ವಿಡಿಯೋ : 'ಸೂಜಿದಾರ' ಚಿತ್ರದ ಮೊದಲ ಹಾಡು ಬಿಡುಗಡೆ
'ಸೂಜಿದಾರ' ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ಈ ಸಿನಿಮಾದ ಹಾಡನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಹರಿಪ್ರಿಯಾ ಹಾಗೂ ಯಶ್ ಶೆಟ್ಟಿ ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿಯ ಪ್ರತಿಭಾವಂತ ಮೌನೇಶ್ ಬಡೀಗೇರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

ಹಾಡಿನ ಬಗ್ಗೆ ಹೇಳುವುದಾದರೆ, ಸಿನಿಮಾದ ಮೊದಲ ಹಾಡು ಇದಾಗಿದೆ. 'ಜಾರುತಿರುವೆ..' ಎಂಬ ಹಾಡು ಕೇಳಲು ಬಹಳ ಇಂಪಾಗಿದೆ. ಹರಿಪ್ರಿಯಾ ಪಾತ್ರವನ್ನು ಈ ಹಾಡಿನ ಮೂಲಕ ತಿಳಿಸಿದ್ದಾರೆ. ಬಿನ್ನಷಡ್ಜ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಮಿತುನ್ ಈಶ್ವರ್ ಧ್ವನಿ ಹಾಡಿನಲ್ಲಿದೆ. ವಿಕ್ರಮಹತ್ವಾರ್ ಸಾಹಿತ್ಯ ಬರೆದಿದ್ದಾರೆ.
ಹರಿಪ್ರಿಯಾ ನಟನ ಸಾಮರ್ಥ್ಯ ಸಾಬೀತು ಮಾಡಲು ಮತ್ತೊಂದು ಒಳ್ಳೆಯ ಪಾತ್ರ ಸಿಕ್ಕಿದೆ. ಯಶ್ ಶೆಟ್ಟಿ ಅವರ ರಂಗಭೂಮಿ ಅನುಭವ ಚಿತ್ರಕ್ಕೆ ಸಹಾಯ ಆಗಿದೆ. ಸಿನಿಮಾದ ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
English summary
Actress Haripriya and Yash Shetty's 'Soojidaara' movie kannada movie first song released.


Click it and Unblock the Notifications