twitter
    For Quick Alerts
    ALLOW NOTIFICATIONS  
    For Daily Alerts

    ಕುಡ್ಲದ ’92.7 ಬಿಗ್ FM’ ನಲ್ಲಿ ವಾರ್ಷಿಕೋತ್ಸವದ ಕಲರವ

    |

    ತುಳುನಾಡಿನ ನಂಬರ್ ಒನ್ ರೇಡಿಯೋ ಸ್ಟೇಷನ್ ಎಂದೇ ಜನಪ್ರಿಯವಾಗಿರುವ 92.7 ಬಿಗ್ ಎಫ್ಎಂ ತನ್ನ ಏಳನೇ ವಾರ್ಷಿಕೋತ್ಸವವನ್ನು ಡಿಸೆಂಬರ್ ಆರರಂದು ಆಚರಿಸಿಕೊಂಡಿದೆ.

    ಲೈಫ್ ಸೂಪರ್ ಗುರು ಟ್ಯಾಗ್ ಲೈನ್ ನಲ್ಲಿ ಮೂಡಿ ಬರುತ್ತಿರುವ ಮತ್ತು ಕನ್ನಡ, ಹಿಂದಿ ಮತ್ತು ತುಳು ಭಾಷೆಗೆ ಮೀಸಲಾಗಿರುವ ಈ ಎಫ್ಎಂ ಸ್ಟೇಷನ್ ಕಾರ್ಯವೈಖರಿ ಕೇಳುಗರ ಪ್ರಶಂಸೆಗೆ ಪಾತ್ರವಾಗುತ್ತಿದೆ.

    ಕಳೆದ ಶನಿವಾರ (ಡಿ 6) ಬಿಗ್ ಎಫ್‌ಎಂ ತನ್ನ ರೇಡಿಯೋ ಜಾಕಿ, ಸಿಬ್ಬಂದಿ ಮತ್ತು ಕೇಳುಗರ ಜೊತೆ ಏಳನೇ ವಾರ್ಷಿಕೋತ್ಸವವನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಿಕೊಂಡಿತು. ಹೆಸರಾಂತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

    ಬಿಗ್ ಎಫ್‌ಎಂ ತನ್ನ ವಿಭಿನ್ನ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ, ನಾನೂ ಕೂಡಾ ಬಿಗ್ ಎಫ್‌ಎಂ ಕೇಳುಗರಲ್ಲಿ ಒಬ್ಬ, ಮಂಗಳೂರಿನಲ್ಲಿ ಇದ್ದಾಗ ತಪ್ಪದೇ ಬಿಗ್ ಎಫ್‌ಎಂ ಆಲಿಸುತ್ತೇನೆಂದು ಮಣಿಕಾಂತ್ ಕದ್ರಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

    Tulunadu Number one FM dtation 92.7 BIG FM celebrated 7th anniversary

    ಬೆಳಗ್ಗೆ 5 ರಿಂದ 8ರ ಅವಧಿಯಲ್ಲಿನ ದಯಾನಂದ್ ನಡೆಸಿ ಕೊಡುವ 'ಬೊಳ್ಳಿ ಬೊಲ್ಪು', 8 ರಿಂದ 12ರ ಸಮಯದಲ್ಲಿನ ರೂಪೇಶ್ ನಿರೂಪಣೆಯ 'ಬಿಗ್ ಕಾಫಿ', ಮಧ್ಯಾಹ್ನ 12 ರಿಂದ 4ಕ್ಕೆ ಬರುವ ಎರೋಲ್ ನಡೆಸಿಕೊಡುವ 'ಯು, ಮಿ ಎಂಡ್ ಲವ್ ಸಾಂಗ್ಸ್' 4 ರಿಂದ 8ರ ಅವಧಿಯಲ್ಲಿ ವರ್ಷಾ ನಡೆಸಿ ಕೊಡುವ 'ಬಿಗ್ ಟೈಂಪಾಸ್' ಬಿಗ್ ಎಫ್‌ಎಂ 92.7 ಸ್ಟೇಷನಿನ ಪ್ರಮುಖ ಕಾರ್ಯಕ್ರಮಗಳು.

    ಇದಲ್ಲದೇ, 8ರಿಂದ 10ರ ಸಮಯದಲ್ಲಿನ ನಿಲೇಶ್ ಮಿಶ್ರಾ ನಿರೂಪಣೆಯ 'ಯಾದೋಂಕಿ ಈಡಿಯಟ್ ಬಾಕ್ಸ್' ಮತ್ತು ರಾತ್ರಿ 10 ರಿಂದ ಮಧ್ಯರಾತ್ರಿ 12ರ ಸಮಯದಲ್ಲಿ ಅನ್ನು ಕಪೂರ್ ನಡೆಸಿಕೊಡುವ 'ಸುಹಾನ ಸಫರ್' ಕಾರ್ಯಕ್ರಮಗಳು ಭಾರೀ ಜನಪ್ರಿಯಗೊಳ್ಳುತ್ತಿದೆ ಎಂದು ಬಿಗ್ ಎಫ್ಎಂ RJ ಎರೋಲ್ 'ಫಿಲ್ಮೀಬೀಟ್' ಗೆ ತಿಳಿಸಿದ್ದಾರೆ.

    ಪ್ರತೀ ಶನಿವಾರ ಬೆಳಗ್ಗೆ ಎಂಟರಿಂದ ಹನ್ನೆರಡರ ವರೆಗೆ ದೇವದಾಸ್ ಕಾಪಿಕಾಡ್ ನಡೆಸಿಕೊಡುವ 'ಕಾಫಿ ವಿತ್ ಕಾಪಿಕಾಡ್ ' ಕಾರ್ಯಕ್ರಮ, 'ನಮ್ಮ ತುಳುವ ಸೂಪರ್ ಗುರು', ತುಳು ನಾಟಕಗಳು ದಿನದಿಂದ ದಿನಕ್ಕೆ ಜನಮನ್ನಣೆಗೊಳ್ಳುತ್ತಿದೆ ಎಂದು ಎರೋಲ್ ತಿಳಿಸಿದ್ದಾರೆ.

    English summary
    Tulunadu Number one FM station 92.7 BIG FM celebrated 7th anniversary on December 6.
    Tuesday, December 9, 2014, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X