ಸಕ್ಕರೆ ನಗುವ ಚೆಲುವೆಯ ಮುದ್ದಾದ ಹಾಡನ್ನು ಕೇಳಿ
ವಿಜಯದಶಮಿ ಹಬ್ಬದ ವಿಶೇಷವಾಗಿ 'ತಾಯಿಗೆ ತಕ್ಕ ಮಗ' ಸಿನಿಮಾದ ಹಾಡು ಬಿಡುಗಡೆಯಾಗಿದೆ. ಹಬ್ಬದ ದಿನ ಸಿಹಿಯ ಜೊತೆಗೆ ಎಲ್ಲರೂ ಸಕ್ಕರೆ ನಗುವ ಚೆಲುವೆಯ ಹಾಡನ್ನು ಆನಂದಿಸುತ್ತಿದ್ದಾರೆ.
''ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು..
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು..'' ಎಂಬ ಈ ಹಾಡನ್ನು ರಾಘವೇಂದ್ರ ಸಿ ವಿ ಬರೆದಿದ್ದಾರೆ. ಈ ಯುವ ಗೀತರಚನೆಕಾರನ ಮೊದಲ ಹಾಡು ಇದಾಗಿದೆ.

ಹಾಡಿನಲ್ಲಿ ಬರುವ ಅನೇಕ ಸಾಲುಗಳು ಹೊಸತಾಗಿವೆ. ರಾಘವೇಂದ್ರ ಅವರ ಸುಂದರ ಪದಗಳಿಗೆ ಅಷ್ಟೇ ಸುಂದರವಾದ ಸಂಗೀತವನ್ನು ಜೂಡಾ ಸ್ಯಾಂಡಿ ಸೇರಿಸಿದ್ದಾರೆ. ದೀಪಕ್ ದೊಡ್ಡೀರ ಈ ಗೀತೆಯನ್ನು ಹಾಡಿದ್ದಾರೆ.

ಯೂ ಟ್ಯೂಬ್ ನಲ್ಲಿ ಸಿನಿಮಾದ ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಉಳಿದ ಹಾಡಿಗೆ ಜಯಂತ್ ಕಾಯ್ಕಿಣಿ ಹಾಗೂ ನಿರ್ದೇಶಕ ಶಶಾಂಕ್ ಅವರ ಸಾಹಿತ್ಯವಿದೆ.
'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25 ನೇ ಸಿನಿಮಾವಾಗಿದೆ. ಆಶಿಕಾ ರಂಗನಾಥ್ ಸಿನಿಮಾದ ನಾಯಕಿಯಾಗಿದ್ದಾರೆ.
English summary
Kannada actress Sumalatha and Ayaj Rao's 'Thayige Thakka Maga' movie new song released.


Click it and Unblock the Notifications