ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rapper ಅಲೋಕ್, ರಾಹುಲ್.?
Recommended Video

ಸ್ಯಾಂಡಲ್ ವುಡ್ ನಲ್ಲಿ ಅಥವಾ ಕನ್ನಡ ಸಂಗೀತ ಲೋಕದಲ್ಲಿ Rap ಶೈಲಿ ಹಾಡುಗಳು ಜನಪ್ರಿಯತೆ ಗಳಿಸುತ್ತಿರುವುದೇ ಈಗೀಗ...
'ಕನ್ನಡ rapper' ಎನ್ನುತ್ತಲೇ ಅದಾಗಲೇ ನಾಲ್ಕು ಸೂಪರ್ ಹಿಟ್ ಹಾಡುಗಳು ನೀಡುವವರು ಚಂದನ್ ಶೆಟ್ಟಿ. ಬರೀ ಚಂದನ್ ಶೆಟ್ಟಿ ಮಾತ್ರ ಅಲ್ಲ, ಅಲೋಕ್ ಬಾಬು ಅಲಿಯಾಸ್ ಆಲ್-ಓಕೆ ಹಾಗೂ ರಾಹುಲ್ ಡಿಟ್-ಓ ಕೂಡ ತಮ್ಮ rap ಸಾಂಗ್ ಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಕ್ಷಣಾರ್ಧದಲ್ಲೇ ಹಾಡುಗಳನ್ನ ಸಂಯೋಜಿಸಿ 'ಬಿಗ್ ಬಾಸ್' ಮನೆಯೊಳಗೆ ಎಲ್ಲರ ಮನ ಗೆದ್ದ ಚಂದನ್ ಶೆಟ್ಟಿ ಸದ್ಯ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಕೂಡ ಹೌದು. ಎಲ್ಲೆಡೆ ಚಂದನ್ ಶೆಟ್ಟಿ ಹವಾ ಜೋರಾಗಿರುವಾಗಲೇ, ಕನ್ನಡ rapper ಗಳಾದ ಆಲ್-ಓಕೆ ಮತ್ತು ರಾಹುಲ್ ಡಿಟ್-ಓ... ಚಂದನ್ ಶೆಟ್ಟಿ ಕಾಲೆಳೆದಿದ್ದಾರೆ, ಟಾಂಗ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಕಾರಣ ಅಲ್-ಓಕೆ ಮತ್ತು ರಾಹುಲ್ ಡಿಟ್-ಓ ಸಂಯೋಜಿಸಿರುವ ಹೊಸ rap ಸಾಂಗ್ - 'ನಂಗನ್ಸಿದ್ದು'. ಮುಂದೆ ಓದಿರಿ...

ಅಲ್-ಓಕೆ ಹಾಗೂ ರಾಹುಲ್ ಡಿಟ್-ಓ ಗೆ ಅನ್ಸಿದ್ದು...
ಅಲ್-ಓಕೆ ಹಾಗೂ ರಾಹುಲ್ ಡಿಟ್-ಓ ತಂಡದಿಂದ ಎರಡ್ಮೂರು ದಿನಗಳ ಹಿಂದೆಯಷ್ಟೇ ಒಂದು ಹೊಸ ಹಾಡು ಬಿಡುಗಡೆ ಆಯ್ತು. ಅದೇ 'ನಂಗನ್ಸಿದ್ದು'.! ಈ ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅದು ಒಳ್ಳೆಯ ಕಾರಣಕ್ಕಾಗಿ ಅಲ್ಲವೇ ಅಲ್ಲ. ಬದಲಾಗಿ ಚಂದನ್ ಶೆಟ್ಟಿಗೆ ಕಾಲೆಳೆದಿರುವ ವಿಚಾರವಾಗಿ.

ಮೊದಲೇ 'ವಿಶೇಷ ಸೂಚನೆ' ಹಾಕಿದ್ದಾರೆ.!
'ನಂಗನ್ಸಿದ್ದು' ಹಾಡು ಶುರು ಆಗುವ ಮುನ್ನವೇ, ''ಈ ಹಾಡು ಯಾರಿಗೂ ಅನ್ವಯಿಸುವುದಿಲ್ಲ. ಒಂದು ವೇಳೆ ಅನ್ವಯಿಸುತ್ತಿದೆ ಅಂತ ಅನಿಸಿದರೆ, ನಾನೇನು ಮಾಡೋಕೆ ಆಗಲ್ಲ. ಇದು 'ನಂಗನ್ಸಿದ್ದು'' ಎಂಬ 'ವಿಶೇಷ ಸೂಚನೆ' ನೀಡಲಾಗಿದೆ. ಆದರೂ, ಈ ಹಾಡು ಚಂದನ್ ಶೆಟ್ಟಿಗೆ ಟಾಂಗ್ ಕೊಡೋಕೆ ಅಂತಲೇ ಮಾಡಿರೋದು ಅಂತ ಜನ ಮಾತನಾಡಿಕೊಳ್ತಿದ್ದಾರೆ.

ಹಾಡಲ್ಲಿ ಅಂಥದ್ದೇನಿದೆ.?
Rap ಬಗ್ಗೆ ಗಂಧ ಗಾಳಿ ಗೊತ್ತಿಲ್ಲದೇ ಇದ್ದರೂ, ಕೆಲವರು ಕನ್ನಡ Rapper ಅಂತ ಹೇಳಿಕೊಳ್ತಿದ್ದಾರಂತೆ. ಅದು ಯಾರು ಎಂದು ಹೇಳದೆ, ಹಾಡಲ್ಲಿ Rap ಅಂದ್ರೇನು ಎಂದು ಗೊತ್ತಿಲ್ಲದವರಿಗೆ ಟಾಂಗ್ ಕೊಟ್ಟಿದ್ದಾರೆ ಟೀಮ್ ಆಲ್ ಓಕೆ.

Rap ಮಾಡೋದ್ ಹೆಂಗ್ ಗೊತ್ತಾ.?
''ಸರಿ ಮಾಡೋಕೆ... ಕರಿ ನೋಡಕ್ಕೆ...
ಹೇಳ್ಕೊಡ್ತೀವಿ Rap ಮಾಡೋದೇ ಹಿಂಗೆ...
ತಲೆ ಬುಡ ಗೊತ್ತಿಲ್ಲ ಅಂದರೂ...
ಬಾಯಿಗ್ ಬಂದಿದ್ ಏನೋ ಒಂದು ಬರದ್ ಹೇಳೋದಲ್ಲ Rap
ಚೆಲ್ಲೋದಕ್ಕೆ ಹಣ ಇದ್ದರೂ... ಕೊಂಡುಕೊಳ್ಳೋಕೆ ಆಗೋದಿಲ್ಲ
ಬ್ಲಡ್ ಅಲ್ಲೇ ಬರಬೇಕು Swag..'' ಎಂಬ ಸಾಹಿತ್ಯ 'ನಂಗನ್ಸಿದ್ದು' ಹಾಡಲ್ಲಿ ಇದೆ. ಹಾಗಾದ್ರೆ, ಬಾಯಿಗ್ ಬಂದಿದ್ದನ್ನ ಒದರುತ್ತಿರುವುದು ಯಾರು.?

ಚೀಪ್ ಟ್ರಿಕ್ಸ್ ಮಾಡ್ತಿರೋದು ಯಾರು.?
''ಊರ್ ತುಂಬಾ rappers ಇದ್ರೇನಂತೆ ಮಗಾ..
ನೀನ್ ಕಲಿಬೇಕು ಫರ್ಸ್ಟು ಬೇಸಿಕ್ಸ್..
ಈಗ್ ತಾನೆ ಬ್ಯಾಟ್ ಹಿಡಿದಿದ್ದೀಯಾ ಮಗಾ..
ಬಾಲ್ ಬಂದ್ಮೇಲೆ ನೀ ಹೊಡಿಬೇಕ್ ಸಿಕ್ಸ್..
ಇಲ್ಲಿ ಟ್ಯಾಲೆಂಟ್ ಇರೋರೇ ಲಾಟರಿ ಹೊಡಿತಾವ್ರೆ ಮಾಡಕ್ಗೊತ್ತಿಲ್ಲದೇ ಗಿಮಿಕ್ಸ್..
ಇಲ್ದೇ ಇರೋ ಅವ್ರು ಎಲ್ಲಾ ಕಡೆ ಮೇರಿತಾವ್ರೆ ಮಾಡಿಕೊಂಡು ಬರಿ ಚೀಪ್ ಟ್ರಿಕ್ಸ್..'' ಅಂತ ಹೇಳುವ ಟೀಮ್ ಆಲ್ ಓಕೆ. ಅದ್ಯಾರು ಹಾಗೆ ಮಾಡ್ತಿರೋರು ಅಂತ ಮಾತ್ರ ಹೇಳಿಲ್ಲ.

ಯಾರು ಫೇಕ್ ವ್ಯೂಸ್ ತಗೊಂಡಿರೋರು.?
'ನಂಗನ್ಸಿದ್ದು' ಹಾಡಲ್ಲಿ - ''ಇಲ್ಲಿ Rap ಅಂದ್ರೆ ಬರಿ ರೈಮಿಂಗ್ ಅಲ್ಲ ಮಗಾ..
ಕ್ಯಾಪ್ಷನ್ ಆಗ್ಬಿಟ್ರೆ ನೀನ್ ಕಿಂಗ್ ಅಲ್ಲ ಮಗಾ..
ಹೇಳೋದ್ ಇದ್ದಿದ್ದಿಂಗ್ ಮಗಾ..
ಎದ್ದು ಬಂದು ಎದೆಗೆ ಒದ್ದಂಗೆ ಮಗಾ..
ಮಿಲಿಯನ್ ಫೇಕ್ ವ್ಯೂಸ್ ತಿಂಗಳೇ...'' ಎಂಬ ಸಾಲಿದೆ. ಕನ್ನಡ rapper ಗಳ ಪೈಕಿ ಮಿಲಿಯನ್ ಗಟ್ಟಲೆ ವ್ಯೂಸ್ ಗಿಟ್ಟಿಸಿಕೊಂಡಿರೋರು ನಿಮಗೆ ಚೆನ್ನಾಗಿ ಗೊತ್ತಿರಲೇಬೇಕಲ್ವಾ.?

ಯಾರು C.?
'ನಂಗನ್ಸಿದ್ದು' ಹಾಡಿನ ಕೊನೆಯಲ್ಲಿ CRAP (ಅರ್ಥ: ಮಲ) ಎನ್ನುವ ಪದದ C ಅಕ್ಷರದ ಮೇಲೆ x ಮಾರ್ಕ್ ಹಾಕಲಾಗಿದೆ. CRAP ಪದದಲ್ಲಿ C ತೆಗೆದರೆ RAP ಆಗುತ್ತೆ ನಿಜ. ಆದ್ರೆ, C ಅಂದ್ರೆ ಚಂದನ್ ಶೆಟ್ಟಿ ಕೂಡ ಆಗಬಹುದಲ್ವಾ.? ಕನ್ನಡ Rapper ಚಂದನ್ ಶೆಟ್ಟಿ ಕಾಲೆಳೆಯುವ ಸಲುವಾಗಿಯೇ ಈ ಹಾಡು ಮಾಡಿರುವುದು ಅಂತ ಟೀಮ್ ಆಲ್ ಓಕೆ ಈಗ ಬೇಜಾನ್ ಟ್ರೋಲ್ ಆಗುತ್ತಿದ್ದಾರೆ.


Click it and Unblock the Notifications











