»   » ಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!

ಹುಚ್ಚ ವೆಂಕಟ್ ಅಭಿಮಾನಿಯಾಗಿ ರಾಗಿಣಿ ಹಾಕಿದ ಸ್ಟೆಪ್ ನೋಡ್ರಪ್ಪಾ..!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ರೇಜಿ ಹೀರೋಯಿನ್ ರಾಗಿಣಿ ದ್ವಿವೇದಿ ಹಾಗೂ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ನಡುವೆ ಐಟಂ ಸಾಂಗ್ಸ್ ವಿಚಾರದಲ್ಲಿ ಯುದ್ಧ ಆಗಿರುವುದು ನೆನಪಿದೆ. ಆದ್ರೀಗ, ಅದೇ ವೆಂಕಟ್ ಅವರ ಫ್ಯಾನ್ ಆಗಿ ರಾಗಿಣಿ ದ್ವಿವೇದಿ ಬೋಲ್ಡ್ ಸ್ಟೆಪ್ಸ್ ಹಾಕಿದ್ದಾರೆ.

ಹುಚ್ಚ ವೆಂಕಟ್ ಅವರು ಮೊದಲಿನಿಂದಲೂ ಐಟಂ ಸಾಂಗ್ ಬ್ಯಾನ್ ಆಗ್ಬೇಕು ಎಂದು ವಾದಿಸುತ್ತಲೇ ಬಂದಿದ್ದಾರೆ. ಅದೇ ಸಾಲುಗಳನ್ನಿಟ್ಟು ಮಾಡಿರುವ ಹಾಡಿಗೆ ತುಪ್ಪದ ಹುಡುಗಿ ಮೈ ಚಳಿ ಬಿಟ್ಟು ಕುಣಿದಿದ್ದಾರೆ.

[ಹುಚ್ಚ ವೆಂಕಟ್ ಹೊಸ ಕಿರಿಕ್: ಫುಲ್ ರಾಂಗ್ ಆದ ರಾಗಿಣಿ]

Tiger Movie Item Song Teaser Release

ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿ ಬಂದಿರುವ ''ಐಟಂ ಸಾಂಗು..... ಆಗ್ಬೇಕು ಬ್ಯಾನು....ಯಾಕಂದ್ರೆ ನಾನು ವೆಂಕಣ್ಣನ ಫ್ಯಾನು......'' ಹಾಡು ಈಗ ಕನ್ನಡದಲ್ಲಿ ಟ್ರೆಂಡ್ ಆಗಿದೆ.

ಅಂದ್ಹಾಗೆ, ಈ ಹಾಡು ನಂದ ಕಿಶೋರ್ ನಿರ್ದೇಶನದ 'ಟೈಗರ್' ಚಿತ್ರದ್ದು. ಪ್ರದೀಪ್, ಮಧುರೀಮಾ ಅಭಿನಯದ ಈ ಚಿತ್ರ ಜೂನ್ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಗಿಣಿ ದ್ವಿವೇದಿ ಅವರ ವೆಂಕಟ್ ಫ್ಯಾನ್ ಆಗಿ ಕುಣಿದಿರುವ ಐಟಂ ಸಾಂಗ್ ಇಲ್ಲಿದೆ ನೋಡಿ......

English summary
Kannada Actor Pradeep Starrer Tiger Movie Item Song Teaser Released. The Movie Directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada