'ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ' ಎನ್ನುತ್ತಾ ಕನ್ನಡಕ್ಕೆ ಬಂದ ಗಾಯಕಿ ಮಂಗ್ಲಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ತೆಲುಗು ವರ್ಷನ್ 'ಕಣ್ಣೇ ಅಧಿರಿಂದಿ....'ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ಗಾಯಕಿ ಮಂಗ್ಲಿ ಕೊನೆಗೂ ಕನ್ನಡಕ್ಕೆ ಬಂದಿದ್ದಾರೆ.
ತೆಲುಗು ಪ್ರೇಕ್ಷಕರ ನೆಚ್ಚಿನ ಗಾಯಕಿ ಮಂಗ್ಲಿ ತನ್ನ ಅದ್ಭುತ ಕಂಠಸಿರಿಯಿಂದ ಕನ್ನಡ ಸಂಗೀತ ಪ್ರೇಮಿಗಳನ್ನು ಸೆಳೆದಿದ್ದಾರೆ. ರಾಬರ್ಟ್ ಸಿನಿಮಾದ ಒಂದು ಹಾಡು ಮಂಗ್ಲಿಗೆ ಗಡಿಗೂ ಮೀರಿದ ಖ್ಯಾತಿ ತಂದುಕೊಟ್ಟಿದೆ. 'ರಾಬರ್ಟ್' ಸಿನಿಮಾದ ತೆಲುಗು ವರ್ಷನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಂಗ್ಲಿ, ವೇದಿಕೆ ಮೇಲೆ ನಿಂತು 'ಕಣ್ಣೇ ಅಧಿರಿಂದಿ' ಹಾಡು ಹಾಡಿದ್ದೇ ತಡ ಕೆಲವೇ ಗಂಟೆಗಳಲ್ಲಿ ಹಾಡು ವೈರಲ್ ಆಗಿಬಿಟ್ಟಿತು.
ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಪ್ ಸ್ಟೇಟಸ್‌ನಲ್ಲಿ ಮಂಗ್ಲಿ ಹಾಡಿನದ್ದೆ ಸದ್ದು. ಕಣ್ಣೇ ಅಧಿರಿಂದಿ ಎನ್ನುವ ಕನ್ನಡಿಗರ ಹೃದಯ ಕದ್ದ ಮಂಗ್ಲಿ ಕನ್ನಡಕ್ಕೆ ಯಾವಾಗ ಬರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಕೊನೆಗೂ ಮಂಗ್ಲಿ ಕನ್ನಡ ಹಾಡು ಹಾಡಿದ್ದಾರೆ. ಬೆಂಗಳೂರಿಗೆ ಬಂದಿರುವ ಮಂಗ್ಲಿ ಕನ್ನಡದ 'ಕರಿಯಾ ಐ ಲವ್ ಯು' ಸಿನಿಮಾದ ಹಾಡಿಗೆ ನೀಡಿದ್ದಾರೆ.

'ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ....' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡಿಗೆ ದನಿಯಾಗಿದ್ದಾರೆ. ಅಂದಹಾಗೆ ಈ ಹಾಡು ಹಂಸಲೇಖ ಅವರ ಶಿಷ್ಯ ಲೋಕೇಶ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದೆ. ಹಳ್ಳಿ ಸೊಗಡಿನ ಹಾಡು ಇದಾಗಿದ್ದು, ಮಂಗ್ಲಿ ಜೊತೆ ನವೀನ್ ಸಜ್ಜು ಕೂಡ ಧ್ವನಿಯಾಗಿದ್ದಾರೆ.
ತೆಲುಗಿನ ಖ್ಯಾತ ಗಾಯಕಿ ಮಂಗ್ಲಿಯನ್ನು ಕನ್ನಡಕ್ಕೆ ಕರೆತಂದಿದ್ದು, ಕರಿಯಾ ಐ ಲವ್ ಯು ಸಿನಿಮಾದ ನಾಯಕ ಮಂಜುನಾಥ್. ಈಗಾಗಲೇ ಹಾಡಿನ ರೆಕಾರ್ಡಿಂಗ್ ಕೂಡ ಮುಗಿದ್ದು, ಚಿತ್ರತಂಡ ಮಂಗ್ಲಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

'ಕರಿಯಾ ಐ ಲವ್ ಯೂ' ಹೊಸಬರ ಸಿನಿಮಾ ಆಗಿದ್ದು, ಹಳ್ಳಿಯ ಪ್ರೇಮಕತೆ ಇದಾಗಿದೆ. ಸಿನಿಮಾವನ್ನು ತಿಪ್ಪೇಶ್ ಎಂಬುವರು ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು 'ರಾಹುಕಾಲ' ಸಿನಿಮಾ ನಿರ್ದೇಶನ ಮಾಡಿದ್ದರು. ನಾಯಕಿಯಾಗಿ ಶಕುಂತಲಾ ನಟಿಸಿದ್ದಾರೆ. ಮಂಗ್ಲಿ ಹಾಡಿರುವ ಕನ್ನಡ ಕೂಡ ಸೂಪರ್ ಹಿಟ್ ಆಗುತ್ತಾ ಎಂದು ಕಾದುನೋಡಬೇಕು.


Click it and Unblock the Notifications











