For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಅಂಗಳದಲ್ಲೀಗ ಈ ಮೂರು ಹಾಡುಗಳದ್ದೇ ಅಬ್ಬರ

  |

  ಮಾರ್ಚ್ 11, ಸ್ಯಾಂಡಲ್ ವುಡ್ ಪಾಲಿಗೆ ಸಂಗೀತ ದಿನ ಅಂದರೆ ತಪ್ಪಾಗಲ್ಲ. ಯಾಕಂದರೆ, ಟ್ರೈಲರ್, ಮೇಕಿಂಗ್ ಮೂಲಕ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಮೂರು ಚಿತ್ರದ ಮೂರು ಹಾಡುಗಳು ಒಂದೇ ದಿನ ರಿಲೀಸ್ ಆಗಿವೆ. ಈ ಮೂರು ಹಾಡುಗಳು ಈಗ ಸಂಗೀತ ಪ್ರಿಯರ ಹೃದಯದಲ್ಲಿ ಸದ್ದು ಮಾಡ್ತಿದೆ.

  ಯೋಗರಾಬ್ ಭಟ್ ನಿರ್ದೇಶನದ ಪಂಚತಂತ್ರ, ಹೇಮಂತ್ ರಾವ್ ನಿರ್ದೇಶನದ ಕವಲು ದಾರಿ ಮತ್ತು ಪ್ರೀತಂ ಗುಬ್ಬಿ ನಿರ್ದೇಶನದ 99 ಚಿತ್ರದಿಂದ ಒಂದೊಂದು ಹಾಡು ತೆರೆಕಂಡಿವೆ. ಕವಲು ದಾರಿ ಮತ್ತು 99 ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿರುವಾಗಲೇ ಎರಡನೇ ಹಾಡುಗಳನ್ನು ರಿಲೀಸ್ ಮಾಡಿದೆ. ಪಂಚತಂತ್ರ ಆಲ್ಬಂನ ನಾಲ್ಕನೇ ಹಾಡು ಇದಾಗಿದೆ.

  ಒಂದಕ್ಕಿಂತ ಮತ್ತೊಂದು ಹಾಡು ವಿಭಿನ್ನವಾಗಿವೆ. ಒಂದು ರೋಮ್ಯಾಂಟಿಕ್ ಹಾಡಾಗಿದ್ರೆ ಇನ್ನೆರಡು ಪ್ಯಾಥೋ ಹಾಡುಗಳು. ಅಷ್ಟಕ್ಕೂ, ಹೊಸದಾಗಿ ಬಂದ ಹಾಡುಗಳು ಯಾವುದು? ಈ ಹಾಡಿನ ವಿಶೇಷತೆ ಏನು? ಮುಂದೆ ಓದಿ.....

  'ಕವಲು ದಾರಿ'ಯಿಂದ ಬಂದ 'ಇದೇ ದಿನ...'

  'ಕವಲು ದಾರಿ'ಯಿಂದ ಬಂದ 'ಇದೇ ದಿನ...'

  ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಕವಲುದಾರಿ. ಈ ಸಿನಿಮಾದಿಂದ 'ಇದೆ ದಿನ..' ಎಂಬ ಹಾಡು ರಿಲೀಸ್ ಆಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ಸಿದ್ದಾಂತ್ ಸುಂದರ್ ಹಾಡಿದ್ದಾರೆ. ಯುವ ಪ್ರತಿಭೆ ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿನಲ್ಲಿ ನಟ ಅನಂತ್ ನಾಗ್ ಅವರ ಭಾವನಾತ್ಮಕ ಅಂಶ ಪ್ರೇಕ್ಷಕರ ಮನಮುಟ್ಟುವಂತಿದೆ. ಈಗಾಗಲೇ ಈ ಚಿತ್ರದಿಂದ ನಿಗೂಢ ಹಾಡು ರಿಲೀಸ್ ಆಗಿದೆ. ನಟ ರಿಷಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕವಲು ದಾರಿ ಹೇಮಂತ್ ರಾವ್ ನಿರ್ದೇಶಿಸಿದ್ದಾರೆ.

  ಗೋಲ್ಡನ್ ಸ್ಟಾರ್ ಗಣಿಯ '99' ಹಾಡು ಕೇಳಿ ಮನಸೋತ ಸುದೀಪ್ಗೋಲ್ಡನ್ ಸ್ಟಾರ್ ಗಣಿಯ '99' ಹಾಡು ಕೇಳಿ ಮನಸೋತ ಸುದೀಪ್

  99 ಚಿತ್ರದ ಎರಡನೇ ಹಾಡು

  99 ಚಿತ್ರದ ಎರಡನೇ ಹಾಡು

  '99' ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನ ಅಭಿನಯದ ಚಿತ್ರ. ಈ ಚಿತ್ರದಿಂದ 'ನವಿಲುಗರಿ....' ಎಂಬ ಹಾಡು ರಿಲೀಸ್ ಆಗಿದೆ. ಈ ಹಾಡನ್ನ ಮೆಲೋಡಿ ಕ್ವೀನ್ ಶ್ರೇಯಾ ಗೋಷಲ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿಗೆ ಕವಿರಾಜ್ ಸಾಹಿತ್ಯವಿದೆ. ಈಗಾಗಲೇ ಚಿತ್ರದ ಮೊದಲನೇ ಹಾಡು ಗಮನ ಸೆಳೆದಿದೆ.

  ಪಂಚ ಅಂಶಗಳ ಜೊತೆಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಭಟ್ಟರುಪಂಚ ಅಂಶಗಳ ಜೊತೆಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಭಟ್ಟರು

  ಮೋಡಿ ಮಾಡ್ತಿದೆ ಭಟ್ಟರ ಪಂಚತಂತ್ರ

  ಮೋಡಿ ಮಾಡ್ತಿದೆ ಭಟ್ಟರ ಪಂಚತಂತ್ರ

  ಪಂಚತಂತ್ರದ 'ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ...' ಹಾಡನ್ನ ಸಂಗೀತಪ್ರಿಯರು ಇನ್ನು ಗುನುಗುತ್ತಿದ್ದಾರೆ. ಅಷ್ಟರಲ್ಲೇ ಭಟ್ರು 'ಬ್ಯಾಡ ಹೋಗು ಅಂದ್ಬುಟ್ಟೆ ನಾನು ಸೀದ ಬಂದ್ಬುಟ್ಟೆ' ಎಂಬ ರ್ಯಾಪ್ ಮತ್ತು ಟಪ್ಪಾಂಗುಚ್ಚಿ ಸ್ಟೈಲ್ ನಲ್ಲಿರುವ ಹಾಡನ್ನು ರಿಲೀಸ್ ಮಾಡಿ ಮತ್ತಷ್ಟು ಜೋಶ್ ಹೆಚ್ಚಿಸಿದ್ದಾರೆ. ಇಂದಿನ ಯುವಕರ ನೆಚ್ಚಿನ ಸಾಹಿತಿಯಾಗಿರುವ ಯೋಗರಾಜ್ ಭಟ್ಟರ ಸಾಹಿತ್ಯ ಪಂಚತಂತ್ರ ಚಿತ್ರದಲ್ಲೂ ಮೋಡಿ ಮಾಡುತ್ತಿದೆ. ಈ ಚಿತ್ರದ ಮೂಲಕ ಮತ್ತೊಮ್ಮೆ ವಿ ಹರಿಕೃಷ್ಣ ಮತ್ತು ಭಟ್ಟರ ಜೋಡಿ ಕಮಾಲ್ ಮಾಡಿದೆ.

  ಮೂರು ಚಿತ್ರಗಳು ರಿಲೀಸ್ ಯಾವಾಗ ಗೊತ್ತಾ?

  ಮೂರು ಚಿತ್ರಗಳು ರಿಲೀಸ್ ಯಾವಾಗ ಗೊತ್ತಾ?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ 'ಕವಲು ದಾರಿ' ಏಪ್ರಿಲ್ 12ಕ್ಕೆ ತೆರೆಗೆ ಬರುತ್ತಿದೆ. ಪ್ರೀತಂ ಗುಬ್ಬಿ ನಿರ್ದೇಶನದ '99' ಸಿನಿಮಾ ಸಹ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ಇನ್ನೂ, ಭಟ್ಟರ ಪಂಚತಂತ್ರ ಮಾರ್ಚ್ 29ಕ್ಕೆ ರಿಲೀಸ್ ಆಗುತ್ತಿದೆ.

  English summary
  Yogaraj bhat directional panchatantra's fourth song, 99 movie's second song and kavaludaari movie's second song has released same day (march 11th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X