For Quick Alerts
  ALLOW NOTIFICATIONS  
  For Daily Alerts

  'ಭರವಸೆಯ ಒಂದು ಬೆಳಕು' ಹಾಡಿನ ಮೂಲಕ ಕೋವಿಡ್ ಯೋಧರಿಗೆ ಕೃತಜ್ಞತೆ

  |

  ಪ್ರಸ್ತುತ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ದೇಶವೇ ಸಂಕಷ್ಟವನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ವೈದ್ಯರೊಂದಿಗೆ, ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾಧ್ಯಮ ಹಾಗೂ ಇನ್ನು ಹಲವರು ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರನ್ನು ಕೊರೊನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿದೆ.

  ಸಾರ್ವಜನಿಕರ ರಕ್ಷಣೆಗೆ ಯೋಧರಂತೆ ನಿಂತು ಹೋರಾಡುತ್ತಿರುವ ಈ ಸಮೂಹಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈವೆಂಟ್ ಮ್ಯಾನೇಜರ್ ಹಾಗೂ ಸಿನಿಮಾ ನಿರ್ಮಾಣ ವ್ಯವಸ್ಥಾಪಕ ಸುಶೀಲ್ ಸಾಗರ್ ಹಾಡೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ.

  ಮೇ 29 ರಂದು ಸಂಜೆ 6 ಗಂಟೆಗೆ 'ಸಿಟಿ ಸವಾರಿ' ಎನ್ನುವ ಯ್ಯೂಟ್ಯೂಬ್ ಚಾನಲ್‌ನಲ್ಲಿ 'ಭರವಸೆಯ ಒಂದು ಬೆಳಕು' ಎಂಬ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡನ್ನು ಸುಶೀಲ್ ಸಾಗರ್ ನಿರ್ದೇಶಿಸಿದ್ದಾರೆ.

  ಎಸ್ ರಂಜನಿ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಆಕಾಶ್ ಪರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಶ್ವಿನ್ ಶರ್ಮ, ಐಶ್ವರ್ಯ ರಂಗರಾಜನ್ ಹಾಗೂ ಆಶಾ ಭಟ್ ಈ ಹಾಡಿಗೆ ದನಿಯಾಗಿದ್ದಾರೆ. ಹಾಡಿಗೆ ಸ್ಕ್ರಿಪ್ಟ್ ರಕ್ಷಿತ ರಚಿಸಿದ್ದು, ಪುನೀತ್ ಛಾಯಾಗ್ರಹಣವಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಎಲ್ಲರೂ ಕೈ ಜೋಡಿಸಿರುವುದಾಗಿ ಸುಶೀಲ್ ಸಾಗರ್ ತಿಳಿಸಿದ್ದಾರೆ.

  ಕೊರೊನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಈ ವಿಡಿಯೋ ಹಾಡಿನಲ್ಲಿ ನಟ ವಸಿಷ್ಠ ಸಿಂಹ, ಅನುಪಮ ಗೌಡ, ಶೈನ್ ಶೆಟ್ಟಿ, ರಘು ಗೌಡ, ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್ ಹಾಗೂ ಚೈತ್ರಾ ವಾಸುದೇವನ್ ಕಾಣಿಸಿಕೊಂಡಿದ್ದಾರೆ.

  ಹಾಡನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  Event Manager and Film Production manager Sushil Sagar released song to thank Corona Warriors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X