»   » ದುನಿಯಾ ಸೂರಿಗೆ ಪವರ್ ಸ್ಟಾರ್ ಕೊಟ್ಟರು ಬಂಪರ್ ಗಿಫ್ಟ್.!

ದುನಿಯಾ ಸೂರಿಗೆ ಪವರ್ ಸ್ಟಾರ್ ಕೊಟ್ಟರು ಬಂಪರ್ ಗಿಫ್ಟ್.!

Posted By:
Subscribe to Filmibeat Kannada
ಟಗರು ಸಿನಿಮಾದ ದುನಿಯಾ ಸೂರಿಗೆ ಪುನೀತ್ ರಾಜಕುಮಾರ್ ಕೊಟ್ರು ಒಳ್ಳೆ ಗಿಫ್ಟ್

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಪಟ್ಟಿಯಲ್ಲಿ 'ಟಗರು' ಕೂಡ ಒಂದು. ದುನಿಯಾ ಸೂರಿ ಡೈರೆಕ್ಷನ್, ಹ್ಯಾಟ್ರಿಕ್ ಹೀರೋ ಆಕ್ಟಿಂಗ್ ಎಲ್ಲವನ್ನೂ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರತಂಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಅಪ್ಪು ಅವರ ನೆಚ್ಚಿನ ನಿರ್ದೇಶಕರಲ್ಲಿ ಸೂರಿ ಕೂಡ ಒಬ್ಬರು. ಸೂರಿ ಜೊತೆ ವರ್ಕ್ ಮಾಡುವುದಷ್ಟೇ ಅಲ್ಲದೆ ಅವರ ಸಿನಿಮಾ ಮೇಕಿಂಗ್ ಇಷ್ಟ ಪಡುವ ಪವರ್ ಸ್ಟಾರ್ 'ಟಗರು' ಚಿತ್ರತಂಡಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೇನು ಅಂತೀರಾ ಮುಂದೆ ಓದಿ.

ಪವರ್ ಸ್ಟಾರ್ ಆಡಿಯೋ ಕಂಪನಿಯಲ್ಲಿ 'ಟಗರು' ಸೌಂಡ್

ಈಗಾಗಲೇ ಸುದ್ದಿಯಾಗಿರುವಂತೆ 'ಅಂಜನಿಪುತ್ರ' ಸಿನಿಮಾದ ಹಾಡುಗಳು ಅಪ್ಪು ಆಡಿಯೋ ಸಂಸ್ಥೆಯಲ್ಲಿ ರಿಲೀಸ್ ಆಗುತ್ತೆ ಅಂತ ಸುದ್ದಿ ಆಗಿತ್ತು. ಆದ್ರೆ ಈಗ 'ಟಗರು' ಚಿತ್ರದ ಆಡಿಯೋ ಲಾಂಚ್ ಹಾಗೂ ಪುನೀತ್ ಆಡಿಯೋ ಕಂಪನಿಯ ಸಮಾರಂಭ ಒಟ್ಟಿಗೆ ನಡೆಯೋದು ಕನ್ಫರ್ಮ್ ಆಗಿದೆ.

ಅಮ್ಮನ ಹಾದಿಯಲ್ಲಿ ಮಗನ ಜರ್ನಿ

ಪಾರ್ವತಮ್ಮ ರಾಜ್ ಕುಮಾರ್ ಪ್ರೊಡಕ್ಷನ್ಸ್ ಪ್ರಾರಂಭ ಮಾಡಿಡುವ ಪುನೀತ್ ಸದ್ಯ ಆಡಿಯೋ ಕಂಪನಿ ಶುರು ಮಾಡುವ ತಯಾರಿಯಲ್ಲಿದ್ದಾರೆ. ಆಡಿಯೋ ಕಂಪನಿಗೆ ಎರಡು ಹೆಸರು ಆಯ್ಕೆಯಾಗಿದ್ದು ಪಿ.ಆರ್.ಕೆ ಆಡಿಯೋ ಕಂಪನಿ ಅಥವಾ ರಾಜ್ ಕುಮಾರ್ ಮ್ಯೂಸಿಕ್ ಅನ್ನೋ ಹೆಸರಿನಲ್ಲಿ ಸಂಸ್ಥೆ ಶುರುವಾಗಲಿದೆ.

ಆಡಿಯೋ ಕಂಪನಿಯಲ್ಲೂ ಹೊಸಬರಿಗೆ ಚಾನ್ಸ್

ಮುಂದಿನ ತಿಂಗಳು 'ಟಗರು' ಸಿನಿಮಾದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ.ನಿರ್ಮಾಣದಲ್ಲೂ ಹೊಸಬರಿಗೆ ಚಾನ್ಸ್ ಕೊಟ್ಟಿರುವ ಅಪ್ಪು ಆಡಿಯೋ ಕಂಪನಿಯ ಮೂಲಕ ಮತ್ತೆ ಹೊಸ ಟ್ಯಾಲೆಂಟ್ ಗಳಿಗೆ ಚಾನ್ಸ್ ಕೊಡ್ತಿದ್ದಾರೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಚರಣ್ ರಾಜ್ 'ಟಗರು' ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಮೇಕಿಂಗ್ ನಲ್ಲಿ ಇವರ ಮ್ಯೂಸಿಕ್ ಮ್ಯಾಜಿಕ್ ಕಂಡು ಎಲ್ಲರೂ ಫಿದಾ ಆಗಿದ್ದಾರೆ.

ವಜ್ರೇಶ್ವರಿ ಕಂಪನಿಗೆ ಹೊಸ ಮೆರಗು

ಪವರ್ ಸ್ಟಾರ್ ಸಿನಿಮಾ ಪ್ರೊಡಕ್ಷನ್ ಕಂಪನಿ ಹಾಗೂ ಆಡಿಯೋ ಸಂಸ್ಥೆ ಎರಡು ಗಾಂಧಿನಗರದಲ್ಲಿ ಪ್ರಾರಂಭ ಆಗ್ತಿದೆ. ಹಳೆ ವಜ್ರೇಶ್ವರಿ ಆಫೀಸ್ ಇದ್ದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಹೊಸ ಕಛೇರಿಯ ಉದ್ಘಾಟನೆಯೂ ಆಗಲಿದೆ. ಒಟ್ಟಾರೆ 'ಟಗರು' ಚಿತ್ರದ ಆಡಿಯೋ ಹಕ್ಕು ಪವರ್ ಸ್ಟಾರ್ ಪಾಲಾಗಿದೆ.

English summary
Tagaru movie team receive best gift from Puneeth Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada