For Quick Alerts
  ALLOW NOTIFICATIONS  
  For Daily Alerts

  ಕನ್ನಡ ಹಾಡುಗಳನ್ನ ಹಾಕದ ಪಬ್‌ಗಳಿಗೆ ಟಕ್ಕರ್ ಕೊಡಲು ಹೊರಟ ಹಿಪಾಪ್ ಕನ್ನಡಿಗರು!

  |

  ಹಿಪಾಪ್ ಹಾಗೂ ವೆಸ್ಟರ್ನ್ ಮ್ಯೂಸಿಕ್ ಇತ್ತೀಚೆಗೆ ಕನ್ನಡದಲ್ಲೂ ಫೇಮಸ್ ಆಗುತ್ತಿದೆ. ಕನ್ನಡದಲ್ಲಿ ಚಂದನ್ ಶೆಟ್ಟಿ ಹಾಗೂ ಆಲ್‌ ಓಕೆ ಹೆಸರುಗಳು ಮುಂಚೂಣಿಯಲ್ಲಿದೆ. ಇವರೊಂದಿಗೆ ರಾಹುಲ್ ಡಿಟ್ ಓ, ಸಿದ್, ಎಂ ಸಿ ಬಿಜ್ಜು, ಗುಬ್ಬಿ, ಮಾರ್ಟಿನ್ ಯೋ ಕೂಡ ಹಿಪಾಪ್ ಮ್ಯೂಸಿಕ್ ಪ್ರಿಯರಿಗೆ ಚಿರಪರಿಚಿತ. ಇವರೆಲ್ಲರೂ ಒಂದಾಗಿ ದೊಡ್ಡ ಲೈವ್ ಕಾನ್ಸರ್ಟ್ ನೀಡಲು ಮುಂದಾಗಿದ್ದಾರೆ.

  ಕಳೆದ ಕೆಲವು ದಿನಗಳ ಹಿಂದೆ ಚಂದನ್ ಶೆಟ್ಟಿ ಹಾಗೂ ಆಲ್‌ ಓಕೆ ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನು ಕೇಳಿದರೂ ಹಾಕಲ್ಲ ಅನ್ನೋ ಆರೋಪ ಮಾಡಿದ್ದರು. ಅಲ್ಲಿಂದ ಕನ್ನಡ ಹಿಪಾಪ್ ಲೋಕದಲ್ಲಿ ಹೊಸ ಅಭಿಯಾನವೇ ಶುರುವಾಗಿತ್ತು. ಪಬ್‌ಗಳಲ್ಲಿ ಕನ್ನಡ ಹಾಡು ಕೇಳಬೇಕು ಎಂದು ಆನ್‌ಲೈನ್ ಅಭಿಯಾನ ಶುರು ಮಾಡಿದ್ದರು.

  ಹೊಸ ಸಿನಿಮಾಕ್ಕೆ 'ಕೆಜಿಎಫ್' ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ!ಹೊಸ ಸಿನಿಮಾಕ್ಕೆ 'ಕೆಜಿಎಫ್' ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ!

  ಈಗ ಕನ್ನಡ ಹಾಡುಗಳನ್ನು ಪ್ಲೇ ಮಾಡದ ಪಬ್‌ಗಳಿಗೆ ಸೆಡ್ಡು ಹೊಡೆಯುವುದಕ್ಕೆಂದೇ ಅತೀ ದೊಡ್ಡ ಹಿಪಾಪ್ ಕನ್ನಡಿಗರು ಲೈವ್ ಕಾನ್‌ಸರ್ಟ್ ಮಾಡುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಲೀಲಾ ಪ್ಯಾಲೇಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 300 ಹಾಡುಗಳನ್ನು ನಾಲ್ಕು ಗಂಟೆಗಳ ಕಾಲ ಹಾಡಲಿದ್ದಾರೆ. ಕನ್ನಡದ ಪ್ರತಿಭೆ ಡಿಜೆ ಲೀಥಲ್ ಜೊತೆ 5 ಮಂದಿ ಹಿಪಾಪ್ ಕನ್ನಡಿಗರು ಕಾರ್ಯಕ್ರಮ ನೀಡಲಿದ್ದಾರೆ. ಈ ಕಾರ್ಯಕ್ರಮದ ಆಯೋಜಕಿ ಡಾ. ಚೇತನ ಈ ಲೈವ್ ಕಾನ್ಸರ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ.

  ಈ ಹಿಪಾಪ್ ಕಾನ್ಸರ್ಟ್ ಉದ್ದೇಶವೇನು?

  ಈ ಹಿಪಾಪ್ ಕಾನ್ಸರ್ಟ್ ಉದ್ದೇಶವೇನು?

  "ಕನ್ನಡವನ್ನು ಇನ್ನೊಂದು ಲೆವೆಲ್‌ಗೆ ತೋರಿಸಬೇಕು ಅನ್ನುವುದು ಇದರ ಪ್ರಮುಖ ಉದ್ದೇಶ. ಲೀಲಾ ಪ್ಯಾಲೇಸ್‌ನಲ್ಲಿ ಕನ್ನಡ ಕಾನ್‌ಸರ್ಟ್ ನಡೆಯುವುದೇ ಇಲ್ಲ. ಕನ್ನಡ ಡಿಜೆ ನೈಟ್ ನಡೆಯುವುದೇ ಇಲ್ಲ. ಇದೇ ಮೊದಲ ಬಾರಿಗೆ ನಮ್ಮ ತಂಡ, ಅಂದರೆ ನಾನು, ವಿವೇಕ್, ವರುಣ್ ಮೂವರು ಸೇರಿಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ಹಿಪಾಪ್ ಕನ್ನಡಿಗರೆನ್ನೆಲ್ಲಾ ಒಟ್ಟಿಗೆ ಸೇರಿಸಿ ಕನ್ನಡ ಡಿಜೆ ನೈಟ್ ನಡೆಯಲಿದೆ." ಎನ್ನುತ್ತಾರೆ ಡಾ. ಚೇತನ

  ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ

  ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ

  " ಇದು ಸುಮಾರು ನಾಲ್ಕು ಗಂಟೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯಲಿದೆ. ರೆಟ್ರು ಟು ಮೆಟ್ರೋ ಅಂತ ಒಂದು ಥೀಮ್ ಇಟ್ಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ಕನ್ನಡದ ಬ್ಲ್ಯಾಕ್ ಅಂಡ್ ವೈಟ್ ಸಾಂಗ್‌ನಿಂದ ಹಿಡಿದು ಇಲ್ಲಿವರೆಗೂ ಬಂದಿರುವ ಕೆಲವು ಸೂಪರ್‌ ಹಿಟ್ ಹಾಡುಗಳನ್ನು ಡಿಜೆಯಲ್ಲಿ ಹಾಕುತ್ತಿದ್ದೇವೆ. ನಮ್ಮ 5 ಜನ ಆರ್ಟಿಸ್ಟ್‌ಗಳೂ ಕೂಡ ಒಂದೂವರೆ ಗಂಟೆ ಪರ್ಫಾರ್ಮ್ ಮಾಡುತ್ತಿದ್ದಾರೆ."

  ಈ ಕಾನ್‌ಸರ್ಟ್ ಉದ್ದೇಶವೇನು?

  ಈ ಕಾನ್‌ಸರ್ಟ್ ಉದ್ದೇಶವೇನು?

  "ಡಿಜೆ ನಡೆಯುವಾಗ ಉಪೇಂದ್ರ ಅವರ ಹಾಡು ಬಂದರೆ, ಅವರ ಮುಖವನ್ನು ಹೋಲೊಗ್ರಫಿಯಲ್ಲಿ ಪ್ರೊಜೆಕ್ಟ್ ಮಾಡುತ್ತಿದ್ದೇವೆ. ಅದು ಆಡಿಯನ್ಸ್ ಮೇಲೆ ಹೋಗುತ್ತೆ. ನಮ್ಮ ಉದ್ದೇಶ ಎನು ಅಂದರೆ, ಕನ್ನಡನಾ ಹಾಗೂ ಕನ್ನಡ ತನವನ್ನು ತೋರಿಸಬೇಕು ಅನ್ನುವುದೇ ನಮ್ಮ ಮುಖ್ಯ ಉದ್ದೇಶ. ಬರೀ ಹಾಡು ಅಷ್ಟೇ ಅಲ್ಲ. ವಿಜ್ಯೂವಲ್ ಹಾಗೂ ಆಡಿಯೋ ಎರಡೂ ಇರಬೇಕು ಅನ್ನುವುದು ನಮ್ಮ ಉದ್ದೇಶ."

  ಬೆಂಗಳೂರಿನ ಪಬ್ ಕನ್ನಡ ವಿರೋಧಿ ಅಲ್ವಾ?

  ಬೆಂಗಳೂರಿನ ಪಬ್ ಕನ್ನಡ ವಿರೋಧಿ ಅಲ್ವಾ?

  "ಕೋರಮಂಗಲದಲ್ಲಿ ಕನ್ನಡ ಸಾಂಗ್‌ಗಳನ್ನು ಹಾಕುವುದಿಲ್ಲ ಎಂದು ಗಲಾಟೆ ಆಗಿತ್ತಲ್ಲ. ಯಾವುದೇ ದೊಡ್ಡ ದೊಡ್ಡ ಪಬ್‌ಗಳಲ್ಲಿ ಅಂತರರಾಷ್ಟ್ರೀಯ ಹಾಗೂ ಬಾಲಿವುಡ್‌ ಸಾಂಗ್‌ಗಳೇ ಪ್ಲೇ ಆಗುತ್ತೆ. ನಾವು ಕೇಳಿ ಹೇಳುವ ತನಕ ಕನ್ನಡ ಸಾಂಗ್ ಅನ್ನು ಹಾಕುವುದಿಲ್ಲ. ಇಷ್ಟೆಲ್ಲಾ ಗಲಾಟೆ ಆದಮೇಲೆ ನಾಲ್ಕು ಕನ್ನಡ ಹಾಡು ಕೇಳುವುದಕ್ಕೆ ಅವಕಾಶವಿದೆ. ಅದಕ್ಕೆ ನಾವೀಗ ನಾಲ್ಕು ಗಂಟೆ ಬರೀ ಕನ್ನಡ ಹಾಡು ಹಾಕುತ್ತೇವೆ. ಡಾ.ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್‌ನಾಗ್‌ ದಿಗ್ಗಜರ ಹಾಡುಗಳನ್ನು ಡಿಜೆ ಲೆವೆಲ್‌ನಲ್ಲಿ ಹಾಕಲಿದ್ದೇವೆ. 1500 ಮಂದಿ ಆಡಿಯನ್ಸ್ ಬರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದೇವೆ." ಎನ್ನುತ್ತಾರೆ ಆಯೋಜಕಿ ಡಾ. ಚೇತನಾ.

  English summary
  The Biggest Hip Hop Kannadigaru Live In Concert Featuring Kannada DJ Night, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X