For Quick Alerts
  ALLOW NOTIFICATIONS  
  For Daily Alerts

  ಉತ್ತರ ಕನ್ನಡ: ಟ್ರೋಲ್‌ಗಳಿಂದಾಗಿ ನೊಂದ ಹಾಡುಗಾರ 'ರವಿಯಣ್ಣ'ನ ಕುಟುಂಬ

  By ಕಾರವಾರ ಪ್ರತಿನಿಧಿ
  |

  ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ದಿನ ಬೆಳಗಾಗುವುದರೊಳಗೆ ಸ್ಟಾರ್‌ಗಳಾಗಿ ಮಿಂಚುವವರು ಒಂದು ಕಡೆಯಾದರೆ, ಇವುಗಳ ಹಾವಳಿಗೆ ರಾಜಕೀಯ ಪದವಿಗಳನ್ನೂ ಕಳೆದುಕೊಂಡವರ ನಿದರ್ಶನಗಳು ನಮ್ಮ ನಡುವಿದೆ. ಈ ಸಾಮಾಜಿಕ ಜಾಲತಾಣಗಳು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದು ಎನ್ನುವುದು ಕೂಡ ಹಲವರಿಗೆ ತಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಅಪ್ಪಿತಪ್ಪಿ ಏನನ್ನಾದರೂ ಹಂಚಿಕೊಂಡರೆ ಮುಗೀತು, ಅದು ಸಾಗರಕ್ಕೆ ಸೇರಿದ ವಸ್ತುವಿನಂತೆ!

  ಅಷ್ಟಕ್ಕೂ ಈ ಪೀಠಿಕೆಗೆ ಕಾರಣ ಸಾಮಾಜಿಕ ಜಾಲತಾಣಗಳಿಂದಾಗಿ ಕೆಲವು ದಿನಗಳವರೆಗೆ ರಾಜ್ಯದಾದ್ಯಂತ ಪ್ರಸಿದ್ಧಿಯಾಗಿ, ನಂತರದಲ್ಲಿ ಅದು ಪ್ರಸಿದ್ಧಿಯಲ್ಲ, ಕೇವಲ ಅಪಹಾಸ್ಯ ಎಂಬುವುದನ್ನು ಅರಿತ ಮುಗ್ಧ ಯುವಕನ ಕುಟುಂಬ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ತಿಳಿಸುವುದಕ್ಕಾಗಿ. ಹೌದು, ಇತ್ತೀಚಿನ ಕೆಲ ವಾರಗಳಿಂದ 'ರವಿಯಣ್ಣ' ಹೆಸರಿನಲ್ಲಿ ಓರ್ವ ಯುವಕ ರಾಜ್ಯದಾದ್ಯಂತ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ. ಬಾಯಿಗೆ ಬಂದಂತೆ ವಕ್ರವಾಗಿ ಹಾಡುಗಳನ್ನು ಹಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದ. ಸಾಕಷ್ಟು ಜನ ಇವನ ಹಾಡಿನ ಧಾಟಿಗೆ ನಕ್ಕು ತಮ್ಮವರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದರು. ಆ ಮೂಲಕ ಈ 'ರವಿಯಣ್ಣ' ಹಾಸ್ಯದ ವಸ್ತುವಾಗಿ ಎಲ್ಲರಿಗೂ ತನ್ನ ಹಾಡುಗಳಿಂದಲೇ ನಗಿಸಲಾರಂಭಿಸಿದ್ದ. ಅಲ್ಲದೇ ಈತನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆಯಾಗುತ್ತಿದ್ದವು. ಫೇಸ್ ಬುಕ್, ಇನ್ಟ್ಟಾಗ್ರಾಂ, ಯೂಟ್ಯೂಬ್ ಎಲ್ಲಿ ನೋಡಿದರಲ್ಲಿ 'ರವಿಯಣ್ಣ' ಹವಾ ಬಲು ಜೋರಾಗಿತ್ತು. ಹೀಗಾಗಿ ಈತನ ವಿಡಿಯೋಗಳಿಗಾಗಿ ಇನ್ನೂರಕ್ಕೂ ಅಧಿಕ ವಾಟ್ಸಪ್ ಗ್ರೂಪ್ ಗಳು 'ರವಿಯಣ್ಣ'ನ ಅಭಿಮಾನಿಗಳು ಹೆಸರಿನಲ್ಲಿ ರಚನೆಯಾಗಿವೆ.

  ಇದು ಒಂದುಕಡೆಯಾದರೆ, ಇನ್ನೂ ಕೆಲವರು ಈತ ವಕ್ರವಾಗಿ ಹಾಡಿದ ಹಾಡುಗಳನ್ನ ಇನ್ನಷ್ಟು ಎಡಿಟ್ ಮಾಡಿ ಟ್ರೋಲ್ ಮಾಡಿ ಅಪಹಾಸ್ಯ ಮಾಡಿದರು. ಕುಮಟಾ ಭಾಗದಲ್ಲಂತೂ ಈತ ಸಿಕ್ಕಾಗೆಲ್ಲ ಈತನ ಬಳಿ ಕೇಳಿ ಕೇಳಿ ಹಾಡು ಹೇಳಿಸಿಕೊಂಡು, ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು. ವಿದ್ಯಾರ್ಥಿಗಳು ಈತನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದರು. ಆದರೆ ಏನೂ ಅರಿಯದ ಮುಗ್ಧ 'ರವಿಯಣ್ಣ' ತಾನು ಖ್ಯಾತಿ ಗಳಿಸಿದ್ದೇನೆಂದುಕೊಂಡು ಜನ ಹೇಳಿದ್ದನ್ನ, ಕೇಳಿದ್ದನ್ನ ಹಾಡಿ ರಂಜಿಸಲಾರಂಭಿಸಿದ.

  ಯೂಟ್ಯೂಬ್‌ ಚಾನೆಲ್‌ನಲ್ಲಿ ರವಿಯಣ್ಣನ ನೈಜ ಬದುಕು ಅನಾವರಣ

  ಯೂಟ್ಯೂಬ್‌ ಚಾನೆಲ್‌ನಲ್ಲಿ ರವಿಯಣ್ಣನ ನೈಜ ಬದುಕು ಅನಾವರಣ

  ಆದರೆ‌ ರವಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕಾಗಿ ಟ್ರೋಲ್ ಆಗುತ್ತಿರುವುದನ್ನು ಕಂಡು ಆತನ ಕುಟುಂಬ ಕಣ್ಣೀರು ಹಾಕುತ್ತಿದೆ. ರವಿಯ ಕುರಿತು ಯೂಟ್ಯೂಬ್ ಗಳಲ್ಲಿ ರೋಸ್ಟ್ ವಿಡಿಯೋಗಳನ್ನು ಮಾಡಿದರು, ರವಿಯನ್ನೇ ನಟನೆಗೆ ಬಳಸಿಕೊಂಡು ಆತನನ್ನೇ ಮೂದಲಿಸುವ ಶಾರ್ಟ್ ಮೂವಿ ಮಾಡಿದರು. ಇದೆಲ್ಲವೂ ರವಿಯ ಕುಟುಂಬದಲ್ಲಿ ನೋವಿನ ಅಧ್ಯಾಯಕ್ಕೆ ಕಾರಣವಾಗಿದೆ. ಇವೆಲ್ಲ ಬೆಳವಣಿಗೆ ಕಂಡ 'ಜಿ ಎಂಟರ್ಟೇನ್ಮೆಂಟ್' ಎಂಬ ಯೂಟ್ಯೂಬ್ ಚಾನೆಲ್ ಭಾನುವಾರ 'ಟ್ರೋಲ್ ಗಳ ಹಿಂದೆ ರವಿಯ ನೈಜ ಬದುಕು ಹೇಗಾಗಿದೆ?' ಎಂಬುದನ್ನು ತೋರಿಸಿಕೊಟ್ಟಿದೆ. ಈ ವಿಡಿಯೋದಲ್ಲಿ ರವಿ, ಆತನ ತಾಯಿ ಹಾಗೂ ನೆರೆ ಮನೆಯವರು ರವಿಯ ಕುಟುಂಬ ಅನುಭವಿಸುತ್ತಿರುವ ಕಷ್ಟಗಳ‌ ಬಗ್ಗೆ ಹೇಳಿಕೊಂಡಿದೆ.

  ರವಿಯಣ್ಣನ ಪೂರ್ತಿ ಹೆಸರು ರವಿ ಬೋರಳ್ಳಿ

  ರವಿಯಣ್ಣನ ಪೂರ್ತಿ ಹೆಸರು ರವಿ ಬೋರಳ್ಳಿ

  ಅಷ್ಟಕ್ಕೂ ಈ ರವಿಯಣ್ಣನ ಪೂರ್ತಿ ಹೆಸರು ರವಿ ಬೋರಳ್ಳಿ. ಹೆಚ್ಚೇನು ವಿದ್ಯಾಭ್ಯಾಸ ಪಡೆಯದ ಈತ ಕುಮಟಾದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅಂಕೋಲಾ ತಾಲೂಕಿನ ಅಚವೆ ಬಳಿಯ ಬೋರಳ್ಳಿಯಲ್ಲಿ ಒಂದು ಚಿಕ್ಕ ಜೋಪಡಿಯಂಥ ಮನೆಯಲ್ಲಿ ರವಿಯ ಕುಟುಂಬ ವಾಸ ಮಾಡುತ್ತಿದೆ. ತಾಯಿ, ತಮ್ಮ ಹಾಗೂ ತಂಗಿಯನ್ನು ಹೊಂದಿರುವ ರವಿಗೆ ಚಿಕ್ಕಂದಿನಿಂದಲೂ ಹಾಡುವ ಅಭ್ಯಾಸ. ಆದರೆ ಶಾಲೆ ಕಲಿಯದ ಕಾರಣ, ಓದು- ಬರಹ ಅಷ್ಟೊಂದಾಗಿ ಬರದ ಕಾರಣ ಹಾಡಿನ ಉಚ್ಛರಣೆಯಲ್ಲಿ ರವಿ ತಪ್ಪುತ್ತಾನೆ. ಇದು ಟ್ರೋಲ್ ಆಗಲು ಕಾರಣವಾಗಿದೆ.

  ಅಕ್ಷರ ಕಲಿತು ಹಾಡುತ್ತೇನೆ ಎಂದಿರುವ ರವಿಯಣ್ಣ

  ಅಕ್ಷರ ಕಲಿತು ಹಾಡುತ್ತೇನೆ ಎಂದಿರುವ ರವಿಯಣ್ಣ

  ಈ ಬಗ್ಗೆ ಸ್ವತಃ ರವಿ ವಿಡಿಯೋದಲ್ಲಿ ಹೇಳಿಕೊಂಡಿದ್ದು, 'ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ನನಗೆ ಉಚ್ಛರಣೆ ಸರಿಯಾಗಿ ಬರುವುದಿಲ್ಲ. ಆದರೆ ಅಕ್ಷರ ಕಲಿತು ಹಾಡುತ್ತೇನೆ' ಎಂದಿದ್ದಾನೆ. 'ತಮಾಷೆ ಮಾಡಿ ಪರ್ವಾಗಿಲ್ಲ, ಆದರೆ ಯಾರೂ ಕೆಟ್ಟದಾಗಿ ಟ್ರೋಲ್ ಮಾಡಬೇಡಿ. ನನ್ನ ತಾಯಿ, ಮನೆಯವರು ಟ್ರೋಲ್ ಗಳಿಂದಾಗಿ ನೊಂದಿದ್ದಾರೆ' ಎಂದು ಹೇಳಿಕೊಂಡಿದ್ದಾನೆ.

  ತಾಯಿ ಸಹ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ

  ತಾಯಿ ಸಹ ವಿಡಿಯೋದಲ್ಲಿ ಕಣ್ಣೀರು ಹಾಕಿದ್ದಾರೆ

  ರವಿಯ ತಾಯಿ ಕೂಡ ವಿಡಿಯೋದಲ್ಲಿ ಕಣ್ಣೀರು ಹಾಕಿಕೊಂಡು ತಾನು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಹಾಗೂ ತನ್ನ ಮಗನ ಕುರಿತು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ, ಸಾಮಾಜಿಕ ಜಾಲತಾಣಗಳು ಓರ್ವನ ಜೀವನ ಸುಧಾರಣೆಗೆ ನೆರವಾಗಬೇಕಾಗಿದೆಯೇ ಹೊರತು ಜೀವನ ಹಾಳು ಮಾಡುವುದಕ್ಕಲ್ಲ ಎನ್ನುವುದನ್ನು ಕೂಡ ಅರಿತುಕೊಳ್ಳಬೇಕಾಗಿದೆ.

  English summary
  Music lover and amateur singer from Uttara Kannada district Ravianna hurt by trolls. His singing is trolled on social media. He request netizen not to troll him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X