'ಪಟಾಕಿ ಪೋರಿಯೋ' ಹಾಡಿನ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್

ಕಿಚ್ಚ ಸುದೀಪ್ ನಟನೆಯ 'ಕೋಟಿಗೊಬ್ಬ-3' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಲಾಕ್‌ಡೌನ್ ಕಾರಣದಿಂದ ಸದ್ಯಕ್ಕೆ ಬಿಡುಗಡೆಯಾಗಿಲ್ಲ. ಚಿತ್ರಮಂದಿರಗಳು ಯಥಾಸ್ಥಿತಿಗೆ ಬರುತ್ತಿದ್ದಂತೆ ಕೋಟಿಗೊಬ್ಬ-3 ತೆರೆಗೆ ಬರಲಿದೆ.

ಕೋಟಿಗೊಬ್ಬನ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಉಡುಗೊರೆ ನೀಡಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್ 15 ರಂದು ಕೋಟಿಗೊಬ್ಬ 3 ಚಿತ್ರದ 'ಪಟಾಕಿ ಪೋರಿಯೋ' ಹಾಡು ಬಿಡುಗಡೆಯಾಗುತ್ತಿದೆ.

ಅಧಿಕೃತವಾಗಿ ಹಾಡು ಬಿಡುಗಡೆ ಮಾಡುವುದಕ್ಕೂ ಮುಂಚೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಈ ಹಾಡನ್ನು ಚಿತ್ರೀಕರಿಸಿದ್ದ ಅದ್ಭುತ ಅನುಭವ. ಅರ್ಜುನ್ ಜನ್ಯ ಸಂಗೀತ ಮತ್ತು ಅನೂಪ್ ಭಂಡಾರಿ ಸಾಹಿತ್ಯ ಇಷ್ಟ ಆಯ್ತು. ಆಶಿಕಾ ರಂಗನಾಥ್ ಲುಕ್ ಚಿಂದಿಯಾಗಿದೆ. ಕೋಟಿಗೊಬ್ಬ 3 ಚಿತ್ರತಂಡಕ್ಕೆ ಶುಭಾಶಯಗಳು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

Sudeep Tweet On Kotigobba 3 Pataki Poriyo Song

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್ ಹಾಡಿದ್ದಾರೆ. ಸುದೀಪ್ ಮತ್ತು ಆಶಿಕಾ ರಂಗನಾಥ್ ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ದೀಪಾವಳಿ ಹಬ್ಬದ ಪ್ರಯುಕ್ತ 'ಪಟಾಕಿ ಪೋರಿಯೋ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ. ಆಶಿಕಾ ರಂಗನಾಥ್ ಈ ಹಾಡಿನಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

Sudeep Tweet On Kotigobba 3 Pataki Poriyo Song

ಅಂದ್ಹಾಗೆ, ಕಿಚ್ಚ ಸುದೀಪ್ ನಾಯಕರಾಗಿರುವ ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿದ್ದಾರೆ. ಶ್ರದ್ಧಾ ದಾಸ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರಪ್ಪ ಬಾಬು ಈ ಚಿತ್ರ ನಿರ್ಮಾಣ ಮಾಡಿದ್ದು, ಶಿವಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಕೋಟಿಗೊಬ್ಬ 3 ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

More from Filmibeat

English summary
Kiccha Sudeep Tweet about Kotigobba 3 movie song Pataki Poriyo. the song will be release on november 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X