KGF 2 Toofan Song: ತೂಫಾನ್ ರೂಪದಲ್ಲಿ ಬಂದ ರಾಕಿ ಭಾಯ್ ಯಶ್!

ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಅಬ್ಬರ ಶುರುವಾಗೋಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿದೆ. ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ. ಈ ದಿನಕ್ಕಾಗಿ ರಾಕಿ ಭಾಯ್ ಅಭಿಮಾನಿಗಳು ಕಾದು ಕುಳಿತಿದ್ದರು. ಇನ್ನು ಸಿನಿಮಾ ರಿಲೀಸ್‌ಗೆ ಹತ್ತಿರ ಆಗುತ್ತಿದ್ದ ಹಾಗೆ ಸಿನಿಮಾ ಪ್ರಚಾರ ಕಾರ್ಯಗಳು ಜೋರಾಗಿ ಶುರುವಾಗಲಿವೆ.

ಈಗ 'ಕೆಜಿಎಫ್' ಕಡೆಯಿಂದ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಸಿನಿಮಾಗಾಗಿ ಕಾಯುತ್ತ ಇರುವವರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಲು ಸಿನಿಮಾ ತಂಡ ಈಗ ಚಿತ್ರದ ಹೊಸ ಹಾಡನ್ನು ರಿಲೀಸ್ ಮಾಡಿದೆ. ಟೀಸರ್ ನಂತರ ಬಂದ ಈ ಹಾಡು ಸಂಚಲನ ಮೂಡಿಸಿದೆ. ಟೈಟಲ್‌ಗೆ ತಕ್ಕ ಹಾಗೆ ತೂಫಾನ್ ಹಾಡು ಬಿರುಗಾಳಿ ಎಬ್ಬಿಸುತ್ತಿದೆ.

Recommended Video

KGF 2 | 'ತೂಫಾನ್' ಹಾಡಿನ ವಿಶೇಷತೆ ಏನೇನು ನೋಡಿ! | Yash

'ಕೆಜಿಎಫ್ 2' ಚಿತ್ರದ ಖದರ್ ಹೇಗೆ ಇರಲಿದೆ ಎನ್ನುವುದನ್ನು ಚಿತ್ರದ ಮೊದಲ ಹಾಡು ರಿವೀಲ್ ಮಾಡಿದೆ. ಈ ಹಾಡು ರಾಕಿ ಭಾಯ್ ಹವಾ ಚಿತ್ರದಲ್ಲಿ ಹೇಗೆ ಮುಂದುವರೆಲಿದೆ ಎನ್ನುವ ಬಗ್ಗೆ ಹೇಳುತ್ತಿದೆ. ರವಿ ಬಸ್ರೂರು ಸಂಗೀತ ಲಿರಿಕಲ್ ವಿಡಿಯೋಗೆ ಕಿಕ್ ಕೊಟ್ಟಿದೆ. ಹಾಗಿದ್ದರೆ ಹಾಡಿನಲ್ಲಿ ಏನೆಲ್ಲಾ ಅಡಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ

ತೂಫಾನ್ ಮುನ್ನುಗ್ಗೋ ಸಿಡಿಲ ಕಿಡಿ

'ಕೆಜಿಎಫ್ 2' ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ತೂಫಾನ್‌ ಹಾಡಿಗೆ ಸಾಹಿತ್ಯ ಮತ್ತು ಸಂಗೀತ ರವಿ ಬಸ್ರೂರು ಅವರದ್ದೇ ಆಗಿದೆ. ಹಾಡಿನ ಸಾಹಿತ್ಯ ಸಂಪೂರ್ಣವಾಗಿ ರಾಕಿ ಭಾಯ್ ಬಗ್ಗೆ ವರ್ಣನೆ ಮಾಡಿದೆ. ರಾಕಿ ಭಾಯ್ ಖದರ್ ಹೇಗೆ ಇರಲಿದೆ ಎನ್ನುವುದನ್ನು ಹೇಳಲಾಗಿದೆ. 'ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ ಸರ್ರ್... ಅಂತ ಸುಡುವ ಜ್ವಾಲಾಗ್ನಿ, ಕರ್ರ್... ಅಂತ ಕಡಿಯುವ ಕತ್ತಿಇವನು ಎನ್ನುವ ಸಾಲುಗಳು, ಈ ಚಿತ್ರದಲ್ಲಿ ರಾಕಿ ಭಾಯ್‌ ಎದುರು ನಿಲ್ಲುವ ಧೈರ್ಯ ಯಾರು ಮಾಡಲೇ ಬಾರದು ಎಂದು ಹೇಳುತ್ತಿವೆ.

ಡೈಲಾಗ್‌ನಿಂದಲೇ ಶುರುವಾಗುತ್ತೇ 'ತೂಫಾನ್'

ಈ ಹಾಡು ಬರಿಯ ಹಾಡಲ್ಲ. ಬದಲಿಗೆ ಒಂದು ಪುಟ್ಟ ಕಥೆ. ಧೈರ್ಯ ಇಲ್ಲದ ಬಡಪಾಯಿಗಳಿಗೆ ರಾಕಿ ಭಾಯ್ ಶಕ್ತಿಯಾಗಿ ನಿಂತ ಬಗ್ಗೆ ಕಥೆ ಹೇಳುವ ಹಾಡಿದು. ಹಾಗಾಗಿ ಹಾಡಿನ ಆರಂಭದಲ್ಲಿ ಒಂದಷ್ಟು ಡೈಲಾಗ್‌ಗಳು ಬರುತ್ತವೆ. 'ನಮಗೆ ಧೈರ್ಯ ಇರಲಿಲ್ಲ, ಶಕ್ತಿ ಇರಲಿಲ್ಲ, ನಂಬಿಕೆ ಇರಲಿಲ್ಲ, ಆದರೆ ತುಂಬಾ ವರ್ಷ ಆದ್ಮೇಲೆ ಸಾವನ್ನು ನಾವು ತುಳಿದೆವು. ಅವನು ಕತ್ತಿ ಬೀಸಿದ ರಭಸಕ್ಕೆ ಒಂದು ಗಾಳಿ ಹುಟ್ಟಿ ಕೊಳ್ತು. ಆ ಗಾಳಿ ನರಾಚಿಯಲ್ಲಿರುವ ಪ್ರತಿಯೊಬ್ಬರಿಗೂ ಉಸಿತು ಕೊಟ್ತು. ನಿಮಗೆ ಒಂದು ಸಲಹೆ ಕೊಡ್ತಿನಿ. ನೀವೂ ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ' ಎನ್ನುವ ಡೈಲಾಗ್‌ಗಳು ಇವೆ. ಇದು ಕೆಜಿಎಫ್ ಮೊದಲ ಭಾಗದಲ್ಲಿ ಏನಾಯ್ತು ಎನ್ನುವ ಕಥೆ.

ತೂಫಾನ್‌ನಲ್ಲಿ ರವಿ ಬಸ್ರೂರು ಸಂಗೀತ ಘರ್ಜನೆ!

ತೂಫಾನ್‌ನಲ್ಲಿ ರವಿ ಬಸ್ರೂರು ಸಂಗೀತ ಘರ್ಜನೆ!

ತೂಫಾನ್ ಲಿರಿಕಲ್ ಹಾಡು ಮಾತ್ರ ರಿಲೀಸ್ ಆಗಿದೆ. ಆದರೆ ಈ ಹಾಡಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿರೋದು ಸಂಗೀತ. ರವಿಬ್ರೂರು ಸಂಗೀತ ಘರ್ಜನೆ ಹಾಡಿನಲ್ಲಿ ಜೋರಾಗಿದೆ. ಇದು ಕೆಜಿಎಫ್ ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರೇಷನ್ ಆಗಿದೆ. ರಾಕಿ ಭಾಯ್ ಅಬ್ಬರದ ಬಗ್ಗೆ ಚಿತ್ರದ ಟ್ರೈಲರ್ ರಿಲೀಸ್ ಬಳಿಕ ಮತ್ತಷ್ಟು ರಿವೀಲ್ ಆಗಲಿದೆ. ಈ ಹಾಡಿನಲ್ಲಿ ನಟ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿಯ ಕೆಲವು ಫೋಟೊಗಳನ್ನು ಮಾತ್ರ ಅಳವಡಿಸಲಾಗಿದೆ.

ಹೇಗಿರಲಿದೆ ' ಕೆಜಿಎಫ್ 2' ಅಂತ್ಯ?

ಹೇಗಿರಲಿದೆ ' ಕೆಜಿಎಫ್ 2' ಅಂತ್ಯ?

ಇನ್ನು 'ಕೆಜಿಎಫ್ 2' ಚಿತ್ರಕ್ಕಿಂತಲೂ, ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಯಾಕೆಂದರೆ 'ಕೆಜಿಎಫ್ 3' ಬರುವುದು ಅನುಮಾನವೇ. ಹಾಗಾಗಿ ರಾಕಿ ಭಾಯ್ ಸಾಮ್ರಾಜ್ಯದ ಅಂತ್ಯ ಇದೆ ಸಿನಿಮಾದಲ್ಲಿ ಆಗಬೇಕು. ಹಾಗಾಗಿ ಕ್ಲೈಮ್ಯಾಕ್ಸ್ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹಬ್ಬಿವೆ. ಈಗಾಗಲೇ ಈ ಚಿತ್ರದಲ್ಲಿ ರಾಕಿಭಾಯ್ ಅಂತ್ಯ ಆಗುತ್ತೆ. ಅವನು ಸತ್ತು ಹೋಗುತ್ತಾನೆ ಎನ್ನುವ ಊಹಾ ಪೊಹಗಳು ಹಬ್ಬಿವೆ. ಆದರೆ ಅದಕ್ಕಾಗಿ ಸಿನಿಮಾ ತೆರೆಗೆ ಬರುವ ತನಕ ಕಾಯಲೇ ಬೇಕು.

More from Filmibeat

English summary
Toofan the first song of KGF Chapter 2 released on March 21, Here i the detail about song,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X