Don't Miss!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಹಾಡಿದ್ರೆ ಆ ಸಾಂಗ್ ಹಿಟ್: ಇನ್ನೊಂದು ಹೊಸ ಹಾಡು ಕೇಳಿ.!
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ಹಿಟ್ ಆಗೋದು ಕಾಮನ್. ಅದೇ ತರ ಪುನೀತ್ ಹಾಡಿದ್ರೆ ಆ ಸಾಂಗ್ ಕೂಡ ಸೂಪರ್ ಹಿಟ್ ಆಗುತ್ತಾ ಎನ್ನೋದು ಟ್ರೆಂಡ್. ಹೌದು, ಅಪ್ಪು ಧ್ವನಿಯಲ್ಲಿ ಹಾಡೊಂದು ಬಂದ್ರೆ, ಆ ಹಾಡು ಸೂಪರ್ ಹಿಟ್ ಆಗುತ್ತೆ ಎಂಬುದು ಪಕ್ಕಾ.
ಈಗಾಗಲೇ ಸುಮಾರು 50ಕ್ಕೂ ಅಧಿಕ ಹಾಡುಗಳನ್ನ ಹಾಡಿರುವ ಅಪ್ಪು ಬತ್ತಳಿಕೆಯಿಂದ ಇನ್ನೊಂದು ಹೊಸ ಸಾಂಗ್ ಹೊರಬಂದಿದೆ. ದುನಿಯಾ ವಿಜಯ್ ಅಭಿನಯದ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಟೈಟಲ್ ಹಾಡಿಗೆ ಪುನೀತ್ ಧ್ವನಿಯಾಗಿದ್ದು, ಈ ಹಾಡು ಈಗ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದೆ.
ಪುನೀತ್ ಹಾಗೂ ದುನಿಯಾ ವಿಜಿ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದರು. ಅಪ್ಪು ಇದೇ ಮೊದಲ ಬಾರಿಗೆ ವಿಜಿ ಅವರ ಸಿನಿಮಾ ಹಾಡನ್ನ ಹಾಡಿದ್ದಾರೆ. 'ಜಾನಿ' ಚಿತ್ರದಲ್ಲಿ ಟೈಟಲ್ ಹಾಡು ಹಿಟ್ ಆದಂತೇ, ಈ ಚಿತ್ರದ ಟೈಟಲ್ ಹಾಡು ಕೂಡ ಹಿಟ್ ಆಗುವ ಎಲ್ಲ ಲಕ್ಷಣವೂ ಇದೆ.
ದುನಿಯಾ ವಿಜಿಗೆ ಸಾಥ್ ನೀಡಿದ ಪವರ್ ಸ್ಟಾರ್
''ಅಂಜೋದಿಲ್ಲ ಗಿಂಜೋದಲ್ಲಿ ಮುಖ ಮೂತಿ ಮುಕಬಿಲ್ಲಾ' ಎಂದು ಆರಂಭವಾಗುವ ಈ ಹಾಡಿಗೆ 'ಕಿರಿಕ್ ಪಾರ್ಟಿ' ಖ್ಯಾತಿಯ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ನೀಡಿದ್ದಾರೆ. ಕಲರ್ ಸೆಟ್ ನಲ್ಲಿ ಈ ಟೈಟಲ್ ಹಾಡನ್ನ ಚಿತ್ರೀಕರಿಸಿದ್ದು, ಅಷ್ಟೇ ಕಲರ್ ಫುಲ್ಲಾಗಿ ಮೂಡಿ ಬಂದಿದೆ.
'ಹಳೆ ಪದ್ಮಾವತಿ'ಯನ್ನ ಹಿಂದಿಕ್ಕಲು ಬಂದ 'ಹೊಸ ಪದ್ಮಾವತಿ'
ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದು, ದುನಿಯಾ ವಿಜಯ್, ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಈಗ ಆಡಿಯೋ ಅಬ್ಬರ ಮಾಡುತ್ತಿದೆ.