್ರೀತಿ ಈಗ ಮದುವೆವರೆಗೂ ಬಂದಿದೆ.

ಮದುವೆ ಬಗ್ಗೆ ಸುನಿತಾ ಮಾತು

ಮದುವೆ ಬಗ್ಗೆ ಸುನಿತಾ ಮಾತು

ಎರಡನೇ ಮದುವೆ ಬಗ್ಗೆ ಗಾಯಕಿ ಸುನಿತಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ದೀರ್ಘವಾದ ಪತ್ರ ಬರೆದಿದ್ದರು. 'ಪ್ರತಿಯೊಬ್ಬ ತಾಯಿಯಂತೆ ನಾನು ನನ್ನ ಮಕ್ಕಳು ಚೆನ್ನಾಗಿ ಸೆಟಲ್ ಆಗಬೇಕು ಎಂದು ಕನಸು ಕಾಣುತ್ತೇನೆ. ಅದೇ ರೀತಿ ನಾನು ಕೂಡ ಜೀವನದಲ್ಲಿ ಉತ್ತಮ ರೀತಿ ಸೆಟಲ್ ಆಗಬೇಕು ಎಂದು ಬಯಸುವ ಅದ್ಭುತ ಮಕ್ಕಳು ಹಾಗೂ ಪೋಷಕರನ್ನು ಪಡೆದಿದ್ದೇನೆ. ಆ ಕ್ಷಣ ಕೊನೆಗೂ ಬಂದಿದೆ. ಅದ್ಭುತ ಸಂಗಾತಿ ಮತ್ತು ಕಾಳಜಿ ವಹಿಸುವ ರಾಮ್ ನನ್ನ ಜೀವನದಲ್ಲಿ ಬಂದಿದ್ದಾರೆ. ಶೀಘ್ರದಲ್ಲಿ ಮದುವೆ ಆಗುತ್ತಿರುವ ಬಗ್ಗೆ ಖುಷಿಯಾಗಿದ್ದೀನಿ' ಎಂದು ಬರೆದುಕೊಂಡಿದ್ದರು.

ಇಬ್ಬರು ಮಕ್ಕಳಿದ್ದಾರೆ

ಇಬ್ಬರು ಮಕ್ಕಳಿದ್ದಾರೆ

ಸುನಿತಾಗೆ ಮತ್ತು ಮೊದಲ ಪತಿ ಕಿರಣ್ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.

More from Filmibeat

English summary
Singer Sunitha Updadrashta will tie the knot with Ram Veerapaneni on January 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X