For Quick Alerts
  ALLOW NOTIFICATIONS  
  For Daily Alerts

  ಈ ಸುದ್ದಿಯನ್ನೂ ಕೇಳುವಂತಾಗಬಹುದು: ಆಘಾತಕಾರಿ ಸಂಗತಿ ಹಂಚಿಕೊಂಡ ಸೋನು ನಿಗಮ್

  By Avani Malnad
  |

  'ಆತ್ಮಹತ್ಯೆಯ ಸುದ್ದಿಗಳನ್ನು ಶೀಘ್ರದಲ್ಲಿಯೇ ಸಂಗೀತ ಕ್ಷೇತ್ರದಲ್ಲಿಯೂ ಕೇಳಬಹುದು'- ಹೀಗೊಂದು ಆಘಾತಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ ಖ್ಯಾತ ಗಾಯಕ ಸೋನು ನಿಗಮ್.

  ನಾಚಿಕೆ ಇಲ್ಲದೇ ಬೆಡ್ ರೂಮ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಸಮಂತಾ | Samantha | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಕಲಾವಿದರು ಮಾತ್ರವಲ್ಲ, ಚಿತ್ರರಂಗದ ವಿವಿಧ ವಿಭಾಗಗಳ ಜನರು ತಮ್ಮ ಬದುಕನ್ನು ಒರೆಗೆ ಹಚ್ಚಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿ ಎಂಬ ಕಿರೀಟ ಶಾಶ್ವತವಲ್ಲ. ಅದರಾಚೆಗೆ ತಾವೂ ಸಾಮಾನ್ಯ ಮನುಷ್ಯರೇ ಎಂಬುದನ್ನು ಅವರು ಹೇಳಿಕೊಳ್ಳುತ್ತಿದ್ದಾರೆ.

  ಸೌದಿ ದೊರೆಗಳ ಭಯದಿಂದ ತಣ್ಣಗಾದರೆ ಸೋನು ನಿಗಂ? ಟ್ವಿಟರ್ ಖಾತೆ ನಾಪತ್ತೆಸೌದಿ ದೊರೆಗಳ ಭಯದಿಂದ ತಣ್ಣಗಾದರೆ ಸೋನು ನಿಗಂ? ಟ್ವಿಟರ್ ಖಾತೆ ನಾಪತ್ತೆ

  ನಾನು ಹೇಳಬೇಕಿತ್ತು. ಇಡೀ ಭಾರತ ಒಂದು ಮಾನಸಿಕ, ಭಾವನಾತ್ಮಕ ಒತ್ತಡದಲ್ಲಿದೆ. ಒಂದು ಸುಶಾಂತ್ ಸಿಂಗ್ ಸಾವು ಮತ್ತೊಂದು ಭಾರತೀಯ ಸೈನಿಕರ ಹತ್ಯೆ. ನಮ್ಮ ಕಣ್ಣಮುಂದೆಯೇ ಚಿಕ್ಕ ಹುಡುಗ ಸತ್ತಿದ್ದು ಸಣ್ಣ ವಿಷಯ ಅಲ್ಲ. ಯಾರಾದರೂ ಭಾವುಕರಾಗುತ್ತಾರೆ. ಮನುಷ್ಯ ಆಗಿರುವವನಿಗೆ ಅದು ಸಹಜ ಎಂದು ಸೋನು ನಿಗಮ್ ಹೇಳಿದ್ದಾರೆ. ಮುಂದೆ ಓದಿ..

  ನಾಳೆ ಗಾಯಕನ ಸಾವು ಕೇಳಬಹುದು...

  ನಾಳೆ ಗಾಯಕನ ಸಾವು ಕೇಳಬಹುದು...

  ಇಂದು ಸುಶಾಂತ್ ಸಿಂಗ್ ರಜಪೂತ್ ಸತ್ತಿದ್ದಾರೆ. ಒಬ್ಬ ನಟ ಸತ್ತಿದ್ದಾರೆ. ನೀವು ನಾಳೆ ಗಾಯಕ, ಸಂಗೀತ ನಿರ್ದೇಶಕ, ಗೀತ ರಚನೆಕಾರನ ಸಾವಿನ ಬಗ್ಗೆ ಕೇಳಬಹುದು. ಇದು ಮ್ಯೂಸಿಕ್ ಮೊಹಲ್ಲಾ. ಸಿನಿಮಾಕ್ಕಿಂತ ದೊಡ್ಡ ಮಾಫಿಯಾ ಮ್ಯೂಸಿಕ್. ಇಲ್ಲಿ ಬಿಜಿನೆಸ್ ಮಾಡುವುದು ಅಗತ್ಯ. ಆದರೆ ಅವರು ಬಿಸಿನೆಸ್ ರೂಲ್ ಮಾಡುತ್ತಿದ್ದಾರೆ. ನಾನು ಅದೃಷ್ಟವಂತ. ಹಿಂದಿನ ಕಾಲದಲ್ಲಿಯೇ ಬಂದು ಬಚಾವಾದೆ. ಆದರೆ ಹೊಸ ಹುಡುಗರು ಬರುತ್ತಾರಲ್ಲ, ಅವರಿಗೆ ಬಹಳ ಕಷ್ಟವಿದೆ.

  ಹೊಸಬರಿಗೆ ಅವಕಾಶ ನೀಡುತ್ತಿಲ್ಲ

  ಹೊಸಬರಿಗೆ ಅವಕಾಶ ನೀಡುತ್ತಿಲ್ಲ

  ನಾನು ಎಲ್ಲರ ಬಗ್ಗೆ ಮಾತಾಡುತ್ತಿದ್ದೇನೆ. ಎಷ್ಟೊಂದು ಹುಡುಗ ಹುಡುಗಿಯರು ಹೇಳುತ್ತಿರುತ್ತಾರೆ, 'ಸೋನು ಭಯ್ಯಾ ನನಗೆ ಅವಕಾಶ ಕೊಡುವುದಾಗಿ ಹೇಳಿರುತ್ತಾರೆ. ಆದರೆ ಕೊನೆಯಲ್ಲಿ ಮ್ಯೂಸಿಕ್ ಕಂಪೆನಿಗಳು ಅವಕಾಶ ಕೊಡುವುದಿಲ್ಲ' ಎಂದು. ಅವೆಲ್ಲರೂ ಮಕ್ಕಳು. ನಿರ್ಮಾಪಕರು, ನಿರ್ದೇಶಕರು ಅವರಿಗೆ ಕೆಲಸ ನೀಡಲು ಬಯಸುತ್ತಾರೆ, ಆದರೆ ಅವರನ್ನು ನಿಯಂತ್ರಿಸುವುದು ಮ್ಯೂಸಿಕ್ ಕಂಪನಿಗಳು. ನೀವು ಸಿನಿಮಾದಲ್ಲಿ, ರೇಡಿಯೋದಲ್ಲಿ ಸಂಗೀತವನ್ನು ನಿಯಂತ್ರಿಸುತ್ತೀರಿ ಎಂದು ಗೊತ್ತು. ಆದರೆ ಚಿಕ್ಕ ಹುಡುಗರು ಅವರಿಗೆ ಅವಕಾಶ ನೀಡಿ. ಎಲ್ಲದಕ್ಕೂ ಹೀಗೆ ನಿಯಂತ್ರಣ ಹಾಕಿದರೆ ಹೊಸ ಪ್ರತಿಭೆಗಳು ಹೇಗೆ ಬರುತ್ತಾರೆ?

  ''ನಾನೊಬ್ಬ ಕನ್ನಡಿಗ, ಹಿಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿದ್ದೆ''- ಸೋನು ನಿಗಮ್''ನಾನೊಬ್ಬ ಕನ್ನಡಿಗ, ಹಿಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿದ್ದೆ''- ಸೋನು ನಿಗಮ್

  ಇರುವುದೇ ಇಬ್ಬರ ಹಿಡಿತದಲ್ಲಿ

  ಇರುವುದೇ ಇಬ್ಬರ ಹಿಡಿತದಲ್ಲಿ

  ಇದು ಸರಿಯಲ್ಲ. ಚಿತ್ರೋದ್ಯಮದ ಸಂಗೀತ ಇಬ್ಬರ ಕೈ ಹಿಡಿತದಲ್ಲಿದೆ. ಇಂಡಸ್ಟ್ರಿಯಲ್ಲಿ ಇರುವುದು ಇಬ್ಬರೇ ವ್ಯಕ್ತಿಗಳು. ಸಂಗೀತ ನಿರ್ದೇಶಕರು, ನಿರ್ಮಾಪಕರ ಕೈಯಲ್ಲಿ ಏನೂ ಇಲ್ಲ. ಅವರು ಹೊಸ ಪ್ರತಿಭೆಗಳನ್ನು ತೋರಿಸಲು ಹೋದರೂ ಆ ಕಂಪೆನಿಗಳು ಅವಕಾಶ ನೀಡುವುದಿಲ್ಲ. ಯಾರು ಹಾಡಬೇಕು, ಹಾಡಬಾರದು ಎಂಬುದನ್ನು ಅವರೇ ನಿರ್ಧರಿಸುತ್ತಾರೆ.

  ಹತಾಶೆಯನ್ನು ಕಂಡಿದ್ದೇನೆ

  ಹತಾಶೆಯನ್ನು ಕಂಡಿದ್ದೇನೆ

  ಆದರೆ ನಾನು ಅದರಲ್ಲಿ ಇಲ್ಲ. ಆ ಜಂಜಾಟದಿಂದ ಹೊರಬಂದಿದ್ದೇನೆ. 25 ವರ್ಷದಿಂದ ನನ್ನ ಇಷ್ಟದ ಹಾಡುವ ಕ್ಷೇತ್ರದಲ್ಲಿದ್ದೇನೆ. ಈ ಹಿಡಿತದಿಂದ ಹೊರಬಂದು ನನ್ನದೇ ಜಗತ್ತಿನಲ್ಲಿ ಖುಷಿಯಾಗಿದ್ದೇನೆ. ಆದರೆ ಹೊಸ ಹಾಡುಗಾರರು, ಹೊಸ ಕಂಪೋಸರ್‌ಗಳು, ಹೊಸ ಗೀತ ರಚನೆಕಾರರ ಕಣ್ಣುಗಳಲ್ಲಿ, ಮಾತುಗಳಲ್ಲಿ ತೀವ್ರವಾದ ಹತಾಶೆಯನ್ನು ನಾನು ಕಂಡಿದ್ದೇನೆ. ಅವರು ಸತ್ತರೆ ಅದರ ಪ್ರಶ್ನೆ ನಿಮ್ಮ ಮೇಲೆ ಬರುತ್ತದೆ.

  ಅವರೆಲ್ಲರೂ ಗಂಧರ್ವರು

  ಅವರೆಲ್ಲರೂ ಗಂಧರ್ವರು

  ದಯವಿಟ್ಟು ಹೊಸಬರ ಬಗ್ಗೆ ದಯೆ ತೋರಿ. ಅವರೆಲ್ಲರೂ ಗಂಧರ್ವರು. ಅವರಿಗೆ ದಾರಿ ಸುಲಭ ಮಾಡಿ. ಕೆಲವು ಪ್ರಭಾವಿಗಳು ಯಾರು ಹಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ನನ್ನ ಎಷ್ಟೋ ಹಾಡುಗಳನ್ನು ಬೇಡ ಎಂದು ಹೇಳಿದ್ದಾರೆ. ಇದೇ ರೀತಿ ಆರ್ಜಿತ್ ಸಿಂಗ್‌ಗೂ ಆಗಿದೆ. ಅದೇ ನಟನ ಮೇಲೆ ಈಗ ಪ್ರಶ್ನಾರ್ಥಕ ಚಿಹ್ನೆ ಇದೆಯಲ್ಲ... ನೀವು ಹೇಗೆ ಆ ಪವರ್ ಬಳಸುತ್ತೀರಿ?

  ನಾನು ಎಷ್ಟೊಂದು ಹಾಡುಗಳನ್ನು ಹಾಡಿದ್ದೇನೆ. ಅವುಗಳನ್ನು ಟ್ರ್ಯಾಕ್ ಆಗಷ್ಟೇ ಉಳಿಸಿ ಬೇರೆಯವರಿಂದ ಹಾಡಿಸಿದ್ದಾರೆ. ಅದನ್ನು ಹೇಳಲು ಮುಜುಗರವಾಗುತ್ತದೆ. ಇದು ಅವಮಾನ. ಕೆಲಸ ಕೊಡಿ ಎಂದು ನಾನು ಯಾರಿಗೂ ಕೇಳಿರಲಿಲ್ಲ. ಆದರೆ ಅವರೇ ಕರೆಸಿ ನನ್ನಿಂದ ಹಾಡು ಹಾಡಿಸಿ ಕೊನೆಗೆ ಬೇರೆಯವರಿಂದ ಡಬ್ ಮಾಡಿಸಿದ್ದಾರೆ.

  ಚಿಕ್ಕವರಿಗೆ ಹಿಂಸೆ ಕೊಡಬೇಡಿ

  ಚಿಕ್ಕವರಿಗೆ ಹಿಂಸೆ ಕೊಡಬೇಡಿ

  ನಾನು 1991ನಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ವರ್ಷ ಕೆಲಸ ಮಾಡಿರುವ ನನ್ನ ಜತೆಗೇ ಹೀಗೆ ಮಾಡಿದರೆ ಇನ್ನು ಸಣ್ಣ ಹುಡುಗರಿಗೆ ಹೇಗೆ ಮಾಡಬಹುದು? ಸ್ವಲ್ಪ ಸುಲಭ ಮಾಡಿ. ಒಂದು ಹಾಡನ್ನು ಹತ್ತು ಬಾರಿ ಹಾಡಿಸಿ ನಿಜವಾಗಿ ಹಾಡಿದವರಿಂದ ಅವಕಾಶ ಕಿತ್ತುಕೊಳ್ಳುವುದು ತಪ್ಪು. ದಯೆ, ಮಾನವೀಯತೆ ಪ್ರದರ್ಶಿಸಿ. ಹತ್ತು ಹಾಡು ಹಾಡಿಸಿ ನಿನ್ನನ್ನು ಸೆಲೆಕ್ಟ್ ಮಾಡುವುದಿಲ್ಲ ಎನ್ನುವುದು ಸರಿಯೇ?

  ಹಾಡು ಬರೆದವರಿಗೆ ಸ್ವಲ್ಪವೇ ಹಣ ಕೊಡುವುದು ತಪ್ಪಲ್ಲವೇ? ಕಂಪೋಸರ್‌ಗಳಿಗೂ ಸರಿಯಾದ ಅವಕಾಶಗಳಿಲ್ಲ. ನನ್ನ ಕಂಪೆನಿಯಲ್ಲಿ ಕಲಾವಿದನಾಗಿದ್ದರೆ ಮಾತ್ರ ಕೆಲಸ ಕೊಡುತ್ತೇವೆ ಎನ್ನುತ್ತಾರೆ. ನನಗೆ ಇದೆಲ್ಲ ಸಾಕಾಗಿದೆ. ಆದರೆ ಹೊಸಬರಿಗೆ ಈ ರೀತಿ ಮೋಸ ಮಾಡಬೇಡಿ. ಚಿಕ್ಕವರಿಗೆ ಹಿಂಸೆ ಕೊಡಬೇಡಿ. ಅವರಿಗೆ ಒಳ್ಳೆಯ ಜಾಗ ಇಲ್ಲ. ಅವರ ಜಾಗದಲ್ಲಿ ನಿಂತು ಅವರ ಸ್ಥಿತಿ ಅರ್ಥ ಮಾಡಿಕೊಳ್ಳಿ. ಅವರಿಗೆ ನಿಮ್ಮ ಕರುಣೆ, ಸಹಾಯ ಅವಕಾಶ ಬೇಕು.

   ತೆಲುಗಿನ ಈ ಯಶಸ್ವಿ ನಟನ ದುರಂತ ಬದುಕಿನ ಪ್ರಕರಣ ನೆನಪಿಸಿದ ಸುಶಾಂತ್ ಸಿಂಗ್ ಆತ್ಮಹತ್ಯೆ ತೆಲುಗಿನ ಈ ಯಶಸ್ವಿ ನಟನ ದುರಂತ ಬದುಕಿನ ಪ್ರಕರಣ ನೆನಪಿಸಿದ ಸುಶಾಂತ್ ಸಿಂಗ್ ಆತ್ಮಹತ್ಯೆ

  ಸಂಗೀತವನ್ನು ಚಿಕ್ಕದಾಗಿಸಬೇಡಿ

  ಸಂಗೀತವನ್ನು ಚಿಕ್ಕದಾಗಿಸಬೇಡಿ

  ನಾನು ಹೀಗೆ ಹೇಳಿದೆ ಎಂದು ತುಂಬಾ ಜನ ಬೇಸರಪಟ್ಟುಕೊಳ್ಳಬಹುದು. ನಾನು ಏನು ನೋಡಿದೆನೂ ಅನುಭವಿಸಿದೆಯೋ ಅದನ್ನೇ ಹೇಳುತ್ತಿದ್ದೇನೆ. ಗಾಯಕರಷ್ಟೇ ಅಲ್ಲ ಕಂಪೋಸರ್‌ಗಳ ಬಗ್ಗೆಯೂ ಹೇಳುತ್ತಿದ್ದೇನೆ. ಡೈರೆಕ್ಟರ್‌ಗಳು ಕೂಡ ನನ್ನ ಬಳಿ ಹೇಳಿದ್ದರು, ಅವರು ಆಯ್ಕೆ ಮಾಡಿದ ಹಾಡನ್ನು ಹಾಡಿಸಲು ಕಂಪೆನಿಗಳು ಬಿಡವುದಿಲ್ಲ ಎಂದು. ಹಾಗೆಯೇ ಅವರಿಗೆ ಹಾಡು ಇಷ್ಟವಿಲ್ಲದೆ ಇದ್ದರೂ ಕಂಪೆನಿ ಒತ್ತಾಯದಿಂದ ಸೇರಿಸುತ್ತದೆ. ಇದು ತಪ್ಪು. ಇಬ್ಬರ ಬಳಿ ಎಲ್ಲ ನಿಯಂತ್ರಣ ಇರಬಾರದು. ಎಲ್ಲರ ಬಳಿಯೂ ಟ್ಯಾಲೆಂಟ್ ಇರುತ್ತದೆ. ಸಂಗೀತ ಬಹುದೊಡ್ಡ ಕ್ಷೇತ್ರ, ಆದರೆ ಎಲ್ಲವನ್ನೂ ನೀವೇ ನಿರ್ಧರಿಸಿದರೆ ಅದು ತುಂಬಾ ಚಿಕ್ಕದಾಗುತ್ತದೆ.

  ಆಗ ಸಂಗೀತದಲ್ಲಿ ವೈವಿಧ್ಯವಿತ್ತು

  ಆಗ ಸಂಗೀತದಲ್ಲಿ ವೈವಿಧ್ಯವಿತ್ತು

  ಮುಂಚೆ ಹೇಗಿತ್ತು? ಪ್ರತಿ ನಟರಿಗೂ ಅವರದೇ ಸಂಗೀತ ಪ್ರಕಾರದ ಬಲವಿತ್ತು. ಓಪಿ ನಾಯರ್, ಶಂಕರ್ ಎಹ್ಸಾನ್ ಅವರೆಲ್ಲರ ಸಂಗೀತಗಳಲ್ಲಿ ವೈವಿಧ್ಯವಿತ್ತು. ಈಗ ಎಲ್ಲರದ್ದೂ ಒಂದೇ ಮ್ಯೂಸಿಕ್. ಸಂಗೀತ ಕ್ಷೇತ್ರ ಸಂಕುಚಿತವಾಗುತ್ತಿದೆ. ದಯಮಾಡಿ ಎಲ್ಲರೂ ದಯಾಳುವಾಗಿ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಾಗದಿರಲಿ ಎಂದು ಸೋನು ನಿಗಮ್ ಸುದೀರ್ಘ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  English summary
  Popular singer Sonu Nigam in a video said, You might soon hear about Suicides in the Music Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X