twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕಿ ಆಶಾ ಭೋಸ್ಲೆಗೆ ಮರಿ ಟೈಗರ್ ವಾರ್ನಿಂಗ್

    By Rajendra
    |

    Asha Bhosle
    ಜನಪ್ರಿಯ ಗಾಯಕಿ ಮೆಲೊಡಿ ಕ್ವೀನ್ ಆಶಾ ಭೋಸ್ಲೆ ತೀರ್ಪುಗಾರರಾಗಿ ವ್ಯವಹರಿಸುತ್ತಿರುವ ಸಂಗೀತ ಕಾರ್ಯಕ್ರಮ 'ಸುರ್ -ಕ್ಷೇತ್ರಾ'ಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಾರ್ನಿಂಗ್ ನೀಡಿದ್ದಾರೆ. ಸಹರಾ ಒನ್ ವಾಹಿನಿ ನಡೆಸುತ್ತಿರುವ ಈ ಸಂಗೀತ ಸ್ಪರ್ಧೆಯಲ್ಲಿ ಪಾಕಿಸ್ತಾನಿ ಗಾಯಕರು ಪಾಲ್ಗೊಳ್ಳುತ್ತಿರುವುದೇ ಈ ವಿವಾದಕ್ಕೆ ಕಾರಣವಾಗಿದೆ.

    "ಯಾವುದೇ ಕಾರಣಕ್ಕೂ ಪಾಕಿಸ್ತಾನಿ ಗಾಯಕರು ಈ ಶೋನಲ್ಲಿ ಪಾಲ್ಗೊಳ್ಳುವುದನ್ನು ಸಹಿಸುವುದಿಲ್ಲ" ಎಂದು ಠಾಕ್ರೆ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ತಾವು ಕಲೆಗೆ ತಲೆ ಬಾಗುತ್ತೇವೆ. ಆದರೆ ಪಾಕಿಸ್ತಾನಿಯರನ್ನು ಭಾರತದೊಳಗೆ ಅನುಮತಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಆಶಾ ಭೋಸ್ಲೆ ಅವರು ಅವರು ಯಾರೇ ಆಗಲಿ ನಾವು ಅತಿಥಿಗಳನ್ನು ದೇವರೆಂದು ಭಾವಿಸುತ್ತೇವೆ. ಇದು ನಮ್ಮ ದೇಶದ ಸಂಪ್ರದಾಯ ಎಂದಿದ್ದಾರೆ. ಈ ಬಗ್ಗೆ ಠಾಕ್ರೆ ಪ್ರತಿಕ್ರಿಯಿಸುತ್ತಾ, ಅತಿಥಿ ದೇವೋ ಭವಾ ಅಲ್ಲ ಅದು ಪೈಸಾ ದೇವೋ ಭವಾ ಎಂದು ವ್ಯಂಗ್ಯವಾಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಭೋಸ್ಲೆ ಅವರಿಗೆ ಎಷ್ಟು ಸಂದಾಯವಾಗಿದೆ ಎಂಬುದು ತಮಗೆ ಗೊತ್ತಿದೆ ಎಂದಿದ್ದಾರೆ ಠಾಕ್ರೆ.

    ಭೋಸ್ಲೆ ವಿರುದ್ಧ ಠಾಕ್ರೆ ಗುಡುಗಿರುವುದಕ್ಕೆ ಬಾಲಿವುಡ್ ತಾರೆಗಳು ಯಾರೂ ಇದುವರೆಗೂ ಕಮಕ್ ಕಿಮಕ್ ಎಂದಿಲ್ಲ. ಒಬ್ಬ ಮಹೇಶ್ ಭಟ್ ಮಾತ್ರ ಆಶಾ ಭೋಸ್ಲೆ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಉಳಿದಂತೆ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಆದರೆ ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಮಾತ್ರ, ಈ ರೀತಿಯ ಕಾರ್ಯಕ್ರಮಗಳಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಾಂಸ್ಕೃತಿಕ ವಿನಿಮಯವಾಗುತ್ತದೆ ಎಂದಿದ್ದಾರೆ.

    ಇತ್ತೀಚೆಗೆ ತೆರೆಕಂಡ ಏಕ್ ಥಾ ಟೈಗರ್ ಚಿತ್ರವನ್ನು ಪಾಕಿಸ್ತಾನ ನಿಷೇಧಿಸಿದ್ದನ್ನು ಅವರು ಎಂಎನ್ಎಸ್ ಈ ಸಂದರ್ಭದಲ್ಲಿ ಸ್ಮರಿಸಿದೆ. ಭಾರತದ ಬದ್ಧ ಶತ್ರುವಾದ ಪಾಕಿಸ್ತಾನದಲ್ಲಿ ಈ ರೀತಿಯ ಕಾರ್ಯಕ್ರಮಕ್ಕೆ ಏರ್ಪಾಟು ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿದೆ.

    ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪ್ರಮುಖ ಗಾಯಕ ಆತಿಫ್ ಅಸ್ಲಾಮ್, ಭಾರತೀಯ ಗಾಯಕ ಹಿಮೇಶ್ ರೇಷ್ಮಿಯಾ ಅವರಂತಹವರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಟಿವಿ ರೇಟಿಂಗ್ ಗಾಗಿ ಪಾಕಿಸ್ತಾನಿಯರನ್ನು ಇಲ್ಲಿಗೆ ಕರೆಸಿಕೊಳ್ಳುವುದು ತಾವು ಸಹಿಸುವುದಿಲ್ಲ ಎಂದಿದೆ ಎಂಎನ್ಎಸ್.

    ಏನಿದು ಸುರ್ ಕ್ಷೇತ್ರಾ: ಸಹರಾ ಒನ್ ಟಿವಿ ನಡೆಸಿಕೊಡುತ್ತಿರುವ ಇಂಡಿಯನ್ ರಿಯಾಲಿಟಿ ಮ್ಯೂಸಿಕ್ ಶೋ. ಮೂರು ತಿಂಗಳ ಕಾಲ ಈ ಶೋ ನಡೆಯುತ್ತದೆ. ಆಶಾ ಭೋಸ್ಲೆ, ಅಬೀದಾ ಪರ್ವೀನ್ ಹಾಗೂ ರುನಾ ಲೈಲಾ ಕಾರ್ಯಕ್ರಮದ ತೀರ್ಪುಗಾರರು. ಭಾರತದ ಗಾಯಕ ಹಿಮೇಶ್ ರೇಷ್ಮಿಯಾ ಹಾಗೂ ಪಾಕ್ ಗಾಯಕ ಅತೀಫ್ ಅಸ್ಲಾಮ್ ನೇತೃತ್ವದಲ್ಲಿ ಎರಡು ತಂಡಗಳಿರುತ್ತವೆ.

    ಭಾರತದ ಎಂಟು ಗಾಯಕರ ತಂಡಕ್ಕೆ ಹಿಮೇಶ್ ರೇಷ್ಮಿಯಾ ಸಾರಥ್ಯ ವಹಿಸಿದರೆ ಪಾಕಿಸ್ತಾನದ ಎಂಟು ಮಂದಿ ತಂಡಕ್ಕೆ ಅತೀಫ್ ನೇತೃತ್ವ ವಹಿಸಲಿದ್ದಾರೆ. ಈ ರಿಯಾಲಿಟಿ ಶೋನ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ. (ಒನ್ ಇಂಡಿಯಾ ಸಿನಿ ಡೆಸ್ಕ್)

    English summary
    MNS chief Raj Thackeray on Friday slammed veteran singer Asha Bhosale for participating in a television Sur Kshetra (Sahara One) music show in which eight vocalists from Pakistan will lock horns with eight Indian singers.
    Saturday, September 1, 2012, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X