'ಕಣ್ಮಣಿ' ಹಿಂದೆ 'ರಾಜು' ಜೇಮ್ಸ್ ಬಾಂಡ್, ಗುರುನಂದನ್ ಚಿತ್ರದ ಹೊಸ ಹಾಡು ಹೇಗಿದೆ. ?

ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಅನೇಕರ ಹೃದಯವನ್ನು ಗೆಲ್ಲುವುದಲ್ಲದೇ, ಚಿತ್ರರಂಗದಲ್ಲಿ ಕೂಡ ಹೆಸರು ಗಳಿಸಿದವರು ಗುರುನಂದನ್. ಆ ನಂತರ ಸ್ಮೈಲ್ ಪ್ಲೀಸ್, ರಾಜು ಕನ್ನಡ ಮೀಡಿಯಂ ಮತ್ತು ಮಿಸ್ಸಿಂಗ್ ಬಾಯ್ ಚಿತ್ರಗಳಲ್ಲಿ ಕಾಣಿಸಿಕೊಂಡ ಗುರುನಂದನ್ ಸದ್ಯ ಐದು ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ರಾಜು ಜೇಮ್ಸ್ ಬಾಂಡ್ ಚಿತ್ರದ ಮೂಲಕ ನಿಮ್ಮೆಲ್ಲರ ಮನತಣಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ ಈ ಚಿತ್ರ ಇದೇ ಫೆಬ್ರವರು 14ರಂದು ಬಿಡುಗಡೆಯಾಗಲಿದ್ದು ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿರುವ ಚಿತ್ರತಂಡ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ.

ಅನೂಪ್ ಸೀಳೀನ್ ಸಂಗೀತ ನಿರ್ದೇಶನ ಇರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಈ ಸುಂದರ ಸುಮಧುರ ಹಾಡನ್ನು ಜ್ಯೋತಿ ವ್ಯಾಸರಾಜ್ ಬರೆದಿದ್ದಾರೆ. ಮುರಳಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸದ್ಯಕ್ಕೆ ಜನವರಿ ಹನ್ನೊಂದರಂದು ಬಿಡುಗಡೆಯಾದ ಈ ಹಾಡಿಗೆ ಯೂಟ್ಯೂಬ್‌ನಲ್ಲಿ ವ್ಯಾಪಕ ಪ್ರಶಂಸೆ ಸಿಗುತ್ತಿದೆ. ಅನೇಕರ ಹೃದಯವನ್ನು ಈ ಹಾಡು ಗೆಲ್ಲುತ್ತಿದೆ. ಇದೆಲ್ಲದಕ್ಕೆ ಪುರಾವೆ ಎಂಬಂತೆ ಈ ಹಾಡು ಇಲ್ಲಿಯವರೆಗೆ ಅಂದರೆ ಈ ಎರಡು ದಿನದಲ್ಲಿ 251,676 ವೀಕ್ಷಣೆಯನ್ನು ಕಂಡಿದೆ.

The song Kanmani from the film Raju James Bond has been released

ಅಂದ್ಹಾಗೇ ರಾಜು ಜೇಮ್ಸ್ ಬಾಂಡ್ ಮತ್ತು ಡಾ.ರಾಜ್ ಕುಮಾರ್ ಅಭಿನಯದಲ್ಲಿ ಬಂದ ಬಾಂಡ್ ಸರಣಿಗಳಿಗೆ ಸಂಬಂಧ ಇಲ್ಲ. ಆ ಚಿತ್ರಗಳೇ ಬೇರೆ. ಈ ಚಿತ್ರವೇ ಬೇರೆ ಎನ್ನುವ ನಿರ್ದೇಶಕ ದೀಪಕ್ ಮಧುವನಹಳ್ಳಿ ಚಿತ್ರದ ಕಥೆ ಗುಟ್ಟನ್ನು ರಟ್ಟು ಮಾಡಲಿಲ್ಲವಾದರೂ ಬಿಡುಗಡೆಯಾದ ಕಣ್ಮಣಿ ಹಾಡಿನ ಕುರಿತು ಮಾತನಾಡಿದರು. ಹಾಡು ಇಷ್ಟೊಂದು ಸುಂದರವಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೆ ಧನ್ಯವಾದ ಹೇಳಿದರು. ಲಂಡನ್‌ನ ಸುಂದರ ಪರಿಸರದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.

ಇನ್ನು ಹಾಗೇ ನೋಡಿದರೆ ರಾಜು ಜೇಮ್ಸ್ ಬಾಂಡ್ ಕಳೆದ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಆ ಕಡೆ ಯುಐ ಮತ್ತೊಂದು ಕಡೆ ಮ್ಯಾಕ್ಸ್ ಇದ್ದ ಕಾರಣ ನಮ್ಮ ಚಿತ್ರ ಮುಂದೂಡಲಾಯಿತು ಎನ್ನುವ ಗುರುನಂದನ್ ಹಾಡಿನಲ್ಲಿ ನಾನೇನಾದರೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದರೆ ಅದಕ್ಕೆ ಮುರಳಿ ಮಾಸ್ಟರ್ ಅವರೇ ಕಾರಣವೆಂದರು.

ಮೃದುಲ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕೇವಲ ಹಾಡು ಮಾತ್ರವಲ್ಲ ಚಿತ್ರ ಕೂಡ ಪ್ರೇಕ್ಷಕರ ಹೃದಯ ಗೆಲ್ಲುತ್ತೆ ಎನ್ನುವ ಭರವಸೆ ಇವರದ್ದು. ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರು ಚಿತ್ರವನ್ನು ನಿರ್ಮಾಣ ಮಾಡಿದ್ದು ಸತ್ಯ ಪಿಕ್ಚರ್ಸ್‌ನ ಸತ್ಯಪ್ರಕಾಶ್ ವಿತರಕರಾಗಿ ಇವರಿಗೆ ಸಾಥ್ ನೀಡುತ್ತಿದ್ದಾರೆ. ಚಿತ್ರದ ವಿತರಣೆಯನ್ನು ಕರುನಾಡಿನೆಲ್ಲೆಡೆ ಮಾಡುತ್ತಿದ್ದಾರೆ. ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇನ್ನು ರಾಜು ಜೇಮ್ಸ್ ಬಾಂಡ್ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಹಿಂದಿಯಲ್ಲಿ ಕೂಡ ಬಿಡುಗಡೆಯಾಗುತ್ತಿದೆ. ಅಲ್ಲಿಯೂ ಕೂಡ ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿರುವುದು ವಿಶೇಷ. ನೇಪಾಳಿ ಭಾಷೆಗೆ ಕೂಡ ಚಿತ್ರದ ಹಕ್ಕು ಮಾರಾಟವಾಗಿರುವುದು ಚಿತ್ರತಂಡದ ಖುಷಿ ಹೆಚ್ಚಾಗಲು ಮತ್ತೊಂದು ಕಾರಣ. ಸದ್ಯ ಚಿತ್ರದ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಮುಂಬರುವ ದಿನಗಳಲ್ಲಿ ಚಿತ್ರದ ಇನ್ನುಳಿದ ವಿವರಗಳನ್ನು ಹಂಚಿಕೊಳ್ಳಲಿದೆ. ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ.

More from Filmibeat

Read more about: gurunandan song filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X