twitter
    For Quick Alerts
    ALLOW NOTIFICATIONS  
    For Daily Alerts

    'ಜೋಗಿ' ಪ್ರೇಮ್ ಹಾಡಿರುವ ಟಾಪ್ 10 ಹಾಡುಗಳು, ನಿಮಗೆ ಯಾವುದು ಇಷ್ಟ?

    |

    ಕನ್ನಡ ಚಿತ್ರರಂಗ ಯಶಸ್ವಿ ನಿರ್ದೇಶಕರ ಪಟ್ಟಿಯಲ್ಲಿ ಜೋಗಿ ಪ್ರೇಮ್ ಹೆಸರು ಮೊದಲ ಸಾಲಿನಲ್ಲೇ ಬರುತ್ತೆ. ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ, ಈ ಪ್ರೀತಿ ಯಾಕೆ ಭೂಮಿ ಮೇಲಿದೆ, ರಾಜ್, ಜೋಗಯ್ಯ, ದಿ ವಿಲನ್ ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿರುವ ಪ್ರೇಮ್, ಓರ್ವ ನಟ ಕೂಡ ಹೌದು.

    ನಿರ್ದೇಶನ, ನಟನೆ ಜೊತೆಗೆ ಹಾಡುಗಳನ್ನ ಕೂಡ ಬರೆದಿದ್ದಾರೆ. ಕೆಲವು ಹಾಡುಗಳನ್ನ ಅವರೇ ಹಾಡಿದ್ದಾರೆ. ಪ್ರೇಮ್ ಅವರು ಹಾಡಿರುವ ಬಹುತೇಕ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.

    ಪ್ರೇಮ್ ಬರ್ತ್ ಡೇ ಪಾರ್ಟಿಯಲ್ಲಿ ರಚಿತಾ ರಾಮ್ ಮಸ್ತ್ ಡ್ಯಾನ್ಸ್ಪ್ರೇಮ್ ಬರ್ತ್ ಡೇ ಪಾರ್ಟಿಯಲ್ಲಿ ರಚಿತಾ ರಾಮ್ ಮಸ್ತ್ ಡ್ಯಾನ್ಸ್

    ಅಂದ್ಹಾಗೆ, ಜೋಗಿ ಪ್ರೇಮ್ ಅವರಿಗಿಂದು ಹುಟ್ಟುಹಬ್ಬ. ಈ ವಿಶೇಷ ದಿನದಲ್ಲಿ ಪ್ರೇಮ್ ಅವರ ಕಂಠದಲ್ಲಿ ಮೂಡಿಬಂದಿರುವ ಟಾಪ್ 10 ಹಾಡುಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ....

    ಬ್ರಹ್ಮ ವಿಷ್ಣು ಶಿವ....

    ಬ್ರಹ್ಮ ವಿಷ್ಣು ಶಿವ....

    'ಎಕ್ಸ್ ಕ್ಯೂಸ್ ಮೀ' ಚಿತ್ರದ ಎಲ್ಲ ಹಾಡುಗಳಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ಆರ್ ಆರ್ ಪಟ್ನಾಯಕ್ ಸಂಗೀತ ನೀಡಿದ್ದರು. ಈ ಚಿತ್ರದ 'ಬ್ರಹ್ಮ ವಿಷ್ಣು ಶಿವ....' ಹಾಡನ್ನ ಸ್ವತಃ ಪ್ರೇಮ್ ಹಾಡಿದ್ದರು. ಪ್ರೇಮ್ ಹಾಡಿದ ಮೊದಲ ಚಿತ್ರಗೀತೆ ಇದೇ ಎನ್ನಲಾಗಿದೆ.

    ಬೇಡವೆನು ವರವನ್ನು....

    ಬೇಡವೆನು ವರವನ್ನು....

    ಪ್ರೇಮ್ ನಿರ್ದೇಶಿಸಿದ್ದ 'ಜೋಗಿ' ಸಿನಿಮಾ ಆಲ್ ಟೈಂ ಹಿಟ್ ಆಗಿರುವ ಚಿತ್ರ. ಮ್ಯೂಸಿಕಲ್ ಕೂಡ ಈ ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಗುರು ಕಿರಣ್ ಸಂಗೀತ ನೀಡಿದ್ದ ಈ ಚಿತ್ರದ ಎಲ್ಲ ಹಾಡುಗಳನ್ನು ಸ್ವತಃ ಪ್ರೇಮ್ ಬರೆದಿದ್ದರು. 'ಬೇಡವನು ವರವನ್ನು....' ಹಾಡನ್ನ ಪ್ರೇಮ್ ಹಾಡಿದ್ದರು.

    14 ವರ್ಷ ತುಂಬಿದ ಸಂಭ್ರಮದಲ್ಲಿ ಸೂಪರ್ ಹಿಟ್ 'ಜೋಗಿ' ಸಿನಿಮಾ14 ವರ್ಷ ತುಂಬಿದ ಸಂಭ್ರಮದಲ್ಲಿ ಸೂಪರ್ ಹಿಟ್ 'ಜೋಗಿ' ಸಿನಿಮಾ

    ಪ್ರೀತಿ ಯಾಕೆ ಈ ಭೂಮಿ ಮೇಲಿದೆ....

    ಪ್ರೀತಿ ಯಾಕೆ ಈ ಭೂಮಿ ಮೇಲಿದೆ....

    ಪ್ರೇಮ್ ನಿರ್ದೇಶಿಸಿ, ಮೊದಲ ಬಾರಿಗೆ ನಟಿಸಿದ 'ಪ್ರೀತಿ ಯಾಕೆ ಭೂಮಿ ಮೇಲಿದೆ' ಸಿನಿಮಾದಲ್ಲಿ ಶೀರ್ಷಿಕೆ ಹಾಡನ್ನ ಪ್ರೇಮ್ ಹಾಡಿದ್ದಾರೆ. ಈ ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ. ಆದರೆ, ಹಾಡುಗಳು ದೊಡ್ಡ ಹಿಟ್ ಆಯ್ತು. ಅದರಲ್ಲೂ 'ಪ್ರೀತಿ ಯಾಕೆ ಈ ಭೂಮಿ ಮೇಲಿದೆ...' ಗೀತೆ ಸೂಪರ್ ಹಿಟ್ ಎನಿಸಿಕೊಂಡಿತ್ತು.

    ರಾಜ ಹೇಳುವಾಗೆಲ್ಲ....

    ರಾಜ ಹೇಳುವಾಗೆಲ್ಲ....

    ಪುನೀತ್ ರಾಜ್ ಕುಮಾರ್ ನಟಿಸಿದ್ದ 'ರಾಜ್ ದಿ ಶೋ ಮ್ಯಾನ್' ಚಿತ್ರವೂ ಮ್ಯೂಸಿಕಲ್ ಆಗಿ ಹಿಟ್ ಆಯ್ತು. ವಿ ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಕವಿ ರಾಜ್ ಬರೆದಿದ್ದು 'ರಾಜ ಹೇಳುವಾಗೆಲ್ಲ....' ಹಾಡನ್ನ ಪ್ರೇಮ್ ಹಾಡಿದ್ದರು. ಈ ಹಾಡು ಸೂಪರ್ ಸಕ್ಸಸ್ ಕಂಡಿತ್ತು.

    ಸುದೀಪ್ ರ ಈ ಮಾತಿಗೆ ಪ್ರೇಮ್ ಹೃದಯ ತುಂಬಿ ಬಂದಿದೆಸುದೀಪ್ ರ ಈ ಮಾತಿಗೆ ಪ್ರೇಮ್ ಹೃದಯ ತುಂಬಿ ಬಂದಿದೆ

    ಓಡೋಲೆ.....

    ಓಡೋಲೆ.....

    ಜೋಗಿ ಪ್ರೇಮ್ ನಿರ್ದೇಶಿಸಿ, ಶಿವರಾಜ್ ಕುಮಾರ್ ನಟಿಸಿರುವ 'ಜೋಗಯ್ಯ' ಸಿನಿಮಾದಲ್ಲೂ ಒಂದು ಹಾಡು ಹಾಡಿದ್ದಾರೆ ಪ್ರೇಮ್. ಜೋಗಯ್ಯ ಸಿನಿಮಾದ 'ಓಡೋಲೆ...' ಹಾಡನ್ನ ಪ್ರೇಮ್ ಹಾಡಿದ್ದರು.

    ಡವ ಡವ ಅಂತ....

    ಡವ ಡವ ಅಂತ....

    ರಾಜ್ ನಿರ್ದೇಶನದ 'ಜಟಾಯು' ಸಿನಿಮಾದಲ್ಲೂ ಪ್ರೇಮ್ ಒಂದು ಹಾಡು ಹಾಡಿದ್ದಾರೆ. ಕವಿರಾಜ್ ಸಾಹಿತ್ಯ ಬರೆದಿದ್ದ 'ಡವ ಡವ ಅಂತ...' ಹಾಡು ಪ್ರೇಮ್ ಕಂಠದಲ್ಲಿ ಮೂಡಿಬಂದಿತ್ತು. ಈ ಹಾಡು ಹಿಟ್ ಆಗಿತ್ತು.

    ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾ

    ಸೇಸಮ್ಮಾ ಸೇಸಮ್ಮಾ...

    ಸೇಸಮ್ಮಾ ಸೇಸಮ್ಮಾ...

    ಡಿಕೆ ಸಿನಿಮಾದಲ್ಲಿರುವ 'ಸೇಸಮ್ಮಾ ಸೇಸಮ್ಮಾ.....' ಹಾಡನ್ನು ಪ್ರೇಮ್ ಅವರೇ ಹಾಡಿದ್ದರು. ಸ್ವತಃ ಪ್ರೇಮ್ ಸಾಹಿತ್ಯ ಬರೆದಿದ್ದರು. ಈ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದರು. ಅರ್ಜುನ್ ಜನ್ಯ ಸಂಗೀತ ಇತ್ತು.

    ವಿಡಿಯೋ : 'ಜೋಗಿ' ಪ್ರೇಮ್ ಗಾಯನದ ತಾಯಿಯ ಹೊಸ ಹಾಡು ಕೇಳಿವಿಡಿಯೋ : 'ಜೋಗಿ' ಪ್ರೇಮ್ ಗಾಯನದ ತಾಯಿಯ ಹೊಸ ಹಾಡು ಕೇಳಿ

    ಬಂದ ಬಂದ ಡಿಕೆ ಸಾಹೇಬ

    ಬಂದ ಬಂದ ಡಿಕೆ ಸಾಹೇಬ

    'ಡಿಕೆ' ಚಿತ್ರದಲ್ಲಿ ಇನ್ನೊಂದು ಸೂಪರ್ ಹಿಟ್ ಗೀತೆ 'ಬಂದ ಬಂದ ನೋಡು ಡಿಕೆ ಸಾಹೇಬ....'. ಈ ಹಾಡನ್ನ ಕೂಡ ಸ್ವತಃ ಪ್ರೇಮ್ ಅವತರೇ ಹಾಡಿದ್ದರು. ಸುದರ್ಶನ್ ಸಾಹಿತ್ಯ ಬರೆದಿದ್ದರು. ಅರ್ಜುನ್ ಜನ್ಯ ಸಂಗೀತ ಇತ್ತು.

    ಲವ್ ಆಗೋಯ್ತೆ

    ಲವ್ ಆಗೋಯ್ತೆ

    ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದ 'ದಿ ವಿಲನ್' ಚಿತ್ರದಲ್ಲಿರುವ 'ಲವ್ ಆಗೋಯ್ತೆ....'ಹಾಡನ್ನ ಪ್ರೇಮ್ ಹಾಡಿದ್ದರು. ಸ್ವತಃ ಪ್ರೇಮ್ ಸಾಹಿತ್ಯ ಬರೆದು, ಹಾಡಿದ್ದರು. ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

    ಅಮ್ಮ...ಅಮ್ಮ....ಅಮ್ಮ...

    ಅಮ್ಮ...ಅಮ್ಮ....ಅಮ್ಮ...

    ಚಿರಂಜೀವಿ ಸರ್ಜಾ ಮತ್ತು ಅಧಿತಿ ಪ್ರಭುದೇವ ನಟಿಸಿರುವ 'ಸಿಂಗ' ಸಿನಿಮಾದಲ್ಲಿ ಪ್ರೇಮ್ ತಾಯಿಯ ಕುರಿತು ಒಂದು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ 'ಅಮ್ಮ...ಅಮ್ಮ....ಅಮ್ಮ...' ಹಾಡಿಗೆ ಧರ್ಮ್ ವಿಶ್ ಸಂಗೀತ ನೀಡಿದ್ದಾರೆ.

    English summary
    Kannada Director, actor, singer Prem Celebrating his birthday today. this special occasion, we are listed top ten songs of prem.
    Tuesday, October 22, 2019, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X