'ಮಿ.ನಟ್ವರ್‌ಲಾಲ್'ಗಾಗಿ ರೊಮ್ಯಾಂಟಿಕ್ ಸಾಂಗ್ ಹಾಡಿದ 'ವರಾಹ ರೂಪಮ್' ಗಾಯಕ ಸಾಯಿ ವಿಘ್ನೇಶ್
ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಇದ್ದರೂ, ಕನ್ನಡಕ್ಕಾಗಿಯೇ ಮಾಡುವ ಸಿನಿಮಾಗಳ ಸಂಖ್ಯೆಯೇನು ಕಮ್ಮಿಯಾಗಿಲ್ಲ. ಕನ್ನಡಿಗರಿಗಾಗಿಯೇ ಅಪ್ಪಟ ಕನ್ನಡ ಸಿನಿಮಾವೊಂದು ರೆಡಿಯಾಗಿದೆ. ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಹೀರೊ ಮತ್ತೆ 'ಮಿಸ್ಟರ್ ನಟ್ವರ್‌ಲಾಲ್' ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಹೌದು.. ಈ ಹಿಂದೆ 'ಮಡಮಕ್ಕಿ', 'ನಂಜುಂಡಿ ಕಲ್ಯಾಣ' ಅಂತಹ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ತನುಷ್ ಶಿವಣ್ಣ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗೇ 'ಮಿ. ನಟ್ವರ್ ಲಾಲ್' ಸಿನಿಮಾದಲ್ಲಿ ನಟಿಸುತ್ತಿರೋದು ಸಿನಿಪ್ರಿಯರಿಗೆ ಗೊತ್ತೇ ಇದೆ.

ಈ ಸಿನಿಮಾ ಮೂಲಕ ತನುಷ್ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು ನಟಿ ಸೋನಲ್ ಮೆಂಟೇರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಮೊದಲನೇ ಹಾಡೊಂದು ರಿಲೀಸ್ ಆಗಿ ಸದ್ದು ಮಾಡಿತ್ತು. ವಿಜಯ್ ಪ್ರಕಾಶ್ ಮೊದಲ ಹಾಡಿಗೆ ಧ್ವನಿ ನೀಡಿದ್ದರು. ಈಗ ಇದೇ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದ್ದು, ರೊಮ್ಯಾಂಟಿಕ್ ಮೂಡಿನ ಹಾಡು ಸಿನಿಪ್ರಿಯರನ್ನು ಸೆಳೆಯುತ್ತಿದೆ.
'ಅಚ್ಚಚ್ಚೋ ಅಚ್ಚು ಮೆಚ್ಚಿವಳು..' ಅನ್ನೋ ರೊಮ್ಯಾಂಟಿಕ್ ಸಾಂಗ್ ಕಿಕ್ ಕೊಡಲು ಆರಂಭಿಸಿದೆ. ವಿಶೇಷ ಅಂದರೆ, ಈ ಹಾಡನ್ನು 'ಕಾಂತಾರ' ಸಿನಿಮಾದ ಸೂಪರ್ ಹಿಟ್ ಸಾಂಗ್ 'ವರಾಹ ರೂಪಂ' ಹಾಡಿರುವ ಸಾಯಿ ವಿಘ್ನೇಶ್ ಹಾಡಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಹಾಡಿಗೆ ಸಾಯಿ ವಿಘ್ನೇಶ್ ಧ್ವನಿ ನೀಡಿದ್ದಾರೆ. ಈ ರೊಮ್ಯಾಂಟಿಕ್ ಹಾಡಿಗೆ ನಿರ್ದೇಶಕ 'ಭರ್ಜರಿ' ಚೇತನ್ ಸಾಹಿತ್ಯ ರಚಿಸಿದ್ದು, ಧರ್ಮ ವಿಷ್ ಸಂಗೀತ ನೀಡಿದ್ದಾರೆ.
ಅಂದ್ಹಾಗೆ 'ಮಿಸ್ಟರ್ ನಟ್ವರ್ ಲಾಲ್' ಸಿನಿಮಾಗೆ ಲವ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟೀಸರ್ ಹಾಗೂ ಎರಡು ಹಾಡು ಬಿಡುಗಡೆಯಾಗಿದ್ದು ಸಿನಿಮಾ ಪ್ರಾಮಿಸಿಂಗ್ ಆಗಿದೆ ಎನಿಸುತ್ತಿದೆ. ಇದೀಗ ರಿಲೀಸ್ ಆಗಿರೋ ಎರಡನೇ ಹಾಡು ಪ್ರೇಮಿಗಳ ಫೇವರಿಟ್ ಆಗುವ ಎಲ್ಲಾ ಸಾಧ್ಯತೆನೂ ಇದೆ. ಇನ್ನು 'ಮಿ.ನಟ್ವರ್‌ಲಾಲ್' ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಪ್ರಚಾರ ಆರಂಭಿಸಿದೆ ತಂಡ.
'ಮಿಸ್ಟರ್. ನಟ್ವರ್ ಲಾಲ್' ಸಿನಿಮಾದಲ್ಲಿ ತನುಷ್ ಜೊತೆ ಸೋನಾಲ್ ಮಾಂತೇರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೇ ನಾಗಭೂಷಣ್, ರಾಜೇಶ್ ನಟರಂಗ, ಕಾಕ್ರೋಚ್ ಸುದೀ, ಯಶ್ ಶೆಟ್ಟಿ, ರಾಜೇಂದ್ರ ಕಾರಂತ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಈ ಸಿನಿಮಾವನ್ನು ತನುಷ್ ಶಿವಣ್ಣ ಅವರೇ ನಿರ್ಮಾಣ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ.


Click it and Unblock the Notifications











