twitter
    For Quick Alerts
    ALLOW NOTIFICATIONS  
    For Daily Alerts

    ಹಿಂದು ದೇವರಿಗೆ ಅಪಮಾನ: ಹಾಡು ಹಿಂಪಡೆಯಲು ಒತ್ತಾಯ

    By ಫಿಲ್ಮಿಬೀಟ್ ಡೆಸ್ಕ್
    |

    ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಹಾಡುಗಳು ವಿವಾದ ಎಬ್ಬಿಸುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ನಾಲ್ಕು ಪ್ರತ್ಯೇಕ ತೆಲುಗು ಹಾಡುಗಳು ಕೇಳುಗರ ಅಸಮಾಧಾನಕ್ಕೆ ಕಾರಣವಾಗಿದೆ.

    'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನಲ್ಲಿ 'ಕಣ್ಣೇ ಅಧಿರಿಂದಿ' ಹಾಡು ಹಾಡಿ ಹಿಟ್ ಆಗಿದ್ದ ಮಂಗ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ 'ಬೋನಾಲ ಪಾಟ' ವಿವಾದ ಎಬ್ಬಿಸಿದ್ದು ಈಗ ಹಳೆಯ ವಿಷಯ. ಬಿಜೆಪಿ ಪಕ್ಷಕ್ಕೆ ಸೇರಿದ ಮುನ್ಸಿಪಲ್ ಸದಸ್ಯರೊಬ್ಬರು ಮಂಗ್ಲಿ ವಿರುದ್ಧ ದೂರು ಸಹ ದಾಖಲಿಸಿದ್ದರು. ಇದಾದ ನಂತರ ಬಿಡುಗಡೆ ಆದ ಮೂರು ಹಾಡುಗಳು ಮತ್ತೆ ವಿವಾದ ಎಬ್ಬಿಸಿವೆ.

    ಮಂಗ್ಲಿ ಹಾಡಿನ ವಿವಾದ ಇನ್ನೇನು ಅಂತ್ಯವಾಯಿತು ಎಂದುಕೊಳ್ಳುವಾಗಲೇ ಇನ್ನೂ ಹೆಸರು ಹಾಡುಗಳು ವಿವಾದ ಎಬ್ಬಿಸಿವೆ. ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆದ ಸಿನಿಮಾ ಒಂದರ ಹಾಡು ಹಾಗೂ ಇನ್ನೂ ಬಿಡುಗಡೆ ಆಗದ ಎರಡು ಸಿನಿಮಾದ ಹಾಡುಗಳು ಇದೀಗ ತೆಲುಗು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

    ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆದ 'ಇಪ್ಪುಡು ಕಾಕ ಇಂಕೆಪ್ಪಡು' ಹೆಸರಿನ ಎಂಬ ಶೃಂಗಾರಮಯ ದೃಶ್ಯಗಳನ್ನು ಅತಿಯಾಗಿ ಹೊಂದಿದ್ದ ಸಿನಿಮಾ ಒಂದರಲ್ಲಿ ದೇವರ ನಾಮವೊಂದನ್ನು ಕೆಟ್ಟ ರೀತಿಯಲ್ಲಿ ಬಳಸಲಾಗಿತ್ತು. ಇದು ತೆಲುಗು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯ್ತು.

    'ಇಪ್ಪುಡು ಕಾಕ ಇಂಕೆಪ್ಪುಡು' ಸಿನಿಮಾದ ಹಾಡು

    'ಇಪ್ಪುಡು ಕಾಕ ಇಂಕೆಪ್ಪುಡು' ಸಿನಿಮಾದ ಹಾಡು

    'ಇಪ್ಪುಡು ಕಾಕ ಇಂಕೆಪ್ಪುಡು' ಸಿನಿಮಾವು ವಿವಾಹ ಪೂರ್ವ ಲೈಂಗಿಕತೆ ವಿಷಯವನ್ನು ಬಹಳ ಬೋಲ್ಡ್ ಆಗಿ ಬಿಚ್ಚಿಟ್ಟಿತ್ತು. ಸಾಕಷ್ಟು ಶೃಂಗಾರಮಯ ದೃಶ್ಯಗಳು ಸಿನಿಮಾದಲ್ಲಿದ್ದವು. ಸಿನಿಮಾದ ಟ್ರೇಲರ್‌ನಲ್ಲಿ 'ಭಜ ಗೋವಿಂದಂ' ಹಾಡನ್ನು ಬಳಸಲಾಗಿತ್ತು. ಆದರೆ ಯುವಕ-ಯುವತಿ ಶಂಗಾರ ಕ್ರೀಡೆಯಲ್ಲಿ ತೊಡಗಿರುವ ದೃಶ್ಯಕ್ಕೆ ಹಿನ್ನೆಲೆಯಾಗಿ ಈ ಹಾಡನ್ನು ಬಳಸಿದ್ದರು ನಿರ್ದೇಶಕರು ಹಾಗಾಗಿ ಈ ಹಾಡಿಗೆ ತೀವ್ರ ವಿವಾದ ವಿರೋಧ ವ್ಯಕ್ತವಾಯಿತು. 'ಇಪ್ಪುಡು ಕಾಕ ಇಂಕೆಪ್ಪುಡು' ಸಿನಿಮಾವನ್ನು ವೈ ಯುಗಂಧರ್ ನಿರ್ದೇಶನ ಮಾಡಿದ್ದಾರೆ.

    ದೇವರಿಗೂ, ಕುಡುಕರಿಗೂ ಹೋಲಿಕೆ: ಆಕ್ಷೇಪ

    ದೇವರಿಗೂ, ಕುಡುಕರಿಗೂ ಹೋಲಿಕೆ: ಆಕ್ಷೇಪ

    ಇನ್ನೂ ಬಿಡುಗಡೆ ಆಗದ 'ಮಹಾಸಮುದ್ರಂ' ಸಿನಿಮಾದ ಹಾಡೊಂದು ಸಹ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ನಟಿ ರಂಭಾ ಬಗ್ಗೆ ಒಂದು ಜಾಲಿಯಾದ ಹಾಡಿದೆ. ಕುಡುಕರು ಮದ್ಯ ಸೇವನೆ ಮಾಡುತ್ತಾ ನಟಿ ರಂಭಾ ಅನ್ನು ಹೊಗಳುವ ಹಾಡದು. ಹಾಡಿನಲ್ಲಿನ ಕೆಲವು ಸಾಲುಗಳ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ''ಭಗವಂತ ಕೃಷ್ಣ ಕಿರುಬೆರಳಲ್ಲಿ ಪರ್ವತ ಎತ್ತಿದ, ಹನುಮಂತನೂ ಪರ್ವತ ಎತ್ತಿದ, ನಾವು ಬಾಟಲಿ ಎತ್ತುತ್ತೇವೆ'' ಎಂಬ ಸಾಲಿಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಾಲು ದೇವರು-ಕುಡುಕರು ಸಮ ಎಂಬಂಥ ಅರ್ಥ ಹೊಮ್ಮಿಸುತ್ತಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದಾರೆ. 'ಮಹಾಸಮುದ್ರಂ' ಸಿನಿಮಾದಲ್ಲಿ ಶರ್ವಾನಂದ, ಸಿದ್ಧಾರ್ಥ್, ಜಗಪತಿ ಬಾಬು, ಅದಿತಿರಾವ್ ಹೈದಿರಿ ನಟಿಸಿದ್ದಾರೆ. ಸಿನಿಮಾವನ್ನು ಅಜಯ್ ಭೂಪತಿ ನಿರ್ದೇಶಿಸಿದ್ದಾರೆ.

    ಭಜನೆ ಹಾಡನ್ನು ಐಟಂ ಹಾಡಾಗಿ ಪರಿವರ್ತನೆ

    ಭಜನೆ ಹಾಡನ್ನು ಐಟಂ ಹಾಡಾಗಿ ಪರಿವರ್ತನೆ

    ಮತ್ತೊಂದು ಸಿನಿಮಾ 'ವರಡು ಕಾವಲೇನು' ಸಿನಿಮಾದಲ್ಲಿ ಭಜನೆ ಹಾಡೊಂದನ್ನು ಐಟಂ ಹಾಡಿಗೆ ಬಳಸಿಕೊಂಡಿದ್ದು ಸಹ ಸಾಕಷ್ಟು ಸುದ್ದಿಯಾಗಿತ್ತು. 'ದಿಗು ದಿಗು ದಿಗು ನಾಗ' ಎಂಬುದು ತೆಲುಗಿನ ಭಜನೆ ಗೀತೆ. ಆದರೆ ಈ ಹಾಡನ್ನು ಸಿನಿಮಾದಲ್ಲಿ ಐಟಂ ಹಾಡಾಗಿ ಬಳಸಲಾಗಿದೆ. ಇದಕ್ಕೂ ತೀವ್ರ ಆಕ್ಷೇಪಗಳು ಕೇಳಿಬಂದಿದ್ದವು. ಸಿನಿಮಾದಲ್ಲಿ ನಾಯಕರಾಗಿ ನಾಗ ಶೌರ್ಯ, ನಾಯಕಿಯಾಗಿ ರಿತು ವರ್ಮಾ ನಟಿಸಿದ್ದರು. ಸಿನಿಮಾವನ್ನು ಲಕ್ಷ್ಮಿ ಸೌಜನ್ಯ ನಿರ್ದೇಶನ ಮಾಡಿದ್ದರು. ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.

    ಮಂಗ್ಲಿ ಹಾಡು ವಿವಾದ ಎಬ್ಬಿಸಿತ್ತು

    ಮಂಗ್ಲಿ ಹಾಡು ವಿವಾದ ಎಬ್ಬಿಸಿತ್ತು

    ಮಂಗ್ಲಿ ಹಾಡಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದ ಎಬ್ಬಿಸಿತ್ತು. ಮಂಗ್ಲಿ ಬಿಡುಗಡೆ ಮಾಡಿದ್ದ 'ಬೋನಾಲ ಪಾಟ' ಹಾಡಿನಲ್ಲಿ ದೇವತೆಯ ಶಕ್ತಿಯನ್ನು ಹೀಗಳೆಯಲಾಗಿದೆ. ದೇವಿಯನ್ನು ನಿಶ್ಯಕ್ತೆ ಎಂದು ಹಿಯಾಳಿಸಲಾಗಿದೆ. ದೇವಿ ತನ್ನ ಕರ್ತವ್ಯ ಮರೆತು ಕಲ್ಲಿನಂತೆ ಕುಳಿತುಬಿಟ್ಟಿದ್ದಾಳೆ ಎಂಬಿತ್ಯಾದಿ ಸಾಲುಗಳಿಂದ ದೇವಿನ ಸರ್ವಶಕ್ತತೆಯನ್ನು ಪ್ರಶ್ನೆ ಮಾಡಲಾಗಿದೆ ಎಂದು ಹಲವರು ಆರೋಪ ಮಾಡಿದರು. ಆ ನಂತರ ಹಾಡಿನ ಸಾಲುಗಳನ್ನು ತಿದ್ದು ಹಾಡನ್ನು ಮರು ಬಿಡುಗಡೆ ಮಾಡಲಾಯ್ತು. ಈ ನಡುವೆ ಮುನ್ಸಿಪಲ್ ಸದಸ್ಯರೊಬ್ಬರು ಮಂಗ್ಲಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದರು.

    English summary
    Few Telugu movie songs lands in controversy these days. Mahasamudram movie song, Ipputu Kaka Inkeppudu, Varudu Kavalenu movie songs lands in controversy.
    Sunday, August 8, 2021, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X