ಸಿಂಹ ಕೇಸರಿ ''ಭೈರತಿ ರಣಗಲ್'' ಮೊದಲ ಹಾಡು ಬಿಡುಗಡೆ, ಬೆಂಕಿ ಎಂದ ಶಿವ ಸೈನ್ಯ...!

ಕೆಲ ಸಿನಿಮಾಗಳ ಪಾತ್ರಗಳೇ ಹಾಗೆ. ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡುತ್ತಾ ಮನಸೊಳಗೇ ಕೂತು ಬಿಡುತ್ತವೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಪಾತ್ರವೂ ಅಂಥಾದ್ದೇ. ಒಂದು ಮಾಸಲು ಲುಂಗಿ, ಕಪ್ಪು ಬಣ್ಣದ ಮುದುರು ಮುದುರಾದ ಅಂಗಿ ಮತ್ತು ತಣ್ಣಗೆ ಅಬ್ಬರಿಸೋ ಶೈಲಿ ... ಇಷ್ಟೆಲ್ಲ ಗುಣಲಕ್ಷಣಗಳೊಂದಿಗೆ ಪ್ರಸಿದ್ಧಿಯಾಗಿದ್ದ ಭೈರತಿ ರಣಗಲ್ ಈಗ ಚಿತ್ರರೂಪದಲ್ಲಿ ಬರುತ್ತಿರುವುದು ನಿಮಗೆ ಗೊತ್ತು. ಸದ್ಯದ ಸಮಾಚಾರ ಏನಂದರೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

ಶಿವಣ್ಣ ಅಭಿಮಾನಿಗಳನ್ನು ಹುಚ್ಚೆಬ್ಬಿಸುವ ಈ ಹಾಡನ್ನು ಕಿನ್ನಾಳ್ ರಾಜ್ ಬರೆದಿದ್ದಾರೆ. ಈ ಹಿಂದೆ ಕೆ.ಜಿ.ಎಫ್ ಚಿತ್ರದ ''ಗರ್ಭದಿ ನನ್ನಿರಿಸಿ.. ಊರಲ್ಲಿ ನಡೆಯುತಿರೆ..ತೇರಲಿ ಕುಳಿತಂತೆ, ಅಮ್ಮಾ. ಹಾಡನ್ನು ಇವರೇ ಬರೆದಿದ್ದ ಕಿನ್ನಾಳ್ ರಾಜ್ ಈ ಬಾರಿ ಬಡವರ ಬದುಕನು ಕಾಯಲು ನಿಂತ ಸಿಂಹ ಕೇಸರಿ ಎಂಬ ಸಾಲುಗಳ ಮೂಲಕ ಭೈರತಿ ರಣಗಲ್ ಪಾತ್ರಕ್ಕೆ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಈ ಹಾಡಿಗೆ ಸಂತೋಷ್ ವೆಂಕಿ ತಮ್ಮ ಕಂಠವನ್ನು ಕುಣಿಸಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಹಾಡಿಗಿದೆ.

The title song of Bhairathi Ranagal starring Dr Shiva Rajkumar has been released

ಇನ್ನೂ.. ಮಫ್ತಿ ಚಿತ್ರದಲ್ಲಿ ಭೈರತಿ ರಣಗಲ್ ಅಂತಹ ನವೀನ ಪಾತ್ರಗಳನ್ನು ಸೃಷ್ಟಿಸಿ ಸೂಪರ್ ಹಿಟ್ ಅನ್ನಿಸಿಕೊಂಡ ನರ್ತನ್ ಈ ಬಾರಿ ಭೈರತಿ ರಣಗಲ್ ಗ್ಯಾಂಗಸ್ಟರ್ ಆಗಿದ್ಹೇಗೆ ಎಂಬ ಕಥೆಯನ್ನು ಹೇಳಲಿದ್ದಾರೆ. ಇದಕ್ಕೆ ಪೂರಕವಾಗಿ ಮೂಡಿ ಬಂದ ಈ ಹಾಡು ಈಗ ಯೂಟ್ಯೂಬ್‌ನಲ್ಲಿ ವ್ಯಾಪಕ ಸದ್ದನ್ನೂ ಮಾಡುತ್ತಿದೆ. ''ಇತಿಹಾಸವೇ ನಿಬ್ಬೆರಿಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು" ಎಂಬ ಘೋಷವಾಕ್ಯ ಕೂಡ ಮೊಳಗುತ್ತಿದೆ. 07ನೇ ಸ್ಥಾನದಲ್ಲಿ ಹಾಡು ಟ್ರೆಂಡಿಂಗ್‌ನಲ್ಲಿದೆ.

ಇನ್ನೂ ಹಾಗೇ ನೋಡಿದರೆ, ಎಲ್ಲವೂ ಅಂದುಕೊಂಡತೆ ಆಗಿದ್ದರೆ ಇನ್ನೂ ನಾಲ್ಕು ದಿನದ ನಂತರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ, ಭೈರತಿ ರಣಗಲ್ ಬೆಳ್ಳಿತೆರೆಯ ಮೇಲೆ ಧಗಧಗಿಸಬೇಕಿತ್ತು. ಆದರೆ, ಚಿತ್ರದ ಚಿತ್ರೀಕರಣ ಅಂದುಕೊಂಡ ಸಮಯಕ್ಕೆ ಮುಗಿಯಲಿಲ್ಲ. ಹೀಗಾಗಿಯೇ ಚಿತ್ರದ ಬಿಡುಗಡೆಯನ್ನು ಮುಂದೂಡಿದ ಚಿತ್ರತಂಡ ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ತೆರೆಗೆ ತರಲು ಮುಂದಾಗಿದೆ. ಈಗ ಚಿತ್ರದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರದ ಅಂಗಳಕ್ಕೆ ಕೂಡ ಧುಮುಕಿದೆ.

the-title-song-of-bhairathi-ranagal-starring-dr-shiva-rajkumar-has-been-released

ಉಳಿದಂತೆ ಶಿವಣ್ಣಗೆ ಇಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಜೊತೆಯಾಗಿದ್ದಾರೆ. ನವೀನ್ ಕುಮಾರ್ ಚಿತ್ರದ ಛಾಯಾಗ್ರಹಣದ ಜವಾಬ್ಧಾರಿಯನ್ನೂ ಪೂರೈಸಿದ್ದಾರೆ. ದಿಲೀಪ್ ಸುಬ್ರಹ್ಮಣ್ಯ ಮತ್ತು ಚೇತನ್ ಡಿಸೋಜಾ ಸಾಹಸ ನಿರ್ದೇಶನ ಇರುವ ಚಿತ್ರಕ್ಕೆ ಗುಣ ಅವರ ಕಲಾ ನಿರ್ದೇಶನ ಇದೆ. ಇನ್ನೂ ಗೀತಾ ಶಿವರಾಜ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಅಂದ್ಹಾಗೇ ಈ ಹಿಂದೆ ಭೈರತಿ ರಣಗಲ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗಿತ್ತು. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಪ್ರತೈಕವಾಗಿ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಕೇವಲ ಕನ್ನಡದಲ್ಲಿ ಮಾತ್ರ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದು, ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಭೈರತಿ ರಣಗಲ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಾ ಇಲ್ಲವಾ ಅನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

More from Filmibeat

Read more about: shivanna bhairathi ranagal music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X