»   » ಪವರ್ ಸ್ಟಾರ್, ರಕ್ಷಿತ್ ಶೆಟ್ಟಿ ಹಾದಿಯಲ್ಲೇ ಸ್ಯಾಂಡಲ್ ವುಡ್ ನಿರ್ಮಾಪಕರು .!

ಪವರ್ ಸ್ಟಾರ್, ರಕ್ಷಿತ್ ಶೆಟ್ಟಿ ಹಾದಿಯಲ್ಲೇ ಸ್ಯಾಂಡಲ್ ವುಡ್ ನಿರ್ಮಾಪಕರು .!

Posted By:
Subscribe to Filmibeat Kannada

ಸ್ಟಾರ್ ಗಳು-ಗಣ್ಯವ್ಯಕ್ತಿಗಳು ಸದಾ ಇನ್ನೊಬ್ಬರಿಗೆ ಮಾದರಿಯಾಗಿರ್ತಾರೆ. ಅಭಿಮಾನಿಗಳಿಗೆ ಹಾಗೂ ಸಾಮಾನ್ಯ ಜನರಿಗಷ್ಟೇ ಅಲ್ಲದೆ ಕನ್ನಡ ಸಿನಿಮಾರಂಗದ ನಿರ್ಮಾಪಕರಿಗೂ ಪವರ್ ಸ್ಟಾರ್ ಪುನೀತ್ ಹಾಗೂ ರಕ್ಷಿತ್ ಶೆಟ್ಟಿ ಈಗ ಮಾದರಿ.

ತನ್ನದೇ ಸ್ವಂತ ನಿರ್ಮಾಣ ಸಂಸ್ಥೆಯನ್ನ ಪ್ರಾರಂಭ ಮಾಡಿದ ನಂತರ ಈ ಇಬ್ಬರು ಸ್ಟಾರ್ ತಮ್ಮದೇ ಸ್ವಂತ ಆಡಿಯೋ ಕಂಪನಿ ಪ್ರಾರಂಭ ಮಾಡಿದ್ದಾರೆ. ಇದೇ ನಿಟ್ಟಿನಲ್ಲಿ ಸ್ಯಾಂಡಲ್ ವುಡ್ ನ ದಿಗ್ಗಜ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಆಡಿಯೋ ಸಂಸ್ಥೆ ಪ್ರಾರಂಭಿಸಲು ಮುಂದಾಗಿದ್ದಾರೆ.

 SriMurali starrer 'Mufti' Kannada movie audio will be out from JBC audio company

ಶ್ರೀಮುರಳಿ ಅಭಿನಯದ 'ಮಫ್ತಿ' ಚಿತ್ರದ ಆಡಿಯೋ ಇಂದು ರಿಲೀಸ್ ಆಗುತ್ತಿದ್ದು, ಜೆಬಿಸಿ ಆಡಿಯೋ ಕಂಪನಿಯಲ್ಲಿ 'ಮಫ್ತಿ' ಚಿತ್ರದ ಧ್ವನಿಸುರುಳಿ ಹೊರಬರ್ತಿದೆ. ಜಯಣ್ಣ ಭೋಗೇಂದ್ರ ಕಂಬೈನ್ಸ್ ನ ಆಡಿಯೋ ಸಂಸ್ಥೆ ಇದಾಗಿದ್ದು ಇನ್ನು ಮುಂದೆ ಜಯಣ್ಣ ನಿರ್ಮಾಣ ಮಾಡುವ ಚಿತ್ರಗಳ ಆಡಿಯೋ ಈ ಮೂಲಕವೇ ಬಿಡುಗಡೆಯಾಗುತ್ತವೆ.

 SriMurali starrer 'Mufti' Kannada movie audio will be out from JBC audio company

ಸಂಗೀತ ನಿರ್ದೇಶಕರಷ್ಟೇ ಆಡಿಯೋ ಕಂಪನಿ ಮಾಡಿಕೊಳ್ಳಬೇಕು ಎನ್ನುವ ರೂಲ್ಸ್ ಬ್ರೇಕ್ ಮಾಡಿ ರಕ್ಷಿತ್ ಶೆಟ್ಟಿ ಆಡಿಯೋ ಸಂಸ್ಥೆ ಪ್ರಾರಂಭ ಮಾಡಿದ್ರು. ಅದಾದ ನಂತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಡಿಯೋ ಸಂಸ್ಥೆ ಇನ್ನ ಕೆಲವೇ ದಿನಗಳಲ್ಲಿ ಪ್ರಾರಂಭ ಆಗ್ತಿದೆ. ಈಗಾಗಲೇ ನಿರ್ಮಾಣ, ಸಿನಿಮಾ ವಿತರಣೆ ಹಾಗೂ ಪ್ರದರ್ಶನದಲ್ಲಿ ತಮ್ಮದೆ ಆದ ಸಾಧನೆಯನ್ನ ಮಾಡಿರುವ ಜಯಣ್ಣ -ಭೋಗೇಂದ್ರ ಈಗ ಆಡಿಯೋ ಕ್ಷೇತ್ರದಲ್ಲೂ ತಮ್ಮ ಪ್ರಯಾಣವನ್ನ ಪ್ರಾರಂಭಿಸಿದ್ದಾರೆ. ಇಂದು ರಾತ್ರಿ 9 ಗಂಟೆಗೆ 'ಮಫ್ತಿ' ಸಿನಿಮಾದ ಮೊದಲ ಹಾಡಿನ ಮೂಲಕ ಆಡಿಯೋ ಸಂಸ್ಥೆಗೆ ಚಾಲನೆ ದೊರಕಲಿದೆ.

English summary
SriMurali starrer 'Mufti' Kannada movie audio will be out from JBC audio company.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X