ವಿಡಿಯೋ : 'ಸೂಜಿದಾರ' ಸಿನಿಮಾದ ಎರಡನೇ ಹಾಡು ಕೇಳಿ
ನಟಿ ಹರಿಪ್ರಿಯಾ ಹಾಗೂ ಯಶ್ ಶೆಟ್ಟಿ ನಟನೆಯ ಸೂಜಿದಾರ' ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಮೊದಲ ಹಾಡಿಗೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ನಂತರ ಚಿತ್ರದ ಮತ್ತೊಂದು ಹಾಡನ್ನು ರಿಲೀಸ್ ಮಾಡಲಾಗಿದೆ.
'ಹುಣ್ಣಿಮೆಯ ರಾತ್ರಿಯಲ್ಲಿ..' ಎಂಬ ಹಾಡು ಕೇಳಲು ತುಂಬ ಇಂಪಾಗಿದೆ. ಹಾಡಿಗೆ ಒಳ್ಳೆ ಒಳ್ಳೆಯ ಪದಗಳನ್ನು ಚೈತ್ರ ಕೋಟೂರ್ ಬರೆದಿದ್ದಾರೆ. ಸ್ಪರ್ಶ ಆರ್ ಕೆ ಹಾಡಿಗೆ ಧ್ವನಿ ನೀಡಿದ್ದಾರೆ. ಭಿನ್ನಷಡ್ಮ ಸಂಗೀತ ಸಿನಿಮಾಗೆ ಇದೆ. ಅಶೋಕ್ ವಿ ರಾಮನ್ ಕ್ಯಾಮರಾ ಹಿಡಿದಿದ್ದಾರೆ.
ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ 'ಸೂಜಿದಾರ' ಸಿನಿಮಾದ ಹಾಡುಗಳನ್ನು ಕೇಳಬಹುದಾಗಿದೆ.

ಹರಿಪ್ರಿಯಾ ನಟನ ಸಾಮರ್ಥ್ಯ ಸಾಬೀತು ಮಾಡಲು ಮತ್ತೊಂದು ಒಳ್ಳೆಯ ಪಾತ್ರ ಸಿಕ್ಕಿದೆ. ಇಲ್ಲಿ ಅವರು ವೇಷ್ಯಯ ಪಾತ್ರ ಮಾಡಿದ್ದಾರೆ. ಯಶ್ ಶೆಟ್ಟಿ ನಾಯಕರಾಗಿದ್ದು, ಅವರ ರಂಗಭೂಮಿ ಅನುಭವ ಚಿತ್ರಕ್ಕೆ ಸಹಾಯ ಆಗಿದೆ.
ರಂಗಭೂಮಿಯ ಪ್ರತಿಭಾವಂತ ಮೌನೇಶ್ ಬಡೀಗೇರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
English summary
Actress Haripriya and Yash Shetty's 'Soojidaara' movie kannada movie second song released.


Click it and Unblock the Notifications