Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರೆಮೋ' ಆಡಿಯೋ ಬಿಡುಗಡೆ ಮಾಡಿದ ಎ.ಆರ್.ರೆಹಮಾನ್
ತಮಿಳು ಸಿನಿ ಅಂಗಳದಲ್ಲಿ ಭಾರಿ ಸದ್ದು-ಸುದ್ದಿ ಮಾಡುತ್ತಿರುವ ಶಿವಕಾರ್ತಿಕೇಯನ್ ಮತ್ತು ಕೀರ್ತಿ ಸುರೇಶ್ ಅಭಿನಯದ 'ರೆಮೋ' ಚಿತ್ರದ ಆಡಿಯೋ ನಿಮ್ಮೆಲ್ಲರಿಗೆ ಈಗ ಲಭ್ಯ.
ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ 'ರೆಮೋ' ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಟ್ವೀಟ್ ಮಾಡುವ ಮೂಲಕ ಎ.ಆರ್.ರೆಹಮಾನ್ 'ರೆಮೋ' ಆಲ್ಬಂ ನ ಹೊರತಂದಿದ್ದಾರೆ.
@anirudhofficial 's Music @Siva_Kartikeyan's #RemoAlbum is now urs💘🎉🎉🎈🎈😊👍💘
— A.R.Rahman (@arrahman) September 4, 2016
Good Luck Guys!!
ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ 'ರೆಮೋ' ಆಡಿಯೋ ಬಿಡುಗಡೆ ಮಾಡಿರುವುದಕ್ಕೆ ಎ.ಆರ್.ರೆಹಮಾನ್ ರವರಿಗೆ ನಿರ್ಮಾಪಕ ಆರ್.ಡಿ.ರಾಜಾ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ['ರೆಮೋ' ಆಡಿಯೋ ಲಾಂಚ್ ಗೆ ದಿನಗಣನೆ ಶುರು]
Thank you so much @arrahman sir for releasing my first Production's #RemoAlbum through your Twitter account 😊👍 https://t.co/bPnxyNzEbG
— RD.RAJA (@RDRajaofficial) September 5, 2016
ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ 'ರೆಮೋ' ಹಾಡುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.
Thank you so much @arrahman sir for releasing our .@24AMSTUDIOS first #RemoAlbum through your Twitter account 😊👍 https://t.co/zDBIlBQEMG
— 24AM STUDIOS (@24AMSTUDIOS) September 5, 2016
'ರೆಮೋ' ಚಿತ್ರದ ಪ್ರಚಾರಾರ್ಥವಾಗಿ ಈಗಾಗಲೇ ಬಿಡುಗಡೆ ಆಗಿರುವ 'ಸಿರಿಕ್ಕಾದೆ' ವಿಡಿಯೋ ಹಿಟ್ ಆಗಿದೆ. ಹೀಗಾಗಿ, 'ರೆಮೋ' ಆಲ್ಬಂಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. [ಅನಿರುದ್ಧ್ ಮ್ಯಾಜಿಕ್: 1 ಮಿಲಿಯನ್ ವೀಕ್ಷಣೆಗೆ ಒಳಪಟ್ಟ 'ಸಿರಿಕ್ಕಾದೆ']
ಅಕ್ಟೋಬರ್ 7 ರಂದು, 3000 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 'ರೆಮೋ' ತೆರೆ ಕಾಣಲಿದೆ. ಭಾಗ್ಯರಾಜ್ ಕಣ್ಣನ್ ಆಕ್ಷನ್-ಕಟ್ ಹೇಳಿರುವ 'ರೆಮೋ' ಚಿತ್ರಕ್ಕೆ, 24AM ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಆರ್.ಡಿ.ರಾಜಾ ಬಂಡವಾಳ ಹೂಡಿದ್ದಾರೆ.