For Quick Alerts
  ALLOW NOTIFICATIONS  
  For Daily Alerts

  ವಿನೋದ್ ಪ್ರಭಾಕರ್ ಚಿತ್ರಕ್ಕಾಗಿ ಬಂದ 'ಬಾಹುಬಲಿ' ಗಾಯಕಿ

  By Pavithra
  |

  'ಬಾಹುಬಲಿ 2' ಸಿನಿಮಾದಲ್ಲಿ ಸಾಕಷ್ಟು ಜನರ ಗಮನ ಸೆಳೆದಿದ್ದ ಹಾಡು ಅನುಷ್ಕಾ ಸಮುದ್ರದ ಮೇಲೆ ನಿಂತು ಹಾಡುವ 'ಒರೆ ಒರು ರಾಜ ವೀರಾದಿ ವೀರ'.. ಕೇವಲ ಟಾಲಿವುಡ್ ಸಿನಿಮಾ ಪ್ರೇಮಿಗಳನ್ನು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರ ಪ್ರೇಮಿಗಳ ಮನಸ್ಸನ್ನು ಈ ಹಾಡು ಗೆದ್ದಿತ್ತು.

  'ಒರೆ ಒರು ರಾಜ ವೀರಾದಿ ವೀರ' ಹಾಡನ್ನು ಹಾಡಿನ ಗಾಯಕಿ ಸೋನಿ ಕಮೋಂಡರಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಸಿನಿಮಾದ ಒಂದು ಹಾಡನ್ನು ಸೋನಿ ಕಮೋಂಡರಿ ಹಾಡಿದ್ದಾರೆ.

  ಮರಿ ಟೈಗರ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್ ಮರಿ ಟೈಗರ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್

  ಸಂಗೀತ ನಿರ್ದೇಶಕ ಅಭಿಮಾನ್ ರಾಯ್, ಸೋನಿ ಕಮೋಂಡರಿ ಅವರನ್ನು ಕನ್ನಡಕ್ಕೆ ಕರೆತಂದಿದ್ದು ಇತ್ತೀಚಿಗಷ್ಟೆ ಹಾಡಿನ ರೆಕಾರ್ಡಿಂಗ್ ಕೆಲಸ ಮುಗಿಸಿದ್ದಾರೆ ಸಂಗೀತ ನಿರ್ದೇಶಕರು. ಅರುಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಮಹೇಶ್ ಗೌಡ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಸಿನಿಮಾ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದೆ.

  Soni comradery sings a song for Vinod Prabhakars Raghads film

  ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಅವರದು ರಫ್ ಅಂಡ್‌ ಟಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ ಚೈತ್ರ ರೆಡ್ಡಿ ನಾಯಕಿಯಾಗಿ 'ರಗಡ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಇನ್ನು ಖಳನಾಯಕನ ಪಾತ್ರದಲ್ಲಿ ದೀಪಕ್ ಶೆಟ್ಟಿ ಮಿಂಚಿದ್ದಾರೆ.

  English summary
  Bahubali 2 movie fame Soni comradery sings for Kannada film. Soni comradery sings a song for Vinod Prabhakar's Raghad's film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X