ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್
ಸಂಗೀತದ ಮೂಲಕ ನಿಮ್ಮೆಲ್ಲರನ್ನು ಸಮ್ಮೋಹನಗೊಳಿಸುವಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರದು ಎತ್ತಿದ ಕೈ. ಇವರು ಕಾಲಿವುಡ್ ನಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ಅಂದಹಾಗೆ ಇವರು ಒಮ್ಮೆ ಕನ್ನಡಕ್ಕೂ ಹಾಡಿದ್ದರು. 'ಜ್ವಲಂತಂ' ಎಂಬ ಹೊಸಬರ ಚಿತ್ರದ, ತಮಟೆ ಎಂಬ ಹಾಡಿಗೆ ಅನಿರುದ್ಧ್ ಅವರು ಧ್ವನಿ ನೀಡಿದ್ದರು.
ಇದೀಗ ಅದೇ ಅನಿರುದ್ಧ್ ಅವರು ವಿಶೇಷವಾದ ಹೊಸ ಹಾಡೊಂದನ್ನು ಹೊರತರುತ್ತಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್ ಮತ್ತು ನಟಿ ಕೀರ್ತಿ ಸುರೇಶ್ ಅವರು ಒಂದಾಗಿ ಕಾಣಿಸಿಕೊಂಡಿರುವ 'ರೆಮೋ' ಚಿತ್ರದ 'ಸಿರಿಕ್ಕಾದೆ' ಎಂಬ ವಿಶೇಷ ಹಾಡೊಂದನ್ನು ಹೊರತರುತ್ತಿದ್ದಾರೆ. ಈ ಹಾಡಿನ ವಿಡಿಯೋ ಇಲ್ಲಿದೆ ನೋಡಿ....
'ರೆಮೋ' ಚಿತ್ರದ ಪ್ರಚಾರಾರ್ಥವಾಗಿ ಅನಿರುದ್ಧ್ ಅವರು 'ಸಿರಿಕ್ಕಾದೆ' ಎಂಬ ಪ್ರೊಮೋಷನಲ್ ಮ್ಯೂಸಿಕ್ ವಿಡಿಯೋವನ್ನು ಹೊರತರುತ್ತಿದ್ದು, ಎಲ್ಲರಿಗೂ ಭಾರಿ ಕುತೂಹಲ ಮೂಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ....

ವಿಶೇಷ ಹಾಡು
ಶಿವಕಾರ್ತಿಕೇಯನ್ ಮತ್ತು ಕೀರ್ತಿ ಸುರೇಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ರೆಮೋ' ಚಿತ್ರದ ಪ್ರಚಾರಾರ್ಥವಾಗಿ 'ಸಿರಿಕ್ಕಾದೆ' ಎಂಬ ವಿಶೇಷ ಮ್ಯೂಸಿಕ್ ವಿಡಿಯೋ ಒಂದನ್ನು ಸಂಗೀತ ನಿರ್ದೇಶಕ ಅನಿರುದ್ಧ್ ಅವರು ಹೊರತರುತ್ತಿದ್ದಾರೆ.

ಯಾವಾಗ ರಿಲೀಸ್
ಅಂದಹಾಗೆ ಈ ವಿಶೇಷ ಹಾಡು ಆಗಸ್ಟ್ 18, ಸಂಜೆ 6 ಗಂಟೆಗೆ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಈ ಹಾಡು ಸೋನಿ ಮ್ಯೂಸಿಕ್, ಆಫೀಶಿಯಲ್ ಯುಟ್ಯೂಬ್ ಚಾನೆಲ್ ಮತ್ತು ಟ್ವಿಟ್ಟರ್ ಪೇಜ್ ಗಳಲ್ಲಿ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.

ಕಾನ್ಸೆಪ್ಟ್ ಯಾರದ್ದು.?
ಅಂದಹಾಗೆ ಈ ಮ್ಯೂಸಿಕ್ ವಿಡಿಯೋ ಮಾಡಲು ಐಡಿಯಾ ಕೊಟ್ಟಿದ್ದು, ಪ್ರಭು ರಾಧಾಕೃಷ್ಣನ್ ಅವರು. ಜೊತೆಗೆ ಇದಕ್ಕೆ ನಟ ನಿವಿನ್ ಪೌಲ್ ಮತ್ತು ಪ್ರಭು ರಾಧಾಕೃಷ್ಣನ್ ಅವರು 24ಎ.ಎಂ ಸ್ಟುಡಿಯೋಸ್, ಪ್ರೊಡಕ್ಷನ್ ನಂ.3 ಬ್ಯಾನರ್ ಅಡಿಯಲ್ಲಿ ನಿರ್ದೇಶನ ಮಾಡಿದ್ದಾರೆ. ಆರ್.ಡಿ ರಾಜಾ ಅವರು ಈ ಹಾಡಿಗೆ ಬಂಡವಾಳ ಹೂಡಿದ್ದಾರೆ.

ತೆರೆಯ ಹಿಂದಿನ ಕೈಗಳು
ಸಂಗೀತ: ಯೂತ್ ಫೇವರಿಟ್ ಅನಿರುದ್ಧ್
ಸಾಹಿತ್ಯ: ವಿಘ್ನೇಶ್ ಶಿವನ್
ವೋಕಲ್ಸ್: ಅರ್ಜುನ್ ಕನ್ನುನ್ಗೋ ಮತ್ತು ಶ್ರೀನಿಧಿ ವೆಂಕಟೇಶ್
ಪ್ರೊಡಕ್ಷನ್ ಡಿಸೈನರ್: ಟಿ.ಮುತ್ತುರಾಜ್
DOP: ಸ್ವರೂಪ್ ಫಿಲಿಪ್
ಸಂಕಲನ: ತನುಜ್
ಕಾಸ್ಟ್ಯೂಮ್ ಡಿಸೈನರ್: ಪಲ್ಲವಿ ಸಿಂಗ್
ಕೇಶಶೈಲಿ: ರಚೆಲ್ ಬಿ ಸಿಂಗ್
ಮೇಕಪ್ಪ್: ಪಿಂಕಿ ಲೋಹರ್, ಅಂಬಿಕಾ
ಸ್ಟಿಲ್ಸ್: ಮಾರ್ಟಿನ್ ದೋನರಾಜ್
ಪ್ರೊಡಕ್ಷನ್ ಎಕ್ಸಿಕ್ಯೂಟಿವ್: ವೀರ ಶಂಕರ್
ಕ್ರಿಯೇಟಿವ್ ಪ್ರೊಡ್ಯೂಸರ್: ಜೋನ್
ಎಕ್ಸಿಕ್ಯೂಟಿವ್ ನಿರ್ಮಾಪಕ: ರವಿಕುಮಾರ್

ತಾರಾಗಣ
ನಟ ಶಿವಕಾರ್ತಿಕೇಯನ್, ನಟಿ ಕೀರ್ತಿ ಸುರೇಶ್, ಅನಿರುದ್ಧ್ ರವಿಚಂದರ್, ಅರ್ಜುನ್ ಕಾಂಗೋ, ಶ್ರೀನಿಧಿ ವೆಂಕಟೇಶ್, ಇನ್ನೋ ಗೆಂಗಾ ಮರಿಯಾ, ಶಶಾಂಕ್ ವಿಜಯ್

ಇಂಗ್ಲೀಷ್ ನಲ್ಲೂ ಲಭ್ಯವಿದೆ
ಈ ಹಾಡನ್ನು ಇಂಗ್ಲೀಷ್ ವರ್ಷನ್ ನಲ್ಲಿ ಕೂಡ ಬಿಡುಗಡೆ ಮಾಡಲಿದ್ದು, ಎಂ.ಟಿ.ವಿ ಮೂಲಕ ಒಂದು ವಾರದ ಬಳಿಕ ಬಿಡುಗಡೆ ಆಗಲಿದೆ.


Click it and Unblock the Notifications











