For Quick Alerts
  ALLOW NOTIFICATIONS  
  For Daily Alerts

  'ವೀರ ಸಿಂಹ ರೆಡ್ಡಿ'ಯ ಮಾಸ್ ಲುಕ್ ನೋಡಿ 'ಜೈ ಬಾಲಯ್ಯ' ಎಂದ ಫ್ಯಾನ್ಸ್!

  |

  'ಅಖಂಡ' ಸಿನಿಮಾ ಮೂಲಕ ಬಾಲಕೃಷ್ಣಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 'ಅಖಂಡ' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದ ಬಳಿಕ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದುವೇ 'ವೀರ ಸಿಂಹ ರೆಡ್ಡಿ'.

  ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ಅಭಿನಯದ ಮಾಸ್ ಆಕ್ಷನ್ ಸಿನಿಮಾ 'ವೀರ ಸಿಂಹ ರೆಡ್ಡಿ'ಯ ಮೊದಲ ಸಾಂಗ್ ರಿಲೀಸ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ.

  ಈ ಸಿನಿಮಾದಲ್ಲಿ ಬಾಲಕೃಷ್ಣ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ನಂದಮುರಿ ಬಾಲಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಅದೇ ಕುತೂಹಲದಲ್ಲಿದ್ದ ಬಾಲಯ್ಯ ಅಭಿಮಾನಿಗಳಿಗಾಗಿ ಮಾಸ್ ಸಾಂಗ್ ಒಂದನ್ನು ಈಗ ರಿಲೀಸ್ ಮಾಡಲಾಗಿದೆ. ಬಾಲಯ್ಯ ಮಾಸ್ ಅಭಿಮಾನಿಗಳು 'ಜೈ ಬಾಲಯ್ಯ' ಮಾಸ್ ಸಾಂಗ್ ನೋಡಿ ಥ್ರಿಲ್ ಆಗಿದ್ದಾರೆ.

  ಅಂದ್ಹಾಗೆ 'ವೀರ ಸಿಂಹ ರೆಡ್ಡಿ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಸಿನಿಮಾದ ಶೂಟಿಂಗ್ ನಡೆಯುತ್ತಿರುವಾಗಲೇ ಸಿನಿಮಾದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಡಿನ ಮೂಲಕ ಸಿನಿಪ್ರಿಯರ ಮನಗೆಲ್ಲಲು ಮುಂದಾಗಿದೆ.

  'ವೀರ ಸಿಂಹ ರೆಡ್ಡಿ'ಯ ಮಾಸ್ ಸಾಂಗ್ 'ಜೈ ಬಾಲಯ್ಯ'. ಈ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು, ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯಕ್ಕೆ ಕರಿಮುಲ್ಲ ದನಿ ನೀಡಿದ್ದಾರೆ. ತಮನ್ ಎಸ್ ಮ್ಯೂಸಿಕ್ ನೀಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಹಾಡು ಕೇಳಿ ಫುಲ್ ಥ್ರಿಲ್ ಆಗಿದ್ದಾರೆ.

  Telugu Star Balakrishna Starrer Veera Simha Reddy Movie Mass Song Released

  2023ರ ಸಂಕ್ರಾಂತಿ ಹಬ್ಬಕ್ಕೆ 'ವೀರ ಸಿಂಹ ರೆಡ್ಡಿ' ಸಿನಿಮಾ ಗ್ರ್ಯಾಂಡ್ ಆಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಬಾಲಕೃಷ್ಣಗೆ ಈ ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ವರಲಕ್ಷ್ಮೀ ಶರತ್ ಕುಮಾರ್ ಜೊತೆಯಾಗಿದ್ದಾರೆ.

  English summary
  Telugu Star Balakrishna Starrer Veera Simha Reddy Movie Mass Song Released, Know More.
  Friday, November 25, 2022, 23:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X