ಬಾರನ್ನು ತವರು ಎಂದ ಏಕೈಕ ಸಾಹಿತಿ ಯೋಗರಾಜ್ ಭಟ್
ಈ ಹಾಡಿನ ಬಗ್ಗೆ ಕಿಚ್ಚ ಸುದೀಪ್ ಮಾತನಾಡುತ್ತಾ, ಒಂದು ಬಾರನ್ನು ಇಷ್ಟರ ಮಟ್ಟಿಗೆ ಫೀಲ್ ಮಾಡಿ ಹೊಗಳಿ ಬರೆದಿರುವವರು ಯಾರೂ ಇಲ್ಲ. ಬಾರನ್ನು ತವರು ಎಂದಿರುವ ಏಕೈಕ ಸಾಹಿತಿ ಎಂದರೆ ನಮ್ಮ ಯೋಗರಾಜ್ ಭಟ್. ಹ್ಯಾಟ್ಸಾಫ್ ಭಟ್ರೆ ಎಂದಿದ್ದಾರೆ ಸುದೀಪ್.
ಈ ಹಾಡನ್ನು ಹಾಡಿ ಎಂಜಾಯ್ ಮಾಡಿರುವ ವಿಜಯ್ ಪ್ರಕಾಶ್ ಹೇಳುವುದೇನೆಂದರೆ, ಭಟ್ಟರ ಲಿರಿಕ್ಸ್ ನಲ್ಲಿ ಒಂದು ಹೊಸತನ, ವಿಶೇಷತೆ ಇದ್ದೇ ಇರುತ್ತದೆ. ಕಾಮಿಡಿಯಲ್ಲಿ ಒಂದು ಒಳಾರ್ಥ, ಅದರಲ್ಲಿ ಒಂದು ತತ್ವ, ತತ್ವದಲ್ಲಿ ಜೀವನ ಪಾಠ ಎಲ್ಲ ಅಡಗಿರುತ್ತದೆ ಎಂದಿದ್ದಾರೆ. ಇನ್ನು ತಡ ಯಾಕೆ ಸಾಹಿತ್ಯ ಓದುತ್ತಾ ಹಾಡನ್ನು ಎಂಜಾಯ್ ಮಾಡಿ.

ಬಾರ್ ಸಪ್ಲೈಯರ್ ಗಿಂತಾ ಒಳ್ಳೆ ಗೆಳೆಯಾ ಇಲ್ಲಾ
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...ಆಚೆಗೆ ಹಾಕೊವ್ಳೆ ವೈಫು
ಕಣ್ತುಂಬ ನೀರು ಬಾಯ್ತುಂಬ ಬೀರು
ನಿಜವಾಗ್ಲು...ನಿಜವಾಗ್ಲು... ನಿಜವಾಗ್ಲು ಬಾರು ಗಂಡಮಕ್ಳ ತವರು
ಖಾಲಿ ಕ್ಟಾಟ್ರು ಬಾಟ್ಲಿಯಂಗೆ ಲೈಫು ಆಚೆಗೆ ಹಾಕೊವ್ಳೆ ವೈಫು
ಒದ್ದು ಓಡ್ಸವ್ಳೆ ನಮ್ ವೈಫು....
ಊರಿಗೆ ಊರೆ ಸುಡುಗಾಡು...ಎಣ್ಣೆ ಅಂಗಡಿ ಒಂದೇ ಸಾವಿಲ್ಲದ ಪ್ಲೇಸು
ಬಾರು ಬಾಗ್ಲು ದಯವಿಟ್ಟು 24 ಹವರ್ಸು ಮುಚ್ಚಬೇಡಿ ಪ್ಲೀಸು
ಕುಡುಕ್ರು ಒಳ್ಳೇಯವ್ರು..ಎಣ್ಣೆ ತುಂಬ ಕೆಟ್ಟದ್ದು
ಡೈಲಿ ಕುಡಿಯೋದು...ತಮ್ ತಮ್ ಗೆ ಬಿಟ್ಟಿದ್ದು
ದುಃಖಕ್ಕೆ ನೀರು...ಕುಡಿತಾರೆ ಯಾರು
ನಿಜವಾಗ್ಲು...ಗುರುವೆ...ನಿಜವಾಗ್ಲು
ನಿಜವಾಗ್ಲು ಬಿಲ್ಲು....ಕಟ್ಟೋವ್ನೆ ದೇವ್ರು
ಖಾಲಿ ಕ್ಟಾಟ್ರು ಬಾಟ್ಲಿಯಂತೆ ಲೈಫು...ಆಚೆಗೆ ಹಾಕೊವ್ಳೆ ವೈಫು
ಲವ್ವು ನೋವು ಎರಡೂ ಅವಳಿ ಜವಳಿ ಇದ್ದಂಗೆ
ಮದುವೆ ಮಕ್ಕಳು ಇತ್ಯಾದಿ...ಹಾವು ಬಿಟ್ಟುಕೊಂಡಂಗೆ
ಮನೇಗ್ ಹೋದ್ರೆ ಅದೇ ಹೆಂಡ್ತಿ..ಹಸ್ರು ಕಲರ್ ಹಳೇ ನೈಟಿ
ಬ್ಯಾಂಕು ಸಾಲ ಕಾರು ಗ್ಯಾಸು ಮನೆ ಬಾಡ್ಗೆ ಮಕ್ಳು ಫೀಸು
ಅದೇ ಕುಕ್ಕರ್ ಅನ್ನ ಸಾರು...ಮಕ್ಳ ಕೈಲಿ ಪ್ಲಾಸ್ಟಿಕ್ ಕಾರು..
ಮಿಡ್ಲ್ ಕ್ಲಾಸು ಹಳೆ ಸ್ಕೂಟರ್...ಯಾವಾಗಂದ್ರೆ ಆವಾಗ್ ಪಂಕ್ಚರ್
ಬಾಳು ಅಂದ್ರೆ ಏನು ಅಂಥ ಹೇಳಲೆ...
ಮೆಡಿಸನ್ನೇ ಇಲ್ಲದೆ ಇರೋ ಖಾಯಿಲೆ
ಇಲ್ಲಿಲ್ಲ ಯಾರು ಔಷಧಿ ಕೋಡೋರು...
ಬಿಟ್ಟು ಕೊಳ್ದೋರು...ಬಿಟ್ಟುಕೊಳ್ಳಿ ಚೂರು
ನಿಜವಾಗ್ಲು..ನಿಜವಾಗ್ಲು...ನಿಜವಾಗ್ಲು
ನಿಜವಾಗ್ಲು ಕುಡುಕ್ರೆ ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು
ಖಾಲಿ ಕ್ಟಾಟ್ರು ಬಾಟ್ಲಿಯಂಗೆ ಲೈಫು ಆಚೆಗೆ ಹಾಕೊವ್ಳೆ ವೈಫು
ಒದ್ದು ಓಡ್ಸವ್ಳೆ ನಮ್ ವೈಫು...(ಒನ್ಇಂಡಿಯಾ ಕನ್ನಡ)


Click it and Unblock the Notifications











