»   » ದುಬೈ, ಶಾರ್ಜಾದಲ್ಲೂ ಸುದೀಪ್ 'ಬಚ್ಚನ್' ಹವಾ

ದುಬೈ, ಶಾರ್ಜಾದಲ್ಲೂ ಸುದೀಪ್ 'ಬಚ್ಚನ್' ಹವಾ

Posted By:
Subscribe to Filmibeat Kannada

ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬಚ್ಚನ್' ಆಡಿಯೋ ಬಿಡುಗಡೆಯಾಗಿದೆ. ಚಿತ್ರದ ಆಡಿಯೋ ಸಿಡಿಗಳು ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಸ್ಟುಡಿಯೋದಲ್ಲಿ ರಿಲೀಸ್ ಆಗಿದ್ದು ವಿಶೇಷ. 'ಬಚ್ಚನ್' ಚಿತ್ರ ಏಪ್ರಿಲ್ 11ರಂದು ತೆರೆಕಾಣುತ್ತಿದ್ದು ವಿದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಸುದೀಪ್ ಜೊತೆ 'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್ ಗೆ ಆಗ್ಬಿಟ್ಟೈತೆ.." ಬೆಡಗಿ ಪಾರುಲ್ ಯಾದವ್, ಭಾವನಾ ಹಾಗೂ ತುಲಿಪ್ ಜೋಶಿ ಅಭಿನಯಿಸಿದ್ದಾರೆ. ಬಚ್ಚನ್ ಚಿತ್ರ ದುಬೈ, ಅಬು ದಾಬಿ, ಶಾರ್ಜಾದಲ್ಲೂ ಬಿಡುಗಡೆ ಕಾಣುತ್ತಿರುವುದು ವಿಶೇಷ.


ಉದಯ್ ಕೆ ಮೆಹ್ತಾ ನಿರ್ಮಿಸಿರುವ 'ಬಚ್ಚನ್' ಚಿತ್ರಕ್ಕೆ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರು ಎಂದ ಮೇಲೆ ಇನ್ನೇನು ವಿಶೇಷ ಇದೆಯೋ ಏನೋ ಎಂಬ ಕುತೂಹಲದಲ್ಲಿ ಸುದೀಪ್ ಅಭಿಮಾನಿಗಳಿದ್ದಾರೆ. ಏಪ್ರಿಲ್ 11ರಂದು ಅವರ ಕುತೂಹಲಕ್ಕೆ ತೆರೆಬೀಳಲಿದೆ.

ಶ್ರೀ ವೆಂಕಟೇಶ್ವರ ಕೃಪಾ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಶಶಾಂಕ್ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಬಚ್ಚನ್' ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ ಕಿಚ್ಚ ಸುದೀಪ್ ನಿರೂಪಕರಾಗಿರುವ 'ಬಿಗ್ ಬಾಸ್' ಸ್ಟುಡಿಯೋದಲ್ಲಿ ಮಾರ್ಚ್ 30ರಂದು ನೆರವೇರಿತು.

ಚಿತ್ರದ ನಾಯಕ ಸುದೀಪ್, ನಿರ್ದೇಶಕ ಶಶಾಂಕ್, ನಾಯಕಿ ಪಾರೂಲ್ ಯದವ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ನಿರ್ಮಾಪಕ ಉದಯ್.ಕೆ.ಮೆಹ್ತಾ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ತೆಲುಗು ನಟ ಜಗಪತಿ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)

English summary
Kichcha Sudeep lead Bachchan audio-launch on the sets of the Kannada reality television show Bigg Boss. The film is likely to see a release overseas too. V.Harikrishna music composed film is all set to release in Dubai, Abu Dhabi and Sharjah as well.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada