ಒಬ್ಬನೇ ಶಿವ ಒಬ್ಬನೇ ಯುವ ; ಯುವ ಮೊದಲ ಹಾಡು ಬೆಂಕಿ , ದೊಡ್ಮನೆ ಭಕ್ತಗಣ ಕ್ಯಾಕಿ ..!

ಯುವ ಮೊದಲ ಮೆರವಣಿಗೆ ಹೊರಟಿದೆ. ನೋಡಿದವರು ನೋಡ್ತಾನೇ ಇದ್ದಾರೆ. ಬಿಟ್ಟು ಬಿಡದಂಗೆ ಹಾಡನ್ನ ಕೇಳ್ತಿದ್ದಾರೆ. ಕಾರಣ ಪವರ್ ಸ್ಟಾರ್ ಮೇಲಿನ ಪ್ರೀತಿ ಹಾಗೂ ಮೆಗಾ ಪವರ್ ಸ್ಟಾರ್ ಮೇಲೆ ಕನ್ನಡಿಗರಿಗೆ ಇರುವ ಕಾಳಜಿ.

ಅಬ್ಬಬ್ಬ ಅದೆಂಥ ಕುಣಿತ. ಥೇಟ್ ನಮ್ಮೆಲ್ಲರ ಯುವರತ್ನ ಅವರನ್ನ ನೆನಪಿಸುವಂತ ಹಾಡು ಇದು. ಇಲ್ಲಿ ಅಪ್ಪು ಕಾಣಲ್ಲ. ಬದಲಿಗೆ ಯುವ ಕಣ್ಣಲ್ಲಿ ಅಪ್ಪು ಕಾಣ್ತಾರೆ. ಆ ಹೆಜ್ಜೆ.. ಆ ಗೆಜ್ಜೆ.. ಅದ್ಭುತ. ಅತ್ಯಮೋಘ.

The First Single Obbane Shiva Obbane Yuva From Yuva is Out Now

ಒಬ್ಬನೇ ಶಿವ ಒಬ್ಬನೇ ಯುವ ಎಂಬ ಸಾಲು, ಮೈ ಮರೆಸುತ್ತೆ. ಮೈ ಕುಣಿಸುತ್ತೆ. ಅಪ್ಪು ಹೆಸರನ್ನ ಉಳಿಸಬೇಕು, ಕಾಪಾಡಬೇಕು ಎಂದು ಯುವ ಇಲ್ಲಿ ಹೆಜ್ಜೆ ಹಾಕಿದ್ದಾರೆ. ಎಲ್ಲರನ್ನೂ ಹುಚ್ಚೆದ್ದು ಕುಣಿಸುತ್ತಿದ್ದಾರೆ. ಅದಕ್ಕೆ ರಾತ್ರಿ ಹತ್ತರ ಆಸು ಪಾಸಿನಲ್ಲಿ ಯೂಟ್ಯೂಬ್ ಗೆ ಬಂದು ಈ ಹಾಡನ್ನ ನೋಡಿದ 193,370 ಜನ ಸಾಕ್ಷಿ

ಇನ್ನೂ ವಿಶೇಷ ಅಂದರೆ ಚಾಮರಾಜನಗರದಲ್ಲಿಯೇ ಅಣ್ಣಾವ್ರು ಹುಟ್ಟಿದ್ದು, ಬೆಳೆದಿದ್ದು, ಕನ್ನಡವನ್ನ ಬೆಳೆಸಿದ್ದು. ಯುವ ರೂಪದಲ್ಲಿ ಯುವರಾಜ್ ಕುಮಾರ್ ಇಲ್ಲಿಂದನೇ ಮೊದಲ ಹೆಜ್ಜೆ ಇಟ್ಟಿದ್ದಾರೆ. ಚಾಮರಾಜನಗರ ಜನತೆಯ ಜೊತೆ ಅಖಂಡ ಕರುನಾಡಿನ ಜನರ ಮನ ತಣಿಸಿದ್ದಾರೆ.

ಮಿಕ್ಕಂತೆ ಅಚಾನಕ್ ಆಗಿ ಯುವ ಹೀರೋ ಆಗಿದ್ದು ಎಂಬ ಅಭಿಪ್ರಾಯ ವ್ಯಕ್ತಪಡಿಸೋರಿಗೂ ಈ ಹಾಡು ಉತ್ತರ. ಯಾಕೆಂದರೆ ಯುವ ರಾತ್ರೋ ರಾತ್ರಿ ಸ್ಟಾರ್ ಆದವರಲ್ಲ. ಅದಕ್ಕೆ ಬೇಕಾದ ಸಕಲ ತಯಾರಿಯನ್ನ ಮಾಡಿಕೊಂಡೆ ಅಖಾಡಕ್ಕೆ ಧುಮುಕಿದವರು ಯುವರಾಜ್ ಕುಮಾರ್. ಇದಕ್ಕೆ ಸಾಕ್ಷಿಯೇ ಯುವ ಚಿತ್ರದ ಈ ಹಾಡು.

ಇನ್ನೂ ರಾಜ್ ಕುಟುಂಬದ ಯಾರೇ ಆಗಲಿ, ಚಿತ್ರರಂಗಕ್ಕೆ ಬರುವ ಮುನ್ನ ಏಕಾಏಕಿ ಬಂದವರಲ್ಲ. ಸಿನಿಮಾದಲ್ಲಿ ನಟಿಸುವುದು ಅಂತಾ ನಿರ್ಧಾರವಾಗುತ್ತಿದ್ದಂತೇ, ಅದಕ್ಕೆ ಬೇಕಿರುವ ಪೂರ್ವಸಿದ್ಧತೆ, ತಾಲೀಮುಗಳನ್ನು ನಡೆಸಿಯೇ ಬಂದವರು. ಈಗ ಯುವರಾಜ್ ಕುಮಾರ್ ಸಹ ನಟನೆ, ಡ್ಯಾನ್ಸು, ಸಾಹಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ತರಬೇತಿ ಪಡೆದಿದ್ದಾರೆ. ಇನ್ನೂ ನಂಬಿಕೆ ಬಾರದೇ ಇದ್ದರೆ ಈ ಹಾಡನ್ನ ದಿಟ್ಟಿಸಿ ನೋಡಬಹುದು.

The First Single Obbane Shiva Obbane Yuva From Yuva is Out Now

ಉಳಿದಂತೆ ಹಾಡನ್ನ ಬರೆದಿರೋದು ಚಿತ್ರದ ಸೃಷ್ಟಿಕರ್ತ ಸಂತೋಷ್ ಆನಂದ್ ರಾಮ್. ಕೇವಲ ನಿರ್ದೇಶನ ಅಷ್ಟೇ ಅಲ್ಲ ನಕಾಶ್ ಜೊತೆ ಈ ಹಾಡಿಗೆ ನಿರ್ದೇಶಕರು ಖುದ್ದು ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.ಹೊಂಬಾಳೆ ಈ ಚಿತ್ರದ ನಿರ್ಮಾಣ ಸಂಸ್ಥೆ ಅನ್ನುವುದು ನಿಮಗೆ ಈಗಾಗಲೇ ಗೊತ್ತಿರಬೇಕು.

ಸದ್ಯ ರಿಲೀಸ್ ಆಗಿರೋ ಯುವ ಕೇವಲ ಯುವ ಸಮೂಹವನ್ನಷ್ಟೇ ಅಲ್ಲ ಎಲ್ಲರನ್ನೂ ಸೆಳೆಯುತ್ತಿದೆ. ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಯುವನ ಖದರ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೇನು ಇದೇ ಮಾ.29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ನೀವೆಲ್ಲ ಹರಸಿ ಹಾರೈಸುತ್ತೀರಾ ಎನ್ನುವ ನಿರೀಕ್ಷೆ ದೊಡ್ಮನೆಗೆ ಇದೆ. ಅಪ್ಪು ಆಶಿರ್ವಾದ ಯುವ ಮೇಲಿದೆ.

More from Filmibeat

English summary
First single of YUVA Has Been Relesed In Chamraj Nagar. Ajneesh Loknath Musical Film Has Santosh Anand Ram Lyrics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X