ಜಯಂತ್ ಕಾಯ್ಕಿಣಿ ಬರೆದ 'ಟಗರು' ಚಿತ್ರದ ಗೀತೆ ಬಿಡುಗಡೆ

By Naveen

ಸೂರಿ ನಿರ್ದೇಶನದ ಸಿನಿಮಾಗಳಲ್ಲಿ ಜಯಂತ್ ಕಾಯ್ಕಿಣಿ ಅವರ ಒಂದು ಹಾಡು ಇದ್ದೇ ಇರುತ್ತದೆ. ಈಗ 'ಟಗರು' ಸಿನಿಮಾಗೆ ಕೂಡ ಕಾಯ್ಕಿಣಿ ಒಂದು ಹಾಡನ್ನು ಬರೆದಿದ್ದಾರೆ. 'ಬದುಕಿನ ಬಣ್ಣವೇ..' ಎಂಬ ಹಾಡು ಇದೀಗ ರಿಲೀಸ್ ಆಗಿದೆ.

ನಟ ಶಿವರಾಜ್ ಕುಮಾರ್ ಮತ್ತು ನಟಿ ಭಾವನ ನಡುವೆ ಈ ಹಾಡು ಇದೆ. ಈ ಹಿಂದೆ ಆಡಿಯೋ ರಿಲೀಸ್ ಕಾರ್ಯಕ್ರಮದ ದಿನ ಚಿತ್ರದ ಮೂರು ಹಾಡುಗಳನ್ನು ರಿಲೀಸ್ ಮಾಡಿದ್ದು, ಇದು 'ಟಗರು' ಚಿತ್ರದ ನಾಲ್ಕನೇ ಹಾಡಾಗಿದೆ. ಸಿದ್ಧಾರ್ಥ ಬೆಳಮನು ಈ ಹಾಡನ್ನು ಹಾಡಿದ್ದಾರೆ. ಹಾಡು ಕೇಳುಗರಿಗೆ ಹೊಸ ಫೀಲ್ ನೀಡುತ್ತದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಹೊಸ ರೀತಿಯ ಮ್ಯೂಸಿಕ್ ಕೊಟ್ಟಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆಯಿಂದ ಈ ಹಾಡನ್ನು ಹೊರಬಂದಿದೆ. ಈ ಹಿಂದೆ ಬಂದ ಹಾಡುಗಳು ಮಾಸ್ ಪ್ರೇಕ್ಷಕರ ಮನ ತಣಿಸಿತ್ತು. ಈ ಹಾಡು ಮೆಲೋಡಿ ಪ್ರಿಯರಿಗೆ ಇಷ್ಟ ಆಗುವಂತಿದೆ.

'Tagaru' kannada movie 4th song released

ಒಂದು ಕಡೆ 'ಟಗರು' ಸಿನಿಮಾ ಕ್ರೇಜ್ ಜೋರಾಗಿದೆ. ಶಿವಣ್ಣನ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. ಮೊದಲು ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಜನವರಿಗೆ ಮುಂದಕ್ಕೆ ಹೋಗಿತ್ತು. ಆದರೆ ಮತ್ತೆ 'ಟಗರು' ಬಿಡುಗಡೆಯ ದಿನಾಂಕ ಪೋಸ್ಟ್ ಪೋನ್ ಆಗಿದೆ. ಫೆಬ್ರವರಿ 9ಕ್ಕೆ ಸಿನಿಮಾ ರಾಜ್ಯಾದಂತ್ಯ ರಿಲೀಸ್ ಆಗಲಿದೆ.

More from Filmibeat

English summary
Actor Shiva Rajkumar's 'Tagaru' kannada movie 4th song released. The song written by Jayanth Kaikini and composed by music director Charan Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X