Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ರಾ..ರಾ.. ರಕ್ಕಮ್ಮ: ಕಿಚ್ಚು ಹಚ್ಚಿದ ವಿಕ್ರಾಂತ್ ರೋಣನ 'ಗಡಂಗ್ ರಕ್ಕಮ್ಮಾ'!
ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವು ಒಂದು. ವಿಕ್ರಾಂತ್ ರೋಣ ಸಿನಿಮಾಗಾಗಿ ಕಿಚ್ಚ ಅಭಿಮಾನಿಗಳು, ಸಿನಿಮಾ ಪ್ರಿಯರು ಮಾತ್ರವಲ್ಲ, ಸಿನಿಮಾರಂಗ ಕೂಡ ಕಾದು ಕುಳಿತಿದೆ.
ವಿಕ್ರಾಂತ್ ರೋಣ ಸಿನಿಮಾ ಸೆಟ್ಟೇರಿದಾಗಿನಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಅಂತೆಯೇ ಈಗ ಸಿನಿಮಾದ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ ಒಂದೊಂದೆ ವಿಚಾರದ ಮೂಲಕ ಸಿನಿಮಾದ ಮೇಲಿನ ಕುತೂಹಲ ಹೆಚ್ಚು ಮಾಡಿದೆ.
'ವಿಕ್ರಾಂತ್
ರೋಣ'
'ಗಡಾಂಗ್
ರುಕ್ಕಮ್ಮ'
ಹಾಡು
ಬಿಡುಗಡೆಗೆ
ಮುಹೂರ್ತ
ಫಿಕ್ಸ್
ಈಗ ಗಡಂಗ್ ರಕ್ಕಮ್ಮ ಸರದಿ. ಹಲವು ದಿನಗಳಿಂದ ಗಡಂಗ್ ರಕ್ಕಮ್ಮನ ಎಂಟ್ರಿಗಾಗಿ ಅಭಿಮಾನಿಗಳು ಕಾಯುತ್ತಾ ಇದ್ದರು. ಹೆಚ್ಚು ತಡ ಮಾಡದೆ ಗಡಂಗ್ ರಕ್ಕಮ್ಮ ಎಂಟ್ರಿ ಆಗೇ ಬಿಟ್ಟಿದೆ. ಈ ಹಾಡಿಗೆ ಕಿಚ್ಚನ ಅಭಿಮಾನಿಗಳು ಕಿಕ್ಕೆದ್ದು ಕುಣಿದಿದ್ದಾರೆ. y
ಬಂದೇ ಬಿಟ್ಟಳು ವಿಕ್ರಾಂತ್ ರೋಣನ ರಕ್ಕಮ್ಮ!
ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡು ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮೊದಲಿಂದಲೂ ಈ ಹಾಡಿನ ರಿಲೀಸ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಸದ್ಯ ಗಡಂಗ್ ರಕ್ಕಮ್ಮ ಲಿರಿಕಲ್ ಹಾಡು ರಿಲೀಸ್ ಆಗಿದೆ. ಈ ಲಿರಿಕಲ್ ಹಾಡಿನಲ್ಲಿ ಒಂದುಷ್ಟು ಡ್ಯಾನ್ಸ್ ಮತ್ತು ಮೇಕಿಂಗ್ ತುಣುಕುಗಳನ್ನು ಅಳವಡಿಸಲಾಗಿದೆ. ಕಿಚ್ಚನ ಜೊತೆಗೆ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ರಕ್ಕಮ್ಮನಾಗಿ ಹೆಜ್ಜೆ ಹಾಕಿದ್ದಾರೆ.

ರಕ್ಕಮ್ಮನ ಜೊತೆ ಕಿಚ್ಚ ಮಸ್ತ್ ಡಾನ್ಸ್!
ಇದು ವಿಕ್ರಾಂತ್ ರೋಣ ಸಿನಿಮಾದ ವಿಶೇಷ ಹಾಡು. ಹಾಗಂತ ಇದು ಐಟಂ ಹಾಡು ಅಲ್ಲ, ಹಾಡಿನ ಮೂಲಕ ಸಿನಿಮಾದಲ್ಲಿ ಒಂದು ಟ್ವಿಸ್ಟ್ ಕೂಡ ಇರಲಿದೆ. ನಟಿ ಜಾಕ್ವೆಲಿನ್ ಜೊತೆಗೆ ಕಿಚ್ಚ ಸುದೀಪ್ ಮಸ್ತ್ ಡಾನ್ಸ್ ಮಾಡಿದ್ದಾರೆ. ಜಾಕ್ವೆಲಿನ್ ಕೆಂಪು ಸ್ಕರ್ಟ್, ಹರಿಸು ರವಿಕೆ ತೊಟ್ಟು ದೇಶಿ ಹುಡುಗಿಯ ಲುಕ್‌ನಲ್ಲಿ ಮಿಂಚಿದ್ದು, ಸುದೀಪ್ ಸ್ಟೈಲಿಶ್ ಶರ್ಟ್, ಟೋಪಿ ತೊಟ್ಟು ಡಿಟೆಕ್ಟಿವ್ ರೀತಿಯನ್ನು ಹೆಜ್ಜೆ ಹಾಕಿದ್ದಾರೆ.
ಹಿಂದಿ
ರಾಷ್ಟ್ರ
ಭಾಷೆ
ಎಲ್ಲರೂ
ಗೌರವಿಸಿ:
ಬಾಲಿವುಡ್
ನಟ
ಅರ್ಜುನ್
ರಾಮ್‌ಪಾಲ್!

ಮ್ಯೂಸಿಕ್, ಲಿರಿಕ್, ಡಾನ್ಸ್‌ಗೆ ಮೆಚ್ಚುಗೆ!
ಇನ್ನು ಈ ಹಾಡಿಗೆ ಪ್ರೇಕ್ಷಕ ವರ್ಗದಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಗಡಂಗ್ ರಕ್ಕಮ್ಮ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಮೂಲಕ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ಸೈ ಎನಿಸಿಕೊಂಡಿದ್ದಾರೆ. ನಕಾಶ್ ಆಶಿಸ್ ಮತ್ತು ಸುನಿಧಿ ಚೌಹಾಣ್ ಗಡಂಗ್ ರಕ್ಕಮ್ಮ ಹಾಡು ಹಾಡಿದ್ದಾರೆ. ಇಷ್ಟು ಜನರ ಕಾಂಬಿನೇಷನ್‌ನಲ್ಲಿ ಬಂದ ಈ ಹಾಡು ಹಿಟ್ ಲಿಸ್ಟ್ ಸೇರುವ ಸೂಚನೆ ಕೊಟ್ಟಿದೆ. ಜೊತೆಗೆ ರಕ್ಕಮ್ಮನ ಪಾತ್ರದ ಮೇಲೂ ನಿರೀಕ್ಷೆ ಹುಟ್ಟು ಹಾಕಿದೆ.

ಜುಲೈ 28ಕ್ಕೆ ವಿಕ್ರಾಂತ್ ರೋಣ ರಿಲೀಸ್!
ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28ರಂದು ತೆರೆಗೆ ಬರಲಿದೆ. ಪಿವಿಆರ್ ಪಿಕ್ಚರ್ಸ್ ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಿದೆ. ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಜೊತೆಗೆ ಇದು 3D ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಾ ಇರಿವು ಕೂಡ ಮತ್ತೊಂದು ವಿಶೇಷ.