»   » 'ಸರಿಗಮಪ' ಖ್ಯಾತಿಯ ಸುಹಾನ ಸೈಯದ್ ಸಿನಿಮಾ ಪ್ರಯಾಣ ಶುರು

'ಸರಿಗಮಪ' ಖ್ಯಾತಿಯ ಸುಹಾನ ಸೈಯದ್ ಸಿನಿಮಾ ಪ್ರಯಾಣ ಶುರು

Posted By:
Subscribe to Filmibeat Kannada
ಎಲ್ಲಿದ್ದಾರೆ ಸುಹಾನಾ ಸೈಯದ್ | SAREGAMAPA Fame suhana syed's is back again ?| Filmibeat Kannada

ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹಾಡಿದ್ದ ಬಹುತೇಕ ಗಾಯಕರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗ ಗಾಯಕಿ ಸುಹಾನ ಸೈಯದ್ ಅವರಿಗೆ ಸಹ ಸಿನಿಮಾದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. 'ಸ್ಟೇಟ್ ಮೆಂಟ್ 8/11' ಎನ್ನುವ ಹೊಸ ಸಿನಿಮಾದಲ್ಲಿ ಹಾಡುವ ಮೂಲಕ ಸುಹಾನ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ.

'ನರನಾಡಿ ನುಡಿಯುತ್ತೆ ಹಿಂದುಸ್ತಾನ್..' ಎಂಬ ಹಾಡಿಗೆ ಸುಹಾನ ಧ್ವನಿ ನೀಡಿದ್ದಾರೆ. 'ಸ್ಟೇಟ್ ಮೆಂಟ್ 8/11' ಚಿತ್ರದ ದೇಶಭಕ್ತಿ ಗೀತೆ ಇದಾಗಿದೆ. ಇದೊಂದು ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಸಂಗೀತ ಹಾಡಿನಲ್ಲಿದೆ. ಅಪ್ಪಿ ಪ್ರಸಾದ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಮುಖ ಅಂಶಗಳಲ್ಲಿ ಈ ಹಾಡು ಕೂಡ ಒಂದಾಗಿದೆ. 'ಸರಿಗಮಪ' ಕಾರ್ಯಕ್ರಮದಲ್ಲಿ ಸುಹಾನ ಅವರ ಹಾಡು ಇಷ್ಟಪಟ್ಟಿದ್ದ ಈ ಚಿತ್ರತಂಡ ಅವರಿಗೆ ಈ ಅವಕಾಶ ನೀಡಿದೆ.

Suhana Saiyad got the chance to sing in Statement movie

ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಯ್ತು ಮೆಹಬೂಬ್ ಸಾಬ್ ಹಾಡು

ಅಂದಹಾಗೆ, ಈಗಾಗಲೇ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರು ಸಿನಿಮಾದಲ್ಲಿ ಹಾಡಿದ್ದಾರೆ. ಮೆಹಬೂಬ್ ಸಾಬ್, ಸಂಚಿತ್ ಹೆಗ್ಡೆ ದೊಡ್ಡ ದೊಡ್ಡ ಸಿನಿಮಾದ ಹಾಡು ಹೇಳಿದ್ದಾರೆ. ಇವರ ಜೊತೆಗೆ ಈಗ ಸುಹಾನ ಸೈಯದ್ ಕೂಡ ಸಿನಿಮಾ ಪಯಣ ಶುರು ಮಾಡಿದ್ದಾರೆ.

English summary
Zee Kannada channel's 'Sarigamapa Season 13' contestant Suhana Saiyad got the chance to sing in Statement movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X