ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಿರ್ದೇಶಕ ಪ್ರೇಮ್ ಹೇಳಿದಂತೆ ಬಹುನಿರೀಕ್ಷೆಯ ಮೊದಲ ಹಾಡನ್ನ ಅಧಿಕೃತವಾಗಿ ರಿಲೀಸ್ ಮಾಡಿದ್ದಾರೆ.
ಆನಂದ್ ಆಡಿಯೋ ಸಂಸ್ಥೆ 'ದಿ ವಿಲನ್' ಚಿತ್ರದ ಹಾಡುಗಳನ್ನ ಖರೀದಿ ಮಾಡಿದ್ದು, ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್ ನಲ್ಲಿ ಮೊದಲ ಸಾಂಗ್ ರಿಲೀಸ್ ಮಾಡಿದ್ದಾರೆ.
''I AM Villian....'' ಎಂದು ಶುರುವಾಗುವ ಈ ಹಾಡಿಗೆ ಸ್ವತಃ ಜೋಗಿ ಪ್ರೇಮ್ ಅವರೇ ಸಾಹಿತ್ಯ ಬರೆದಿದ್ದು, ಶಂಕರ್ ಮಹಾದೇವನ್ ಹಾಡಿದ್ದಾರೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ವೀಕ್ಷಕರು ಹಾಡನ್ನ ನೋಡಿದ್ದಾರೆ.

ಈ ಹಾಡು ಯಾವ ಸಂದರ್ಭದ್ದು ಅಥವಾ ಈ ಹಾಡಿನಲ್ಲಿ ಶಿವಣ್ಣ ಮತ್ತು ಸುದೀಪ್ ಇಬ್ಬರು ಇರ್ತಾರೆ ಎಂಬುದರ ಬಗ್ಗೆ ಸುಳಿವು ನೀಡಿಲ್ಲ. ಆದ್ರೆ, ಹಾಡಿನ ಜೊತೆ ಚಿತ್ರದ ಮೇಕಿಂಗ್ ಝಲಕ್ ಕೂಡ ರಿಲೀಸ್ ಮಾಡಿದ್ದು, ಸುದೀಪ್ ಮತ್ತು ಶಿವಣ್ಣ ಇಬ್ಬರ ದೃಶ್ಯಗಳು ಗಮನ ಸೆಳೆಯುತ್ತಿದೆ.
'ದಿ ವಿಲನ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ದಿ ವಿಲನ್' ಸಿನಿಮಾ ಇದೇ ವರ್ಷ ಬರುವ ಸಾಧ್ಯತೆ ಇದೆ. ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











