'ಟಗರು' ಚಿತ್ರದ ಪವರ್ ಸಾಬೀತು ಮಾಡಿದ ಟೈಟಲ್ ಹಾಡು

By Naveen

'ಟಗರು' ಸಿನಿಮಾದ ಬಿಡುಗಡೆಯ ದಿನಾಂಕ ಹತ್ತಿರಕ್ಕೆ ಬರುತ್ತಿದೆ. ಈಗಾಗಲೇ ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಒಂದೊಂದೆ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಹೊರಬರುತ್ತಿದೆ. ಸದ್ಯಕ್ಕೆ ಚಿತ್ರದ ಐದು ಹಾಡುಗಳನ್ನು ಪ್ರೇಕ್ಷಕರು ಕೇಳಿದ್ದಾರೆ.

ಈ ಪೈಕಿ ಚಿತ್ರದ ಮೊದಲ ಹಾಡಾಗಿದ್ದ 'ಟಗರು ಬಂತು ಟಗರು...' ಹಾಡು ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಯೂಟ್ಯೂಬ್ ನಲ್ಲಿ ಈ ಹಾಡು 2 ಮಿಲಿಯನ್ ಹಿಟ್ಸ್ ಪಡೆದಿದೆ. ಈ ಮೂಲಕ 'ಟಗರು' ಹಾಡುಗಳ ಪೈಕಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಹಾಡು ಇದಾಗಿದೆ. ಜೊತೆಗೆ ಕನ್ನಡ ಸಿನಿಮಾಗಳಲ್ಲಿ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಹಿಟ್ಸ್ ಪಡೆದ ಹಾಡುಗಳಲ್ಲಿ ಈ ಹಾಡು ಪ್ರಮುಖವಾಗಿದೆ.

'Tagaru' kannada movie title song crossed 1 million views in youtube

ಇತ್ತೀಚಿಗಷ್ಟೆ 'ಕೆ.ಜಿ.ಎಫ್' ಚಿತ್ರದ ಟೀಸರ್ ಅನ್ನು 3 ಮಿಲಿಯನ್ ಜನರು ವೀಕ್ಷಿಸಿದ್ದರು. ಅಲ್ಲದೆ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು..' ಹಾಡನ್ನು 44 ಮಿಲಿಯನ್ ಮತ್ತು 'ರಾಜಕುಮಾರ' ಚಿತ್ರದ 'ಗೊಂಬೆ ಹೇಳುತೈತೆ...' ಹಾಡನ್ನು 45 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಂದಹಾಗೆ, 'ಟಗರು' ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಚಿತ್ರಕ್ಕೆ ಸೂರಿ ನಿರ್ದೇಶನ ಮತ್ತು ಚರಣ್ ರಾಜ್ ಸಂಗೀತ ನಿರ್ದೇಶನವಿದೆ.

More from Filmibeat

English summary
Actor Shiva Rajkumar's 'Tagaru' kannada movie title song crossed 1 million views in youtube. The movie is directed by Soori.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X