For Quick Alerts
  ALLOW NOTIFICATIONS  
  For Daily Alerts

  "ಫ್ಯಾನ್ಸ್ ನನ್ನ ಅಂದ ನೋಡಿ ಇಷ್ಟಪಡುತ್ತಾರಾ? ನನ್ನ ಗಾಯನ ಇಷ್ಟಪಡುತ್ತಾರಾ? ಗೊತ್ತಿಲ್ಲ": ಸುನೀತಾ

  |

  ಸುನೀತಾ ಉಪಾದ್ರಷ್ಟ ಸಂಗೀತ ಪ್ರೇಮಿಗಳಿಗೆ ಚಿರಪರಿಚಿತ ಹೆಸರು. ಈಕೆ ತನ್ನ ಸುಮಧುರ ಕಂಠ ಹಾಗೂ ಸೌಂದರ್ಯದಿಂದ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ಕೂಡ ಸಂಗೀತಾ ಹಾಡು ಹಾಡಿ ಸಕ್ಸಸ್ ಕಂಡಿದ್ದಾರೆ. ಕಂಠದಾನ ಕಲಾವಿದೆ ಆಗಿಯೂ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೆ ಸುನೀತಾ ಮಕ್ಕಳ ಸಲಹೆಯಂತೆ ಎರಡನೇ ಮದುವೆ ಆಗಿದ್ದರು. ಉದ್ಯಮಿ ರಾಮಕೃಷ್ಣ ವೀರಪನೇನಿ ಜೊತೆ ಬಹಳ ಅದ್ಧೂರಿಯಾಗಿ ಈ ಕಲ್ಯಾಣೋತ್ಸವ ನೆರವೇರಿತ್ತು.

  ಸುನೀತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ವಿಭಿನ್ನವಾಗಿ ಕಾಮೆಂಟ್‌ ಮಾಡಿದ್ದಾರೆ. ನಿರೂಪಕ ನಿಮಗೆ ಟಾಪ್ ಹೀರೋಯಿನ್‌ಗಳಿಗೆ ಸರಿಸಮನಾದ ಅಭಿಮಾನಿ ಬಳಗವಿದೆ ಹಾಗೂ ನೀವು ಟ್ರೆಂಡ್ ಸೆಟ್ಟರ್ ಆಗಿದ್ದೀರಾ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ಗಾಯಕಿ, "ನನಗೂ ಅದೇ ಅರ್ಥವಾಗುತ್ತಿಲ್ಲ, ಅಭಿಮಾನಿಗಳು ನಮ್ಮಲ್ಲಿ ಏನು ನೋಡುತ್ತಾರೆ ಮತ್ತು ಏನು ಇಷ್ಟ ಆಗುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಇದು ಗೊತ್ತಿಲ್ಲದೇ ನಾನು ಗೊಂದಲಕ್ಕೆ ಸಿಲುಕುತ್ತೇನೆ" ಎಂದಿದ್ದಾರೆ.

  ಸದ್ಗುರು ಸಲಹೆ ಕೇಳಿ 2ನೇ ಮದುವೆಗೆ ಸಮಂತಾ ಸಿದ್ದ?ಸದ್ಗುರು ಸಲಹೆ ಕೇಳಿ 2ನೇ ಮದುವೆಗೆ ಸಮಂತಾ ಸಿದ್ದ?

  ಹಾಗಾದರೆ ನಿಮಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ ಎನ್ನುವುದನ್ನು ನೀವು ಒಪ್ಪಿಕೊಳ್ಳುವುದಿಲ್ಲವಾ ಎನ್ನುವ ಪ್ರಶ್ನೆಗೆ "ಇದರ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತೇನೆ. ಅವರೆಲ್ಲರಿಗೂ ನನ್ನ ಹಾಡು ಇಷ್ಟವಾಯ್ತಾ? ನನ್ನ ಸೀರೆ ಇಷ್ಟವಾಯ್ತಾ ? ಅಥವಾ ನಾನು ಸುಂದರವಾಗಿ ಇದ್ದೀನಿ ಅನ್ನುವ ಕಾರಣಕ್ಕೆ ಇಷ್ಟಪಡ್ತಾರಾ? ಎನ್ನುವುದೇ ನನಗೆ ಅರ್ಥವಾಗುವುದಿಲ್ಲ. ಎಲ್ಲೇ ಹೋದರೂ 'ಮೇಡಂ ನಿಮ್ಮ ಹಾಡು ನನಗೆ ತುಂಬಾ ಇಷ್ಟ ಎಂದು ಮಾತನಾಡಿಸುತ್ತಾರೆ."

  ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ಸುನೀತಾ ಒಂದು ಪ್ರಸಂಗವನ್ನು ಹಂಚಿಕೊಂಡಿದ್ದಾರೆ. "ಒಮ್ಮೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ವ್ಯಕ್ತಿ ನನ್ನನ್ನು ನೋಡಿ ಓಡಿ ಬಂದ. ಬೌನ್ಸರ್‌ಗಳು ತಡೆದರು. ಆದರೂ ಅವನು ನನ್ನ ಕಡೆಗೆ ಓಡಿ ಬಂದ. ಆತನನ್ನು ಬಿಡಲು ಬೌನ್ಸರ್‌ಗಳಿಗೆ ಹೇಳಿದೆ. ಆತ ಹತ್ತಿರ ಬಂದು ಅಭಿಮಾನ ಪ್ರದರ್ಶಿಸುತ್ತಾನೆ ಎಂದುಕೊಂಡೆ. ಆದರೆ ಆತ ಬಂದ ಕೂಡಲೇ ತನ್ನ ಫೋನಿನಲ್ಲಿ ನನ್ನ ಫೋಟೋ ತೋರಿಸಿ, ಮೇಡಂ, ಈ ಸೀರೆ ಎಲ್ಲಿ ತಗೊಂಡ್ರಿ? ತುಂಬಾ ಚೆನ್ನಾಗಿದೆ. ನನ್ನ ಹೆಂಡತಿಗೆ ಇಂಥದ್ದೇನಾದರೂ ಉಡುಗೊರೆ ಕೊಡಬೇಕು' ಎಂದ. ಇದನ್ನು ನೋಡಿ ನನಗೆ ಅಚ್ಚರಿಯಾಗಿತ್ತು ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

  Telugu Singer Sunitha Upadrashta shocking comments on her fan following

  "ನನ್ನನ್ನು ಕಂಠದಾನ ಕಲಾವಿದೆಯಾಗಿ, ಗಾಯಕಿಯಾಗಿ ನನ್ನ ಕಲೆಯನ್ನು ಗುರುತಿಸುವ ಮತ್ತು ನನ್ನನ್ನು ನನ್ನಂತೆಯೇ ಮೆಚ್ಚುವ ಅನೇಕ ಜನರಿದ್ದಾರೆ ಎಂದು ಗೊತ್ತಾದಾಗ ನಾನು ದೇವರಿಗೆ ಧನ್ಯವಾದಗಳು ತಿಳಿಸುತ್ತೇನೆ' ಎಂದು ಆಕೆ ಹೇಳಿದ್ದಾರೆ. 'ಸವಿ ಸವಿ ನೆನೆಪು', 'ಅಭಯ್', 'ಡ್ರಾಮಾ', 'ಹುಡುಗ್ರು', 'ಕಠಾರಿವೀರ ಸುರಸುಂದರಾಂಗಿ', 'ಸಂತು ಸ್ಟ್ರೈಟ್ ಫಾರ್ವರ್ಡ್' ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಿಗೆ ಸುನೀತಾ ಹಾಡು ಹಾಡಿದ್ದಾರೆ. ಆಕೆ ಕನ್ನಡದಲ್ಲಿ ಹಾಡಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ.

  English summary
  Telugu Singer Sunitha Upadrashta shocking comments on her fan following. Know More.
  Wednesday, September 21, 2022, 8:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X